ಟ್ರಿನಿಡಾಡ್(ಆ.11): ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ದ ಏಕದಿನ ಸರಣಿಯ ಮೊದಲ ಪಂದ್ಯ ಫಲಿತಾಂಶ ಕಾಣದೇ ರದ್ದಾಗಿದೆ. ಹೀಗಾಗಿ 2ನೇ ಏಕದಿನ ಪಂದ್ಯ  ತೀವ್ರ ಮಹತ್ವ ಪಡೆದುಕೊಂಡಿದೆ. ವಿಂಡೀಸ್ ವಿರುದ್ದ ಟಾಸ್ ಗೆದ್ದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿದೆ. ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ 2ನೇ ಪಂದ್ಯದಲ್ಲೂ ಆಡುತ್ತಿದೆ.\

 

ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ವಿಂಡೀಸ್ ತಂಡ 13 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 54 ರನ್ ಸಿಡಿಸಿತ್ತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಫಲಿತಾಂಶ ಕಾಣದೇ ರದ್ದಾಯಿತು. ಏಕದಿನ ಸರಣಿಗೂ ಮೊದಲು ನಡೆದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 3-0 ಅಂತರದಿಂದ ಸರಣಿ ಗೆದ್ದಕೊಂಡಿದೆ.