Asianet Suvarna News Asianet Suvarna News

5 ದಿನಕ್ಕೆ ತಿಲಾಂಜಲಿ, ಶುರುವಾಗಲಿದೆ 4 ದಿನಗಳ ಟೆಸ್ಟ್ ! ಏನೆನಿವೆ ಗೊತ್ತೆ ನಿಯಮಗಳು

.

4 day Test match What changes

ಐಸಿಸಿ 4 ದಿನಗಳ ಟೆಸ್ಟ್ ಪಂದ್ಯದ ಮಾದರಿಯನ್ನು ಪ್ರಕಟಿಸಿದೆ. ಡಿ.26ರಿಂದ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ತಂಡಗಳು ಚೊಚ್ಚಲ 4 ದಿನಗಳ ಟೆಸ್ಟ್'ನಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ನೂತನ ನಿಯಮಗಳು ಅನ್ವಯವಾಗಲಿವೆ. 5 ದಿನಗಳ ಪಂದ್ಯಗಳಲ್ಲಿ ಪ್ರತಿ ದಿನ 90 ಓವರ್‌ಗಳ ಆಟ ನಡೆಯಲಿದ್ದು, 4 ದಿನಗಳ ಟೆಸ್ಟ್'ನಲ್ಲಿ ದಿನಕ್ಕೆ 98 ಓವರ್ ಆಟವನ್ನು ನಿಗದಿಪಡಿಸಲಾಗಿದೆ.

ಪಂದ್ಯದಲ್ಲಿ ಒಟ್ಟಾರೆ 392 ಓವರ್ ಆಟಕ್ಕೆ ಅವಕಾಶವಿದ್ದು, 5 ದಿನಗಳ ಟೆಸ್ಟ್'ಗಳಿಗಿಂತ 58 ಓವರ್ ಕಡಿಮೆ ಆಟ ನಡೆಯಲಿದೆ. ದಿನವೊಂದರಲ್ಲಿ 90ರ ಬದಲು 98 ಓವರ್ ಪೂರ್ಣಗೊಳಿಸಬೇಕಿರುವ ಕಾರಣ, ಹೆಚ್ಚುವರಿ 8 ಓವರ್‌ಗಾಗಿ ದಿನದಾಟವನ್ನು ಅರ್ಧಗಂಟೆ ಹೆಚ್ಚಿಸಲಾಗುತ್ತದೆ. ಮೊದಲೆರಡು ಅವಧಿಗಳನ್ನು 2 ಗಂಟೆ ಬದಲು 2 ಗಂಟೆ 15 ನಿಮಿಷ ನಡೆಸುವುದಾಗಿ ಐಸಿಸಿ ತಿಳಿಸಿದೆ.

ಫಲಿತಾಂಶಕ್ಕೆ ಹೆಚ್ಚಿನ ಆದ್ಯತೆ: ಟೆಸ್ಟ್ ಕ್ರಿಕೆಟ್‌ಗೆ ಹೊಸ ರೂಪ ನೀಡಲು ಪ್ರಯೋಗಗಳನ್ನು ನಡೆಸುತ್ತಿರುವ ಐಸಿಸಿ, ಫಾಲೋ ಆನ್ ನಿಯಮವನ್ನು 200 ರನ್‌ಗಳಿಂದ 150ಕ್ಕಿಳಿಸಿದೆ. ಫಲಿತಾಂಶಕ್ಕೆ ಒತ್ತು ನೀಡುವ ತಂಡಗಳಿಗೆ ಈ ನಿಯಮ ಅನುಕೂಲವಾಗಲಿದೆ ಎಂದು ಐಸಿಸಿ ತಿಳಿಸಿದೆ. ಇನ್ನುಳಿದಂತೆ 5 ದಿನಗಳ ಟೆಸ್ಟ್ ನಿಯಮಗಳೆಲ್ಲವೂ ಅನ್ವಯವಾಗುತ್ತದೆ. ಇತ್ತೀಚೆಗಷ್ಟೇ ಐಸಿಸಿ, 2019ರ ಏಕದಿನ ವಿಶ್ವಕಪ್'ವರೆಗೂ ಪ್ರಾಯೋಗಿಕವಾಗಿ 4 ದಿನಗಳ ಟೆಸ್ಟ್'ಗಳನ್ನು ಆಯೋಜಿಸಲು ತನ್ನ ಸದಸ್ಯ ರಾಷ್ಟ್ರಗಳಿಗೆ ತಿಳಿಸಿತ್ತು.

Follow Us:
Download App:
  • android
  • ios