Asianet Suvarna News Asianet Suvarna News

ರಿಯೋ ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ 3ನೇ ಪದಕ

3rd medal for India at the Paralympics in Rio

ರಿಯೋ ಡಿ ಜನೈರೊ(ಸೆ.13): ರಿಯೋ ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಹೈ ಜಂಪ್ ನಲ್ಲಿ ಎರಡು ಪದಕ ಪಡೆದ ಬೆನ್ನ ಹಿಂದೆಯೇ ಮತ್ತೊಂದು ಪದಕ ಭಾರತದ ಪಾಲಾಗಿದೆ. 

ಮಹಿಳಾ ಶಾಟ್​​ಪುಟ್​​ ಸ್ಪರ್ಧೆಯಲ್ಲಿ ದೀಪಾ ಮಲೀಕ್​​ ಬೆಳ್ಳಿ ಪದಕ ಗೆದ್ಕೊಂಡಿದ್ದಾರೆ. 4.61 ಮೀಟರ್​​ ದೂರಕ್ಕೆ ಶಾಟ್​ಪುಟ್​​ ಎಸೆದ ದೀಪಾ ರಜತಕಕ್ಕೆ ಕೊರಳೊಡ್ಡಿದ್ದಾರೆ.

ಇದು ಅವ್ರ ವೈಯಕ್ತಿಕ ದಾಖಲೆಯ ಎಸೆತ ಕೂಡ ಹೌದು. ಇನ್ನು ಹೈ ಜಂಪ್​​ನಲ್ಲಿ ಭಾರತ 2 ಪದಕ ಗೆದ್ಕೊಂಡಿತ್ತು.  ಇದರೊಂದಿಗೆ ರಿಯೋ ಪ್ಯಾರಾ ಒಲಿಂಪಿಕ್ಸ್​​ನಲ್ಲಿ ಭಾರತದ ಪದಕದ ಸಂಖ್ಯೆ 3ಕ್ಕೇ ಏರಿದೆ. ಭಾರತಕ್ಕೆ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಲಭ್ಯವಾಗಿದೆ.

Follow Us:
Download App:
  • android
  • ios