ಮುಂಬೈ(ಜು.29): ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ರನ್ನರ್-ಅಪ್ ಆದ ಭಾರತ ತಂಡಕ್ಕೆ ಮಹಾರಾಷ್ಟ್ರ ಸರ್ಕಾರ ಬಂಪರ್ ಬಹುಮಾನ ಘೋಷಿಸಿದೆ. ಪ್ರತಿ ಆಟಗಾರ್ತಿಗೂ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಪೂನಮ್ ರಾವತ್, ಸ್ಮತಿ ಮಂಧನಾ ಹಾಗೂ ಮೋನಾ ಮೇಷ್ರಮ್ ಮಹಾರಾಷ್ಟ್ರ ಮೂಲದವರಾಗಿದ್ದಾರೆ. ಇದಕ್ಕೂ ಮುನ್ನ ಬಿಸಿಸಿಐ ಪ್ರತಿ ಆಟಗಾರ್ತಿಯರಿಗೆ ತಲಾ 50 ಲಕ್ಷ ರೂ ಘೋಷಣೆ ಮಾಡಿತ್ತು. ಅಲ್ಲದೇ ರೈಲ್ವೆ ಇಲಾಖೆ ತನ್ನ ಆಟಗಾರ್ತಿಯರಿಗೆ ತಲಾ 13 ಲಕ್ಷ ರೂ. ಬಹುಮಾನ ಘೋಷಿಸಿತು

ಮಿಥಾಲಿಗೆ ಸಿಗದ ಸೈಟು: 2005ರಲ್ಲಿ ಭಾರತ ತಂಡ ರನ್ನರ್-ಅಪ್ ಆದಾಗ ತಂಡವನ್ನು ಮುನ್ನಡೆಸಿದ್ದ ಮಿಥಾಲಿಗೆ ವೈ.ಎಸ್.ರಾಜಶೇಖರ ರೆಡ್ಡಿ ಅವರ ಆಂಧ್ರಪ್ರದೇಶ ಸರ್ಕಾರ ನಿವೇಶನವೊಂದನ್ನು ನೀಡುವುದಾಗಿ ಘೋಷಿಸಿತ್ತು. ಆದರೆ 12 ವರ್ಷಗಳು ಕಳೆದರೂ ಮಿಥಾಲಿಗೆ ನಿವೇಶನ ಸಿಕ್ಕಿಲ್ಲ.