Asianet Suvarna News Asianet Suvarna News

ರಿಯೋ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್​ಗೆ 4 ಕೋಟಿ ಬಹುಮಾನ

ಹರ್ಯಾಣದ ಸುವರ್ಣ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರು ಹರ್ಯಾಣ ಸರ್ಕಾರದ ವತಿಯಿಂದ 4 ಕೋಟಿ ರುಪಾಯಿ ನಗದು ಬಹುಮಾನವನ್ನು ದೀಪಾ ಮಲಿಕ್​ಗೆ ಹಸ್ತಾಂತರಿಸಿದರು. 

4 million prize for Deepa Malik

ನವದೆಹಲಿ(ನ.02): ರಿಯೋ ಪ್ಯಾರಾಲಿಂಪಿಕ್ ನಲ್ಲಿ ಬೆಳ್ಳಿ ಪದಕ ವಿಜೇತೆ ದೀಪಾ ಮಲಿಕ್​ಗೆ 4 ಕೋಟಿ ಮೊತ್ತದ ಚೆಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸಿದ್ದಾರೆ.

ಹರ್ಯಾಣದ ಸುವರ್ಣ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ ಅವರು ಹರ್ಯಾಣ ಸರ್ಕಾರದ ವತಿಯಿಂದ 4 ಕೋಟಿ ರುಪಾಯಿ ನಗದು ಬಹುಮಾನವನ್ನು ದೀಪಾ ಮಲಿಕ್​ಗೆ ಹಸ್ತಾಂತರಿಸಿದರು. 

ಪ್ಯಾರಾಲಿಂಪಿಕ್ ಶಾಟ್ ಪುಟ್ ನಲ್ಲಿ 4.61 ಮೀಟರ್ ಎಸೆತದೊಂದಿಗೆ 46 ವರ್ಷದ ದೀಪಾ 2ನೇ ಸ್ಥಾನ ಪಡೆದಿದ್ದರು. ಶಾಟ್ ಪುಟ್ ಮಾತ್ರವಲ್ಲದೆ ಜಾವೆಲಿನ್ ಥ್ರೋ ಮತ್ತು ಸ್ವಿಮ್ಮಿಂಗ್ ಕ್ರೀಡೆಗಳಲ್ಲೂ ದೀಪಾ ಭಾಗವಹಿಸಿ ಗಮನ ಸೆಳೆದಿದ್ದರು. 

Follow Us:
Download App:
  • android
  • ios