ಏಷ್ಯನ್ ಗೇಮ್ಸ್‌ನಲ್ಲಿ ಮಿಲ್ಕಾ ಸಿಂಗ್ ಚಿನ್ನದ ಸಾಧನೆಗೆ 60 ವರ್ಷ
60 ವರ್ಷಗಳ ಹಿಂದೆ ಭಾರತದ ಮಿಲ್ಕಾ ಸಿಂಗ್ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. 1958ರ ಏಷ್ಯನ್ ಗೇಮ್ಸ್‌ನಲ್ಲಿ ಮಿಲ್ಕಾ ಓಟ ಹೇಗಿತ್ತು? ಇಲ್ಲಿದೆ.
ದೆಹಲಿ(ಆ.19): ಜಕರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಈಗಾಗಲೇ ಪದಕ ಖಾತೆ ಆರಂಭಿಸಿದೆ. ಶೂಟಿಂಗ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ಇಷ್ಟೇ ಅಲ್ಲ ಈ ಬಾರಿ ಹಲವು ಪದಕಗಳ ನಿರೀಕ್ಷೆ ಇದೆ. ಸದ್ಯ ಇಂಡೋನೇಶಿಯಾದಲ್ಲಿ ಬೀಡುಬಿಟ್ಟಿರುವ ಭಾರತಕ್ಕೆ ಫ್ಲೆೈಯಿಂಗ್ ಸಿಖ್ ಖ್ಯಾತಿಯ ಮಿಲ್ಕಾ ಸಿಂಗ್ ಸ್ಪೂರ್ತಿ.
60 ವರ್ಗಳ ಹಿಂದೆ, ಅಂದರೆ 1958ರ ಟೊಕಿಯೋ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಿಲ್ಕಾ ಸಿಂಗ್ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಪಾಕಿಸ್ತಾನದ ಅಬ್ದುಲ್ ಖಾಲಿದ್ ಹಿಂದಿಕ್ಕಿದ ಮಿಲ್ಕಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
ಮಿಲ್ಕಾ ಸಿಂಗ್ ಈ ಚಿನ್ನದ ಪದಕದ ಸಾಧನೆಗೆ ಇಂದಿಗೆ 60 ವರ್ಷ ಸಂದಿದೆ. ಸದ್ಯ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ಎಲ್ಲಾ ಭಾರತದ ಕ್ರೀಡಾಪಟುಗಳಿಗೆ ಮಿಲ್ಕಾ ಸ್ಪೂರ್ತಿಯಾಗಲಿ.