ನ್ಯೂಜಿಲೆಂಡ್‌'ನಲ್ಲಿ ಪ್ರಸಕ್ತ ನಡೆಯುತ್ತಿರುವ ಸೂಪರ್ ಸ್ಮಾಶ್ ಟಿ20 ಟೂರ್ನಿಯಲ್ಲಿ ಎರಡು ತಂಡಗಳು 40 ಓವರ್‌ಗಳಲ್ಲಿ 497ರನ್‌ಗಳಿಸಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ನಿರ್ಮಿಸಿವೆ.

ನವದೆಹಲಿ(ಡಿ.22): ವಿಶ್ವ ಕ್ರಿಕೆಟ್ ರಂಗದಲ್ಲಿ ದಾಖಲೆಗಳು ಎನ್ನುವುದು ಸರ್ವೇ ಸಾಮಾನ್ಯವಾಗಿದೆ. ಇದುವರೆಗೂ ಚುಟುಕು ಆಟದಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಶ್ರೇಯ ಭಾರತ-ವೆಸ್ಟ್ ಇಂಡೀಸ್ ಪಂದ್ಯದಾಗಿತ್ತು. ಆದರೆ ಇದೀಗ ಈ ಸಾಧನೆಗೆ ನ್ಯೂಜಿಲೆಂಡ್‌ನ ಕೌಂಟಿ ಕ್ರಿಕೆಟ್ ತಂಡಗಳಾದ ಒಟಾಗೊ ವೋಲ್ಟ್ಸ್ ಮತ್ತು ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡಗಳು ಪಾತ್ರವಾಗಿವೆ. ಹೌದು ಈ ದಾಖಲೆಯ ಪಂದ್ಯಕ್ಕೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಸಾಕ್ಷಿಯಾಗಿದ್ದಾರೆ.

ನ್ಯೂಜಿಲೆಂಡ್‌'ನಲ್ಲಿ ಪ್ರಸಕ್ತ ನಡೆಯುತ್ತಿರುವ ಸೂಪರ್ ಸ್ಮಾಶ್ ಟಿ20 ಟೂರ್ನಿಯಲ್ಲಿ ಎರಡು ತಂಡಗಳು 40 ಓವರ್‌ಗಳಲ್ಲಿ 497ರನ್‌ಗಳಿಸಿ ಅತಿ ಹೆಚ್ಚು ರನ್‌ಗಳಿಸಿದ ದಾಖಲೆ ನಿರ್ಮಿಸಿವೆ.

ಈ ಹಿಂದೆ ಲೌಡರ್‌'ಹಿಲ್‌ನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು 489ರನ್‌ಗಳಿಸಿದ್ದು ಇಲ್ಲಿಯವರೆಗಿನ ಸಾಧನೆ ಎನಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಒಟಾಗೊ ವೋಲ್ಟ್ಸ್ ತಂಡ 20 ಓವರ್‌ಗಳಲ್ಲಿ 249ರನ್‌ಗಳಿಸಿತು.

ಒಟಾಗೊ ತಂಡದ ಸ್ಪೋಟಕ ಬ್ಯಾಟ್ಸ್‌ಮನ್ ರುದರ್‌ಫೋರ್ಡ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ರುದರ್‌ಫೋರ್ಡ್ ಕೇವಲ 77 ಎಸೆತಗಳಲ್ಲಿ 9 ಬೌಂಡರಿ ಮತ್ತು 8 ಸಿಕ್ಸರ್‌ಗಳಿಂದ 106ರನ್‌ಗಳಿಸಿದರು.

ನಂತರ ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡಕ್ಕೆ ಲಂಕಾದ ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಸಾಥ್ ನೀಡಿದರು. ಆರಂಭಿಕ ಜಯವರ್ಧನೆ ಪ್ರಭಾವಿ ಬ್ಯಾಟಿಂಗ್‌'ನಿಂದಾಗಿ ಸೆಂಟ್ರಲ್ ತಂಡ ಮೊದಲ 5 ಓವರ್‌ಗಳಲ್ಲಿ 70ರನ್‌ಗಳಿಸಿ ಎದುರಾಳಿ ಒಟಾಗೊ ತಂಡಕ್ಕೆ ತಿರುಗೇಟು ನೀಡುವ ಮುನ್ಸೂಚನೆ ತೋರಿತು. ನಂತರ 3ನೇ ವಿಕೆಟ್‌'ಗೆ ಜಯವರ್ಧನೆ ಮತ್ತು ಟಿ.ಸಿ. ಬ್ರೂಸ್ 124ರನ್‌ಗಳ ಜತೆಯಾಟ ನಿರ್ವಹಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರೂ ಜಯವರ್ಧನೆ ಕೌಂಟಿ ಕ್ರಿಕೆಟ್‌ನಲ್ಲಿ ಪ್ರಭಾವಿ ಪ್ರದರ್ಶನ ತೋರಿದರು.

ಜಯವರ್ಧನೆ 89 ಎಸೆತಗಳಿಂದ 12 ಬೌಂಡರಿ, 6 ಸಿಕ್ಸರ್ ಸಹಿತ 116ರನ್‌'ಗಳಿಸಿದರು. ಅಂತಿಮವಾಗಿ ಕೊನೆಯ ಓವರ್‌ನಲ್ಲಿ ೧೦ ರನ್‌'ಗಳಿಸಬೇಕಿದ್ದ ಸೆಂಟ್ರಲ್ ತಂಡ 9 ರನ್‌'ಗಳಿಸಿ 1ರನ್‌ನಿಂದ ವಿರೋಚಿತ ಸೋಲು ಕಂಡಿತು. ಈ ಮೂಲಕ ಜಯವರ್ಧನೆ ಶತಕ ವ್ಯರ್ಥವಾದರೂ, ಕ್ರೀಡಾಭಿಮಾನಿಗಳಿಗೆ ಭರಪೂರ ಮನೋರಂಜನೆ ಸಿಕ್ಕಿದ್ದಂತೂ ಸುಳ್ಳಲ್ಲ.