160 ರನ್ ಗಡಿ ದಾಟುವುದು ಅನುಮಾನವಿದ್ದ ಸಂದರ್ಭದಲ್ಲಿ ಮನೀಶ್ ತಮ್ಮ ತಂಡದ ಸ್ಕೋರಿಗೆ ಪುಷ್ಟಿ ನೀಡಿದರು. ಆದರೆ, ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ರಾಣಾ ಅವರ ಅಮೋಘ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ಇನ್ನೊಂದೇ ಎಸೆತ ಬಾಕಿ ಇರುವಂತೆ ರೋಚಕ ಜಯ ಸಾಧಿಸಿತು.
ಮುಂಬೈ: ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಪಂದ್ಯದ ಮುಖ್ಯಾಂಶಗಳಲ್ಲಿ ಕನ್ನಡಿಗ ಮನೀಶ್ ಪಾಂಡೆ ಇನ್ನಿಂಗ್ಸ್ ಕೂಡ ಒಂದು. ಪಾಂಡೆ 47 ಬಾಲ್'ನಲ್ಲಿ ಅಜೇಯ 81 ರನ್ ಚಚ್ಚಿದರು. 5 ಸಿಕ್ಸರ್ ಮತ್ತು 5 ಬೌಂಡರಿ ಭಾರಿಸಿದ ಮನೀಶ್ ಪಾಂಡೆಯ ಭರ್ಜಜಿ ಬ್ಯಾಟಿಂಗ್ ನೆರವಿನಿಂದಾಗಿ ಕೆಕೆಆರ್ 178 ರನ್ ಕಲೆಹಾಕಿ ಸೋಲಿನಲ್ಲೂ ಸ್ವಲ್ಪ ಮರ್ಯಾದೆ ಉಳಿಸಿಕೊಂಡಿತು.
2 ಬಾಲ್'ನಲ್ಲಿ 18 ರನ್:
ಮೊದಲು ಬ್ಯಾಟ್ ಮಾಡಿದ ಕೆಕೆಆರ್ 19 ಓವರ್ ಅಂತ್ಯದಲ್ಲಿ 6 ವಿಕೆಟ್ ನಷ್ಟಕ್ಕಕೆ 155 ರನ್ ಗಳಿಸಿತ್ತು. ಈ ಸಂದರ್ಭದಲ್ಲಿ 60 ರನ್ ಗಳಿಸಿದ್ದ ಮನೀಶ್ ಪಾಂಡೆ 20ನೇ ಓವರ್'ನಲ್ಲಿ ಮೊದಲು ಸ್ಟ್ರೈಕ್ ಪಡೆದರು. ಕೊನೆಯ ಓವರ್ ಬೌಲ್ ಮಾಡಿದ್ದು ಮೆಕ್ಲೆನಗನ್. ಆಫ್ ಸ್ಟಂಪ್'ನತ್ತ ಬಂದ ಮೊದಲ ಎಸೆತವನ್ನು ಮನೀಶ್ ಸಿಕ್ಸರ್'ಗೆ ಅಟ್ಟಿದರು. ಎರಡನೇ ಎಸೆತ ನೋ-ಬಾಲ್. ಫುಲ್ ಟಾಸ್ ಬಂದ ಆ ಚಂಡನ್ನು ಪಾಂಡೆ ಬೌಂಡರಿಗಟ್ಟಿದರು. ನೋಬಾಲ್ ಆದ್ದರಿಂದ ಹೆಚ್ಚುವರಿ ಎಸೆತದ ಜೊತೆಗೆ ಫ್ರೀಹಿಟ್ ಕೂಡ ಸಿಕ್ಕಿತು. ಆ ಎಕ್ಸ್'ಟ್ರಾ ಬಾಲ್ ಕೂಡ ವೈಡ್ ಆಯಿತು. ಮುಂದಿನದ್ದೂ ಕೂಡ ಹೆಚ್ಚುವರಿ ಎಸೆತದ ಜೊತೆಗೆ ಫ್ರೀಹಿಟ್. ಅಲ್ಲಿಗೆ, ಒಂದು ಲೀಗಲ್ ಡೆಲಿವರಿಯಲ್ಲಿ ಗಳಿಸಿದ ರನ್'ಗಳು 12. ಮೆಕ್ಲೆನಗನ್ ಎಸೆದ ಮುಂದಿನ ಎಸೆತವನ್ನು ಪಾಂಡೆ ಮತ್ತೊಮ್ಮೆ ಸಿಕ್ಸರ್'ಗೆ ಅಟ್ಟಿದರು. ಅಲ್ಲಿಗೆ 2 ಬಾಲ್'ನಲ್ಲಿ 18 ರನ್ ಬಂದವು. ಈ ಓವರ್'ನಲ್ಲಿ ಮನೀಶ್ ಮತ್ತೊಂದು ಬೌಂಡರಿ ಭಾರಿಸಿದರು. ಇವರ ಬ್ಯಾಟಿಂಗ್ ಧಮಾಕದಿಂದಾಗಿ ಕೆಕೆಆರ್ 178 ರನ್ ಮೊತ್ತ ಕಲೆಹಾಕಲು ಸಾಧ್ಯವಾಯಿತು. 160 ರನ್ ಗಡಿ ದಾಟುವುದು ಅನುಮಾನವಿದ್ದ ಸಂದರ್ಭದಲ್ಲಿ ಮನೀಶ್ ತಮ್ಮ ತಂಡದ ಸ್ಕೋರಿಗೆ ಪುಷ್ಟಿ ನೀಡಿದರು. ಆದರೆ, ಹಾರ್ದಿಕ್ ಪಾಂಡ್ಯ ಮತ್ತು ನಿತೀಶ್ ರಾಣಾ ಅವರ ಅಮೋಘ ಬ್ಯಾಟಿಂಗ್ ಸಹಾಯದಿಂದ ಮುಂಬೈ ಇಂಡಿಯನ್ಸ್ ಇನ್ನೊಂದೇ ಎಸೆತ ಬಾಕಿ ಇರುವಂತೆ ರೋಚಕ ಜಯ ಸಾಧಿಸಿತು.
