ಇಂದೋರ್ ಟೆಸ್ಟ್ ನಲ್ಲಿ ಭಾರತೀಯರು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಹಿಡಿತ ಸಾಧಿಸಿದ್ದು, ಪಂದ್ಯ ಗೆಲ್ಲುವ ಮುನ್ಸುಚನೆ ನೀಡಿದ್ದಾರೆ.  2ನೇ ದಿನವೇ ಭಾರತೀಯರನ್ನು ಕಾಡಿದ್ದ ನ್ಯೂಜಿಲೆಂಡ್ ಆರಂಭಿಕರು 3ನೇ ದಿನವೂ ಗೋಳು ಹೋಯ್ದುಕೊಂಡರು. ಮಾರ್ಟಿನ್ ಗುಪ್ಟಿಲ್ ಮತ್ತು ಟಾಮ್ ಲಾಥಮ್​ 118 ರನ್​ಗಳ ಜೊತೆಯಾಟವಾಡಿ ಟೀಮ್ ಇಂಡಿಯಾಕ್ಕೆ ಸವಾಲು ಹಾಕಿದ್ದರು

ಇಂದೋರ್(ಅ.10): 3ನೇ ಹಾಗೂ ಕೊನೆ ಟೆಸ್ಟ್​ ಪಂದ್ಯ ಟೀಮ್ ಇಂಡಿಯಾ ಹಿಡಿತದಲ್ಲಿದೆ. ಕಿವೀಸ್ 299 ರನ್​ಗೆ ಆಲೌಟ್ ಆಗಿ 258 ರನ್​ಗೆ ಹಿನ್ನಡೆ ಅನುಭವಿದ್ದು, ಭಾರತ ತಂಡ ಈಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದೆ. 

ಸೆಕೆಂಡ್ ಇನ್ನಿಂಗ್ಸ್'ನಲ್ಲಿ ಟೀಮ್ ಇಂಡಿಯಾ 18 ರನ್ ಗಳಿಸಿದೆ. ಮುರುಳಿ ವಿಜಯ್(11) ಮತ್ತು ಚೇತೆಶ್ವರ್ ಪೂಜರ್ (1) ವಿಕೆಟ್ ಕಾಯ್ದು ಕೊಂಡಿದ್ದಾರೆ. ಮುರುಳಿ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಗಂಭೀರ್ 6 ರನ್ ಗಳಿಸಿದ್ದ ಸಂದರ್ಭದಲ್ಲಿ ಗಾಯಗೊಂಡು ಪೆವೆಲಿಯನ್ ಸೇರಿದ್ದಾರೆ. 

ಇಂದೋರ್ ಟೆಸ್ಟ್ ನಲ್ಲಿ ಭಾರತೀಯರು ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಹಿಡಿತ ಸಾಧಿಸಿದ್ದು, ಪಂದ್ಯ ಗೆಲ್ಲುವ ಮುನ್ಸುಚನೆ ನೀಡಿದ್ದಾರೆ. 2ನೇ ದಿನವೇ ಭಾರತೀಯರನ್ನು ಕಾಡಿದ್ದ ನ್ಯೂಜಿಲೆಂಡ್ ಆರಂಭಿಕರು 3ನೇ ದಿನವೂ ಗೋಳು ಹೋಯ್ದುಕೊಂಡರು. ಮಾರ್ಟಿನ್ ಗುಪ್ಟಿಲ್ ಮತ್ತು ಟಾಮ್ ಲಾಥಮ್​ 118 ರನ್​ಗಳ ಜೊತೆಯಾಟವಾಡಿ ಟೀಮ್ ಇಂಡಿಯಾಕ್ಕೆ ಸವಾಲು ಹಾಕಿದ್ದರು

30 ರನ್ ಅಂತರದಲ್ಲಿ 5 ವಿಕೆಟ್ ಪತನ 
ಆದರೆ 118 ರನ್​ಗೆ ಒಂದು ವಿಕೆಟ್ ಕಳೆದುಕೊಳ್ಳದೆ ಉತ್ತಮವಾಗಿಯೇ ಆಡ್ತಿದ್ದ ಕಿವೀಸ್, ಇದಕ್ಕಿಂದಂತೆ ದಿಢೀರ್ ಕುಸಿತ ಕಂಡಿತು. ಆರ್. ಅಶ್ವಿನ್ ಸ್ಪಿನ್ ಮ್ಯಾಜಿಕ್'ಗೆ ಮರುಳಾಗಿ ಒಬ್ಬರ ದಿಂದೆ ಒಬ್ಬರು ವಿಕೆಟ್ ಒಪ್ಪಿಸಿ ಹೊರ ನಡೆದರು. 30 ರನ್​ಗಳ ಅಂತರದಲ್ಲಿ 5 ವಿಕೆಟ್​ ಉಳಿದ್ದು ಕಿವೀಸ್ ಗೆ ಮಾರಕವಾಗಿಯಿತು. 

148 ರನ್​ಗೆ 5 ವಿಕೆಟ್ ಕಳೆದುಕೊಂಡ ಕಿವೀಸ್​ಗೆ ಜೇಮ್ಸ್ ನೀಶಮ್ ಮತ್ತು ವಾಟ್ಲಿಂಗ್​ ಆಸರೆಯಾದರು, ಇವರಿಬ್ಬರು ಸೇರಿಕೊಂಡು ತಂಡದ ಮೊತ್ತವನ್ನ 200ರ ಗಡಿ ಮುಟ್ಟಿಸಿದರು. ಆದರೆ 23 ರನ್ ಗಳಿಸಿ ಉತ್ತಮವಾಗಿ ಆಡ್ತಿದ್ದ ವಾಟ್ಲಿಂಗ್​ ಅವರನ್ನ ರವೀಂದ್ರ ಜಡೇಜಾ ಔಟ್ ಮಾಡಿದರು, ಬಳಿಕ ಮಿಚೆಲ್ ಸ್ಯಾಂಟ್ನರ್ ಸೇರಿಕೊಂಡು ನೀಶಮ್​ ಅರ್ಧಶತಕ ದಾಖಲಿಸಿದರು. 

ಹಾಫ್ ಸೆಂಚುರಿ ಬಾರಿಸಿದ್ದ ನೀಶಮ್​ಗೆ ಅಶ್ವಿನ್ ಪೆವಿಲಿಯನ್ ತೋರಿಸಿದರು, ಬಾಲಂಗೋಚಿಗಳು ಹೆಚ್ಚು ನಿಲ್ಲಲು ಅಶ್ವಿನ್ ಬಿಡಲಿಲ್ಲ. ಜೀತನ್ ಪಟೇಲ್ ಅವರನ್ನ ರನೌಟ್ ಮಾಡಿದ ಅಶ್ವಿನ್, ಟ್ರೆಂಟ್ ಬೋಲ್ಟ್ ಅವರನ್ನೂ ಔಟ್ ಮಾಡೋ ಮೂಲ್ಕ ಒಟ್ಟು 6 ವಿಕೆಟ್ ಪಡೆದರು.