ಕ್ರೀಡಾಂಗಣದಲ್ಲೇ ಇಬ್ಬರು ಕ್ರಿಕೆಟ್ ಕೋಚ್‌'ಗಳನ್ನು ಕೊಲೆ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಬಳಿ ಇರುವ ಲಾಡಿಯಮ್ ಓವಲ್‌'ನಲ್ಲಿ ಗುರುವಾರ ನಡೆದಿದೆ. ಗೀವನ್ ನೊಸಿ(24), ಚಾರ್ಲ್ಸನ್ ಮಸೆಕೊ (26) ಕೊಲೆಯಾದವರು.
ಪ್ರಿಟೋರಿಯಾ(ಸೆ.15): ಕ್ರೀಡಾಂಗಣದಲ್ಲೇ ಇಬ್ಬರು ಕ್ರಿಕೆಟ್ ಕೋಚ್'ಗಳನ್ನು ಕೊಲೆ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ಬಳಿ ಇರುವ ಲಾಡಿಯಮ್ ಓವಲ್'ನಲ್ಲಿ ಗುರುವಾರ ನಡೆದಿದೆ. ಗೀವನ್ ನೊಸಿ(24), ಚಾರ್ಲ್ಸನ್ ಮಸೆಕೊ (26) ಕೊಲೆಯಾದವರು.
ಇನ್ನಿಬ್ಬರು ಕೋಚ್'ಗಳಿಗೆ ಗಂಭೀರ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಾಲ್ವರೂ ಕ್ರೀಡಾಂಗಣ ದಲ್ಲಿನ ಕೊಠಡಿಯಲ್ಲೇ ವಾಸಿಸುತ್ತಿದ್ದರು ಎನ್ನಲಾ ಗಿದೆ. ಬೆಳಗ್ಗೆ 7 ಗಂಟೆ ವೇಳೆಗೆ ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಕೊಠಡಿ ಬಳಿ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೊಲೆಗೆ ಕಾರಣವೇನು ಎನ್ನುವುದು ಇನ್ನೂ ತಿಳಿದುಬಂದಿಲ್ಲ ಎಂದು ದಕ್ಷಿಣ ಆಫ್ರಿಕಾ ಪೊಲೀಸರು ತಿಳಿಸಿದ್ದಾರೆ.
