ಕಾನ್ಪುರ(ಸೆ.24): ಕಾನ್ಪುರದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಕಿವೀಸ್ ಕಿವಿ ಹಿಂಡಿದ ಜಡೇಜಾ-ಅಶ್ವಿನ್ ಭಾರತದ ಪಾಲಿಗೆ ಮೊದಲ ಇನ್ನಿಂಗ್ಸ್ ಹೀರೊಗಳಾಗಿದ್ದಾರೆ. ಮತ್ತೊಮ್ಮೆ ಟೀಮ್ ಇಂಡಿಯಾ ಸ್ಪಿನ್ ಮೋಡಿ ವರ್ಕ್ ಆಗಿದೆ. 

Add Asianetnews Kannada as a Preferred SourcegooglePreferred

ಮೊದಲ ಇನ್ನಿಂಗ್ಸ್ ನಲ್ಲಿ 318 ರನ್​ಗೆ ಆಲೌಟ್ ಆಗಿದ್ದ ಭಾರತೀಯರು, 262 ರನ್​ಗೆ ಕಿವೀಸ್ ತಂಡವನ್ನ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಭಾರತಕ್ಕೆ 56 ರನ್​ಗಳ ಇನ್ನಿಂಗ್ಸ್​ ಮುನ್ನಡೆ ಸಾಧಿಸಿದೆ. 

ನಿನ್ನೆ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಬ್ಯಾಟ್ಸ್​​ಮನ್​ಗಳು ಇಂದು ಸ್ಪಿನ್ನರ್​ಗಳ ಎದುರು ರನ್ ಗಳಿಸಲು ಪರದಾಡಿದರು. ಭಾತರ ಸ್ಪಿನ್ ದಾಳಿಯ ಮುಂದೆ ವಿಕೆಟ್ ಉಳಿಸಿಕೊಳ್ಳಲು ಹರ ಸಾಹಸ ಮಾಡಿದರು. ಆದರೂ ಸ್ಪಿನ್ ದಾಳಿಯ ಮುಂದೆ ಮಂಡಿಯೂರಿದ್ದಾರೆ.

ರವೀಂದ್ರ ಜಡೇಜಾ ಹ್ಯಾಟ್ರಿಕ್ ವಿಕೆಟ್ ಪಡೆಯುವುದನ್ನು ಮಿಸ್ ಮಾಡಿಕೊಂಡರೂ ಒಂದೇ ಓವರ್'ನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ 5 ವಿಕೆಟ್ ಗಳನ್ನು ತಮ್ಮದಾಗಿಸಿಕೊಂಡರು, ಮತ್ತೊಂದು ತುದಿಯಲ್ಲಿ ಆರ್​. ಅಶ್ವಿನ್ 4 ವಿಕೆಟ್ ಪಡೆದು ಕಿವೀಸ್ ಪಡೆಯನ್ನು ಕಾಡಿದರು.