ಬೆಳಗಾವಿ ಭಾಗದ ಸಾಹುಕಾರ ರಮೇಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮಣ ಸವದಿ ರೆಬಲ್ ಆಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಕಾಂಗ್ರೆಸ್ ಸೇರಲು ಮೂರು ಶರತ್ತು ಇಟ್ಟಿದ್ದಾರೆನ್ನಲಾಗಿದೆ.
Politics Apr 14, 2023, 2:55 PM IST
ಅಥಣಿ ಜಟಾಪಟಿಯಲ್ಲಿ ರಮೇಶ್ ಜಾರಕಿಹೊಳಿಗೆ ಮೇಲುಗೈ ಸಾಧಿಸಿದ್ದಾರೆ. ಜಾರಕಿಹೊಳಿ ಆಪ್ತ ಮಹೇಳ್ ಕುಮಟಳ್ಳಿಗೆ ಟಿಕೆಟ್ ನೀಡಲು ಬಿಜೆಪಿ ಒಲವು ತೋರಿದರೆ, ಲಕ್ಷ್ಮಣ್ ಸವದಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ದಟ್ಟವಾಗುತ್ತಿದೆ. ಇತ್ತ ಸವದಿ ರಾಜೀನಾಮೆಗೆ ಮುಂದಾಗಿದ್ದಾರೆ.
Politics Apr 11, 2023, 5:54 PM IST
ಮಾಜಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಜಿಲ್ಲಾ ರಾಜಕಾರಣದಲ್ಲಿ ಪ್ರಭಾವ ಹೊಂದಿದ ನಾಯಕರು. ಈ ಇಬ್ಬರು ಈ ಹಿಂದೆ ಒಂದೇ ಪಕ್ಷದಲ್ಲಿದ್ದರು, ಆಪ್ತರೂ ಆಗಿದ್ದರು. ಕಳೆದ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿಗೆ ಶ್ರಮಿಸಿದ್ದ ರಮೇಶ ಇಂದು ಅದೇ ಹೆಬ್ಬಾಳ್ಕರ್ ಸೋಲಿಸುವ ಪಣ ತೊಟ್ಟಿದ್ದಾರೆ.
Politics Apr 8, 2023, 9:22 AM IST
ಅಥಣಿ ಹಾಲಿ ಶಾಸಕ ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡಿಸೋಕೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಸಿ ಎಂ ಬೊಮ್ಮಾಯಿ ಭೇಟಿ ಮಾಡಿ ಮಹೇಶ್ ಗೆ ಅಥಣಿ ಟಿಕೆಟ್ ಬುಕ್ ಮಾಡುವ ಪ್ರಯತ್ನ ಮಾಡಿದ್ದಾರೆ.
Politics Mar 26, 2023, 4:26 PM IST
ಕೃಷ್ಣೆಯ ಮಡಿಲಲ್ಲಿ ಮೈಚಾಚಿ ಮಲಗಿರುವ ಅಥಣಿ ವಿಧಾನಸಭಾ ಕ್ಷೇತ್ರ, ಈಗ ಬಿಜೆಪಿಯ ಭದ್ರಕೋಟೆ. 2004ರಿಂದ ಈ ಕ್ಷೇತ್ರದಿಂದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸತತವಾಗಿ ಮೂರು ಬಾರಿ ಆಯ್ಕೆಯಾಗುತ್ತ ಬಂದಿದ್ದರು. ಆದರೆ, 2018ರ ಚುನಾವಣೆಯಲ್ಲಿ ಕಾಂಗ್ರೆಸ್ನ ಮಹೇಶ ಕುಮಟಳ್ಳಿ ಗೆಲುವು ಸಾಧಿಸಿದರು. ಅಂದಿನ ಗೆಲುವಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಪಾತ್ರ ಮಹತ್ವದ್ದಾಗಿತ್ತು.
Politics Mar 20, 2023, 1:47 PM IST
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದಾಯ್ತು, ಮಾಜಿ ಶಾಸಕ ಸಂಜಯ್ ಪಾಟೀಲ್ ತಟ್ಟೆ ಹಂಚಿ ಸುದ್ದಿಯಾದರು. ಇದೀಗ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳಕರ್ ಮತದಾರರಿಗೆ ಗಿಫ್ಟ್ ಹಂಚಿ ಸುದ್ದಿಯಾಗಿದ್ದಾರೆ.
Politics Mar 20, 2023, 10:53 AM IST
ಕಾಂಗ್ರೆಸ್ನ ಮಹಾನಾಯಕನಿಗೆ ಸಿಡಿ ಮಾಡುವುದೇ ಉದ್ಯೋಗ. ಈ ಹಿಂದೆ ನನ್ನ ಸಿಡಿ ಕೇಸ್ ಹೊರಬಂದಾಗ ನನ್ನದು ಅದೇ ಉದ್ಯೋಗ ಎಂದು ನನ್ನ ಮಗ ಅಮರನಾಥ ಬಳಿ ಆತನೇ ಸ್ಪಷ್ಟವಾಗಿ ಹೇಳಿದ್ದಾನೆ. ಬೇಕಿದ್ದರೆ ಈ ಬಗ್ಗೆ ದೇವಿ ಮೇಲೆ ಆಣೆ ಮಾಡಲು ಸಿದ್ಧ. ಸೀಡಿ ತೋರಿಸಿ ಕಾಂಗ್ರೆಸ್ ಸೇರಲು ನಾಯಕರಿಗೆ ಆತ ಬೆದರಿಕೆ ಹಾಕುತ್ತಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(KPCC president DK Shivakumar) ವಿರುದ್ಧ ಗೋಕಾಕ ಶಾಸಕ ರಮೇಶ ಜಾರಕಿಹೊಳಿ(Ramesh Jarkiholi) ಏಕವಚನದಲ್ಲಿಯೇ ಟೀಕಾಪ್ರಹಾರ ನಡೆಸಿದ್ದಾರೆ.
Politics Mar 14, 2023, 6:33 AM IST
ಅಥಣಿ ಟಿಕೆಟ್ ಬಿಟ್ಟುಕೊಡುವುದಿಲ್ಲ ಎಂದು ಸವದಿ ಪುತ್ರ ಸವಾಲು ಹಾಕಿದ್ದರೆ, ಅಥಣಿ ಟಿಕೆಟ್ ಕೊಡದಿದ್ದರೆ ನಾನೂ ಸ್ಪರ್ಧಿಸಲ್ಲ ಎಂದು ರಮೇಶ್ ಜಾರಕಿಹೊಳಿ ಬಿಜೆಪೆಗೆ ಸಂದೇಶ ರವಾನಿಸಿದ್ದಾರೆ. ಇವರ ಟಿಕೆಟ್ ಗುದ್ದಾಟ ಬಿಜೆಪಿಗೆ ತಲೆನೋವಾಗಿದೆ.
Politics Mar 13, 2023, 8:06 PM IST
ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡಿದಿದ್ದರೆ ನಾನೂ ಸಹ ಗೋಕಾಕನಿಂದ ಸ್ಪರ್ಧೆ ಮಾಡಲ್ಲ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಸವದಿ ಪುತ್ರ ಚಿದಾನಂದ ಸವದಿ ರೆಬೆಲ್ ಆಗಿ ಉತ್ತರ ನೀಡಿದ್ದಾರೆ. ಆದರೆ ಲಕ್ಷ್ಮಣ ಸವದಿ ಮೌನಕ್ಕೆ ಜಾರಿದ್ದಾರೆ.
Politics Mar 13, 2023, 6:04 PM IST
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಿಡಿದೆದ್ದಿರುವ ಸಾಹುಕಾರ್ ಪದೇ ಪದೇ ವಾಗ್ದಾಳಿ ನಡೆಸುತ್ತಿದ್ದಾರೆ. ಸಿಡಿ ವಿಚಾರವಾಗಿ ಮತ್ತೆ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
Politics Mar 13, 2023, 1:43 PM IST
ಮೈದಾನ ಖುಲ್ಲಾ ಹೈ.. ಎಂದು ಹಿರೋಯಿನ್ನಂತೆ ಸ್ಟೈಲ್ನಲ್ಲಿ ಕೈ ಬೆರಳು ತೋರಿಸಿ, ಈಗೇಕೆ ನಾಯಿಯಂತೆ ಒದ್ದಾಡುತ್ತಿದ್ದೀಯಾ ತಾಯಿ... ಮೈದಾನ ಖುಲ್ಲಾ ಇರುವುದರಿಂದಲೇ ನಾನು ಇಲ್ಲಿ ಬಂದಿರುವೆ. ಈಗೇಕೆ ಅಳುತ್ತಿದ್ದೀಯಾ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೇ ಹೆಬ್ಬಾಳಕರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದರು.
Politics Mar 7, 2023, 9:00 AM IST
ಶಿವಾಜಿ ಮೂರ್ತಿ ಲೋಕಾರ್ಪಣೆ ವಿಚಾರವಾಗಿ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ನಡುವಿನ ಯುದ್ಧ ಅಂತ್ಯಗೊಳ್ಳುತ್ತಿಲ್ಲವಾಗಿದ್ದು, ಮತ್ತೊಮ್ಮೆ ಲಕ್ಷ್ಮೀ ಹೆಬ್ಬಾಳ್ಕರ್ ಶಿವಾಜಿ ಪ್ರತಿಮೆ ಉದ್ಘಾಟಿಸಲಿದ್ದಾರೆ
Belagavi Mar 5, 2023, 12:30 PM IST
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ರಮೇಶ್ ಜಾರಕಿಹೊಳಿ, ಮಹಾನಾಯಕಿಯನ್ನು ಮನೆಗೆ ಕಳಿಸ್ತೀವಿ ಅಂತ ಶಪಥ ಮಾಡಿದ್ದಾರೆ.
Politics Mar 3, 2023, 2:11 PM IST
ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಶಿವಾಜಿ ಪ್ರತಿಮೆ ಜಟಾಪಟಿ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಶಿವಾಜಿ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ
Belagavi Mar 2, 2023, 1:06 PM IST
ಶಿವಾಜಿ ಪ್ರತಿಮೆ ವಿಚಾರವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಮಧ್ಯೆ ರಾಜಕೀಯ ಸಂಘರ್ಷ ಶುರುವಾಗಿತ್ತು. ಸಿಎಂ ಬಸವರಾಜ ಬೊಮ್ಮಾಯವರಿಂದಲೇ ಶಿವಾಜಿ ಪ್ರತಿಮೆ ಲೋಕಾರ್ಪಣೆಗೊಳಿಸಲು ನಿರ್ಧಾರ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ಭರ್ಜರಿ ಶಾಕ್ ಕೊಟ್ಟಿದ್ದಾರೆ.
Politics Feb 24, 2023, 9:09 AM IST