ಪಂದ್ಯದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಇದು ಖಂಡಿತವಾಗಿಯೂ ಮ್ಯಾಚ್ ಫಿಕ್ಸಿಂಗ್ ಎಂದು ಪ್ರತಿಯೊಬ್ಬರೂ ಪ್ರತಿಕ್ರಿಯಿಸುತ್ತಿದ್ದಾರೆ.

ದುಬೈ(ಫೆ.01): ಎದುರಾಳಿ ತಂಡ ವಿಕೆಟ್ ಕಬಳಿಸಲು ಪ್ರಯತ್ನಿಸದಿದ್ದರೂ, ಬ್ಯಾಟ್ಸ್‌'ಮನ್‌'ಗಳೇ ರನೌಟ್, ಸ್ಟಂಪ್ ಆಗುವ ಮೂಲಕ ವಿಕೆಟ್ ಕಳೆದುಕೊಂಡ ಪ್ರಸಂಗ ಯುಎಇನ ಆಲ್-ಟೈಮ್ ಅಜ್ಮನ್ ಲೀಗ್‌'ನಲ್ಲಿ ನಡೆದಿದೆ.

Scroll to load tweet…

ಪಂದ್ಯದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಇದು ಖಂಡಿತವಾಗಿಯೂ ಮ್ಯಾಚ್ ಫಿಕ್ಸಿಂಗ್ ಎಂದು ಪ್ರತಿಯೊಬ್ಬರೂ ಪ್ರತಿಕ್ರಿಯಿಸುತ್ತಿದ್ದಾರೆ.

ಐಸಿಸಿ ಸಹ ಈ ಪಂದ್ಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಫಿಕ್ಸಿಂಗ್ ನಡೆದಿದೆಯೇ ಎನ್ನುವುದನ್ನು ಪತ್ತೆ ಮಾಡಲು ತನಿಖೆ ಆರಂಭಿಸಿದೆ. ಯುಇಎ ಕ್ರಿಕೆಟ್ ಮಂಡಳಿಯಿಂದ ಮಾನ್ಯತೆ ಪಡೆಯದೇ ಆಯೋಜಿಸಿದ್ದ ಖಾಸಗಿ ಲೀಗ್ ಇದಾಗಿದ್ದು, ದುಬೈ ಸ್ಟಾರ್ಸ್‌ ನೀಡಿದ್ದ 136 ರನ್ ಗುರಿ ಬೆನ್ನಟ್ಟಲು ಇಳಿದಿದ್ದ ಶಾರ್ಜಾ ವಾರಿ ಯರ್ಸ್‌ ಕೇವಲ 46 ರನ್‌'ಗಳಿಗೆ ಆಲೌಟ್ ಆಗಿತ್ತು. ಈ ವಿಡಿಯೋ ವೀಕ್ಷಿಸಿದ ಅಂತಾರಾಷ್ಟ್ರೀಯ ಕ್ರಿಕೆಟಿಗರು ಸಹ ಸಾಮಾಜಿಕ ತಾಣಗಳಲ್ಲಿ ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ್ದಾರೆ.