Asianet Suvarna News Asianet Suvarna News

ಐಪಿಎಲ್ ಹರಾಜು : 3 ವಿದೇಶಿ ಆಟಗಾರರ ಮೇಲೆ ಫ್ರಾಂಚೈಸಿಗಳ ಕಣ್ಣು!

2019ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಡಿಸೆಂಬರ್ 17 ಹಾಗೂ 18 ರಂದು ಐಪಿಎಲ್ ಹರಾಜು ನಡೆಯಲಿದೆ. ಇದೀಗ ಮೂವರು ವಿದೇಶಿ ಆಟಗಾರರ ಮೇಲೆ ಫ್ರಾಂಚೈಸಿಗಳು ಚಿತ್ತ ನೆಟ್ಟಿದ್ದಾರೆ. 

3 Overseas players who can lead in the upcoming IPL Auction
Author
Bengaluru, First Published Nov 19, 2018, 11:11 AM IST

ಮುಂಬೈ(ನ.19): 2019ರ ಐಪಿಎಲ್ ಟೂರ್ನಿಗೆ ಸಿದ್ಧತೆ ಆರಂಭಿಸಿರುವ ಫ್ರಾಂಚೈಸಿಗಳು ಈಗಾಗಲೇ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ಇದೀಗ ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಹರಾಜಿನ ಮೇಲೆ ಕಣ್ಣಿಟ್ಟಿದೆ. ಈ ಬಾರಿ ಮೂವರು ವಿದೇಶಿ ಆಟಗಾರರು ಗರಿಷ್ಠ ಮೊತ್ತಕ್ಕೆ ಹರಜಾಗೋ ಸಾಧ್ಯತೆ ಇದೆ.

1 ಸ್ಯಾಮ್ ಕುರ್ರನ್
ಇತ್ತೀಚೆಗಿ ಭಾರತ  ಪ್ರವಾಸದಲ್ಲಿ ಇಂಗ್ಲೆಂಡ್ ಕ್ರಿಕೆಟಿಗ ಸ್ಯಾಮ್ ಕುರ್ರನ್ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. 4 ಪಂದ್ಯದಿಂದ ಈ ಇಂಗ್ಲೆಂಡ್ ವೇಗಿ 11 ವಿಕೆಟ್ ಕಬಳಿಸಿದರು. ಇಷ್ಟೇ ಅಲ್ಲ 7 ಇನ್ನಿಂಗ್ಸ್‌ನಿಂದ 272 ರನ್ ಸಿಡಿಸಿದ್ದರು. ಆಲ್ರೌಂಡರ್ ಪ್ರದರ್ಶನ ನೀಡಿರುವ ಕುರ್ರನ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜಾಗೋದರಲ್ಲಿ ಯಾವುದೇ ಅನುಮಾನವಿಲ್ಲ.

2 ಲ್ಯೂಕ್ ರೊಂಚಿ
ನ್ಯೂಜಿಲೆಂಡ್ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಲ್ಯೂಕ್ ರೊಂಚಿ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾಗೋ ಸಾಧ್ಯತೆ ಇದೆ. ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರದರ್ಶ ನೀಡಿರುವ ಲ್ಯೂಕ್ ರೊಂಚಿ, ಕೆರೆಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲೂ ಮಿಂಚಿದ್ದರು.

3 ಶಿಮ್ರೊನ್ ಹೆಟ್ಮೆಯರ್
ಟಿ20 ಕ್ರಿಕೆಟ್‌ಗೆ ಹೆಸರುವಾಸಿಯಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಹಾರ್ಡ್ ಹಿಟ್ಟಿಂಗ್ ಬ್ಯಾಟಿಂಗ್ ಮೂಲಕವೇ ಎದುರಾಳಿಗೆ ನಡುಕು ಹುಟ್ಟಿಸುತ್ತಾರೆ. ಇತ್ತೀಚೆಗಿನ ಭಾರತ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ ನೀಡಿದರೂ, ಶಿಮ್ರೊನ್ ಹೆಟ್ಮೆಯರ್ ಅಬ್ಬರಿಸಿದ್ದರು. ಮೊದಲ ಏಕದಿನ ಪಂದ್ಯದಲ್ಲಿ 106 ರನ್ ಸಿಡಿಸಿದರೆ, ದ್ವಿತೀಯ ಪಂದ್ಯದಲ್ಲಿ 94 ರನ್ ಬಾರಿಸಿದ್ದರು. ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಶಿಮ್ರೊನ್, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾಗೋ ಸಾಧ್ಯತೆ ಹೆಚ್ಚಿದೆ.

Follow Us:
Download App:
  • android
  • ios