ಏಕದಿನ ಕ್ರಿಕೆಟ್'ನಲ್ಲಿ 10 ಸಾವಿರ ರನ್ ಹೊಡೆಯುವುದೆಂದ್ರೆ ಅದು ಸಾಧನೆಯೇ ಸರಿ. ಈ ಸಾಧನೆಯನ್ನ 11 ಆಟಗಾರರು ಮಾಡಿದ್ದಾರೆ. ಆದ್ರೆ ಇನ್ನೂ ಐವರು ಈ ರೇಸ್'ನಲ್ಲಿದ್ದಾರೆ. ಇನ್ನೊಂದು ವರ್ಷದಲ್ಲಿ ಆ ಲಿಸ್ಟ್ ಸೇರಿಕೊಳ್ಳಲಿದ್ದಾರೆ. ಅದರಲ್ಲಿ ಮೂವರು ಭಾರತೀಯರೂ ಇದ್ದಾರೆ.
ಏಕದಿನ ಕ್ರಿಕೆಟ್'ನಲ್ಲಿ ಮೊದಲು 10 ಸಾವಿರ ರನ್ ಹೊಡೆದ ಬ್ಯಾಟ್ಸ್'ಮನ್ ಯಾರು ಅಂದಕ್ಷಣ ಥಟ್ ಅಂತ ಎಲ್ರೂ ಸಚಿನ್ ತೆಂಡೂಲ್ಕರ್ ಅಂತಾರೆ. ಕ್ರಿಕೆಟ್ ದೇವರು 10 ಸಹಸ್ರ ರನ್ ಹೊಡೆದ್ಮೇಲೆ ಆ ಲಿಸ್ಟ್ಗೆ 10 ಮಂದಿ ಸೇರಿಕೊಂಡಿದ್ದಾರೆ. ಸದ್ಯಕ್ಕೆ 11 ಆಟಗಾರರ ಏಕದಿನ ಕ್ರಿಕೆಟ್ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಹೊಡೆದಿದ್ದಾರೆ. ಈಗ ಈ ಲಿಸ್ಟ್ಗೆ ಇನ್ನೂ ಐವರು ಸೇರಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಆ ಪಂಚಪಾಂಡವರು ಟೆನ್ಡೂಲ್ಕರ್ ಆಗಲು ಸಜ್ಜಾಗಿದ್ದಾರೆ.
10 ಸಾವಿರ - ಧೋನಿಗೆ ಬೇಕು 242 ರನ್

ಮಹೇಂದ್ರ ಸಿಂಗ್ ಧೋನಿ ಸದ್ಯಕ್ಕೆ ಸಾಧಿಸಬೇಕಿರುವುದು ಏನು ಇಲ್ಲ. ಆಗ್ಲೇ ವಿಶ್ವ ಕ್ರಿಕೆಟ್ನಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆದ್ರೂ ಅವರು ಒಂಡೇ ಕ್ರಿಕೆಟ್ನಲ್ಲಿ 10 ಸಾವಿರ ರನ್ ಹೊಡೆದ್ರೆ ಅವರ ಹಿರಿಮೆ ಇನ್ನಷ್ಟು ಹೆಚ್ಚಲಿದೆ. ಅದಕ್ಕಾಗಿ ಅವರಿಗೆ ಬೇಕಿರುವುದು ಜಸ್ಟ್ 242 ರನ್. ಧೋನಿ, ಇದೇ ವರ್ಷ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 10 ಸಾವಿರ ರನ್ ಹೊಡೆದ 12ನೇ ಆಟಗಾರ ಎನಿಸಿಕೊಳ್ಳೋದು ಕನ್ಫರ್ಮ್.
10 ಸಾವಿರ - ಗೇಲ್ಗೆ ಬೇಕು 606 ರನ್

ವೆಸ್ಟ್ ಇಂಡೀಸ್'ನ ದೈತ್ಯ ಬ್ಯಾಟ್ಸ್ಮನ್ ಕ್ರಿಸ್ ಗೇಲ್'ಗೆ 10 ಸಾವಿರ ರನ್ ವಾಸನೆ ಬಡಿದಿದೆ. ಗೇಲ್ ಕಿರಿಕ್ ಪಾರ್ಟಿ ಆಗಿದ್ದರಿಂದ ಏಕದಿನ ತಂಡದಿಂದ ಕೈಬಿಡಲಾಗಿತ್ತು. ಕೇವಲ ಟಿ20ಗೆ ಸೀಮಿತವಾಗಿದ್ದ ಗೇಲ್'ರನ್ನ ಇತ್ತೀಚೆಗೆ ಏಕದಿನ ತಂಡಕ್ಕೂ ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ್ದಾರೆ. ಈಗ ಅವರು ಇನ್ನು 606 ರನ್ ಹೊಡೆದ್ರೆ 10 ಸಾವಿರ ರನ್ ಕ್ಲಬ್'ಗೆ ಸೇರಿಕೊಳ್ಳಲಿದ್ದಾರೆ.
10 ಸಾವಿರ - ಎಬಿಡಿಗೆ ಬೇಕು 681 ರನ್

2019ರ ಒಂಡೇ ವರ್ಲ್ಡ್'ಕಪ್ ಆಡ್ಬೇಕು. ಸೌತ್ ಆಫ್ರಿಕಾಗೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಡಬೇಕು. ಹರಿಣಗಳನ್ನ ಚೋಕರ್ಸ್ ಪಟ್ಟದಿಂದ ಕೆಳಗಿಳಿಸಬೇಕು ಅನ್ನೋ ಹಠಕ್ಕೆ ಬಿದ್ದಿರುವ ಎಬಿ ಡಿವಿಲಿಯರ್ಸ್ ಫೋಕಸ್ ಈಗ ಏಕದಿನ ಕ್ರಿಕೆಟ್ ಮಾತ್ರ. ಟೆಸ್ಟ್ ಕ್ರಿಕೆಟ್'ಗೆ ಗುಡ್ ಬೈ ಹೇಳಿ, ಹೆಚ್ಚಾಗಿ ಟಿ20 ಕ್ರಿಕೆಟೂ ಆಡದ ಎಬಿಡಿ, ಒಂಡೇ ಕ್ರಿಕೆಟ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಅದ್ಭುತ ಫಾರ್ಮ್ನಲ್ಲಿರುವ ಡಿವಿಲಿಯರ್ಸ್ ಇನ್ನು 681 ರನ್ ಹೊಡೆದ್ರೆ 10 ಸಾವಿರ ರನ್ ಸಾಧನೆ ಮಾಡಲಿದ್ದಾರೆ. ಅವರ ಫಾರ್ಮ್ ನೋಡಿದ್ರೆ ಕೆಲವೇ ದಿನಗಳಲ್ಲಿ ಈ ಮೈಲಿಗಲ್ಲು ಮುಟ್ಟಲಿದ್ದಾರೆ.
10 ಸಾವಿರ - ಕೊಹ್ಲಿಗೆ ಬೇಕು 1233 ರನ್

ಸದ್ಯ ಒಂಡೇ ಕ್ರಿಕೆಟ್'ನಲ್ಲಿ ವರ್ಲ್ಡ್ ನಂಬರ್ ವನ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ. 10 ಸಾವಿರ ರನ್ ಬ್ರೇಕ್ ಮಾಡೋ ಲಿಸ್ಟ್ನಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಹೋಗುತ್ತಿರುವ ವೇಗ ನೋಡಿದ್ರೆ ಮುಂದಿನ ವರ್ಷ 10 ಸಹಸ್ರ ರನ್ ಮುಟ್ಟಲಿದ್ದಾರೆ. ಅದಕ್ಕಾಗಿ ಅವರಿಗೆ ಬೇಕಿರೋದು 1233 ರನ್. 2019ರ ವಿಶ್ವಕಪ್ ಒಳಗೆಯೇ ಅವರು ಈ ದಾಖಲೆ ಮಾಡಲಿದ್ದಾರೆ.
10 ಸಾವಿರ - ಆಮ್ಲಾಗೆ ಬೇಕು 2814 ರನ್

ಸೌತ್ ಆಫ್ರಿಕಾದ ಓಪನಿಂಗ್ ಬ್ಯಾಟ್ಸ್ಮನ್ ಹಶೀಮ್ ಆಮ್ಲಾ 10 ಸಾವಿರ ರನ್ ಕ್ಲಬ್ ಸೇರಲು ತುಂಬಾ ದೂರವೇ ಇದ್ದಾರೆ. ಆದ್ರೆ ಅವರು ಈ ಸಾಧನೆ ಮಾಡೇ ಮಾಡ್ತಾರೆ. ಯಾಕೆ ಗೊತ್ತಾ..? ಅವರ ಫಿಟ್ನೆಸ್ ಮತ್ತು ಫಾರ್ಮ್ ಅದ್ಭುತವಾಗಿದೆ. ಅವರು ಸಹ 2019ರ ವಿಶ್ವಕಪ್ಗೆ ಆಫ್ರಿಕಾದ ಬ್ಯಾಟಿಂಗ್ ಟ್ರಂಪ್ಕಾರ್ಡ್. ಅವರು ರನ್ ಗಳಿಸುತ್ತಿರುವ ವೇಗ ನೋಡಿದ್ರೆ ವರ್ಲ್ಡ್ಕಪ್ನಲ್ಲೇ ಈ ಸಾಧನೆ ಮಾಡಿದ್ರು ಆಶ್ಚರ್ಯವಿಲ್ಲ.
ಈ ಲಿಸ್ಟ್'ನಲ್ಲಿ ಪಂಜಾಬ್ ಪುತ್ತರ್ ಯುವರಾಜ್ ಸಿಂಗ್ ಸಹ ಇದ್ದಾರೆ. ಅವರಿಗೆ 1299 ರನ್ ಬೇಕು. ಆದ್ರೆ ಅವರ ಕೆರಿಯರ್ ಕವಲು ದಾರಿ ಹಿಡಿದಿರೋದ್ರಿಂದ ಅವರಿಂದ ಈ ದಾಖಲೆ ಅಸಾಧ್ಯವೇ ಸರಿ. ಒಟ್ನಲ್ಲಿ ಈ ಐವರು 10 ಸಾವಿರ ರನ್ ಕ್ಲಬ್ ಸೇರಿವುದನ್ನ ನೋಡಲು ವಿಶ್ವ ಕ್ರಿಕೆಟ್ ಜತನದಿಂದ ಕಾಯ್ತಿದೆ.
