ವಾರವಿಡೀ ಬ್ಯುಸಿಯಾಗಿರೋ ಸಂಗಾತಿಗಳಿಗಾಗಿಯೇ ಬಂದಿದೆ ವೀಕೆಂಡ್ ವಿವಾಹ!
ವಾರವಿಡೀ ದುಡೀತಾರೆ, ಪೇರೆಂಟ್ಸ್- ಸ್ನೇಹಿತ/ತೆಯರ ಜತೆಗೆ ಇರುತ್ತಾರೆ, ವಾರಾಂತ್ಯದಲ್ಲಿ ಗಂಡ ಹೆಂಡತಿ ಒಟ್ಟಾಗಿ ಒಂದು ಮನೆಯಲ್ಲೋ, ಅಪಾರ್ಟ್‌ಮೆಂಟ್‌ನಲ್ಲೋ ಇರುತ್ತಾರೆ. ಅಥವಾ ಟೂರ್ ಹೋಗುತ್ತಾರೆ. ಇದು ವೀಕೆಂಡ್ ದಾಂಪತ್ಯ. ಸದ್ಯ ಜಪಾನ್‌ನಲ್ಲಿ ಈ ಟ್ರೆಂಡ್ ಹೆಚ್ಚು ಪ್ರಚಲಿತದಲ್ಲಿದೆ.
ನಿಮಗೆ ಕೆರಿಯರ್ ಮೇಲೆ ಮೋಹ. ದಾಂಪತ್ಯಕ್ಕೆ ಕೊಡಲು ಸಮಯವಿಲ್ಲ. ನಿಮ್ಮ ಗೆಳತಿ/ಯನಿಗೂ ಅಷ್ಟೇ. ಇಬ್ಬರೂ ಸದಾ ಬ್ಯುಸಿಯಾಗಿದ್ದರೆ ಮದುವೆ ಮಾಡಿಕೊಂಡು ಏನು ಪ್ರಯೋಜನ? ಆದರೆ ವಾರಾಂತ್ಯದಲ್ಲಾದರೂ ಜತೆಯಾಗಿರಬಹುದಲ್ಲ? ಈ ಕಾನ್ಸೆಪ್ಟ್‌ನಿಂದಲೇ ಬಂದಿದೆ ವೀಕೆಂಡ್ ವಿವಾಹ.
ಇದನ್ನು ಪ್ರತ್ಯೇಕಗೊಳ್ಳುವ ವಿವಾಹ ಎಂದೂ ಕರೆಯುತ್ತಾರೆ. ವಾರಾಂತ್ಯದಲ್ಲಿ ಮಾತ್ರ ದಂಪತಿಗಳಂತೆ ಇರುವ ಜೋಡಿಗಳು ವಾರದ ದಿನಗಳಲ್ಲಿ ದೂರವಾಗಿರುತ್ತಾರೆ. ಸದ್ಯ ಜಪಾನ್‌ನಲ್ಲಿ ಈ ಟ್ರೆಂಡ್ ಹೆಚ್ಚು ಪ್ರಚಲಿತದಲ್ಲಿದೆ. ಅಲ್ಲಿನ ಮಿಲೇನಿಯಲ್ ಯುಗದ ಹುಡುಗ-ಹುಡುಗಿಯರಿಗೆ ಮದುವೆ ಎಂದರೆ ಅಲರ್ಜಿ. ಕೆಲವರು ಮದುವೆಯಾಗುವುದೇ ಬೇಡ ಎಂದು ನಿರ್ಧಾರ ಮಾಡಿದರೆ, ಇನ್ನೂ ಕೆಲವರು ತಡವಾಗಿ ಮದುವೆಯಾಗುತ್ತೇವೆ ಎನ್ನುತ್ತಾರೆ. ಮದುವೆಯಾದರೆ ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಭಯ. ಆ ಕಾರಣಕ್ಕೆ ಪ್ರೀತಿ ಬೇಕು, ಮದುವೆ ಬೇಡ ಎಂಬ ನಿರ್ಧಾರ. ಮದುವೆಯ ನಂತರ ಒಬ್ಬರಿಗೊಬ್ಬರು ಹೊಂದಿಕೊಳ್ಳದೇ ದೂರವಾಗಬಹುದು ಎಂಬ ಭಯವೂ ಕಾಡುತ್ತದೆ. ಹೀಗಾಗಿ ವಾರಾಂತ್ಯದ ಮದುವೆ ಎಂಬ ಒಪ್ಪಂದ ಮಾಡಿಕೊಳ್ಳುತ್ತಾರೆ. ಆದರೆ ಒಂದೇ ಮನೆಯಲ್ಲಿ ವಾಸಿಸುವುದಿಲ್ಲ. ವೀಕೆಂಡ್‌ನ ಎರಡು ಅಥವಾ ಮೂರು ದಿನ ಮಾತ್ರ ಸಹವಾಸ.
ಈ ಪರಿಕಲ್ಪನೆಯ ಲಾಭಗಳೇನು?
ವಾರಾಂತ್ಯದ ಮದುವೆ ಪರಿಕಲ್ಪನೆಯಲ್ಲಿ ನೀವು ಸಂಗಾತಿಯನ್ನು ಪ್ರತಿದಿನ ಭೇಟಿ ಮಾಡಬೇಕು ಎಂಬ ಕಡ್ಡಾಯವಿಲ್ಲ. ಅವರೊಂದಿಗೆ ಪ್ರತಿದಿನ ಸಮಯ ಕಳೆಯಬೇಕು ಎಂದಿಲ್ಲ. ಇಂದಿನ ಬ್ಯುಸಿ ಜೀವನಶೈಲಿ (Busy Lifestyle) ಒಬ್ಬರಿಗೊಬ್ಬರು ಸಮಯ ನೀಡಲು ಕಷ್ಟವಾಗುವಂತೆ ಮಾಡಿದೆ. ವಾರದ ದಿನಗಳಲ್ಲಿ ಹವ್ಯಾಸ, ಆಸಕ್ತಿಗೆ ಯಾವುದೇ ಭಂಗ ಬರದಂತೆ ಬದುಕುಬಹುದು. ಜೊತೆಗೆ ವೈಯಕ್ತಿಕ ಜಾಗ, ಸಮಯ ಬಯಸುವವರಿಗೂ ಇದು ಬೆಸ್ಟ್.
ಮಗನ ಹೆಂಡ್ತಿ ಮೇಲೇನೆ ಲವ್ವಾಗೋಯ್ತು..ಸೊಸೆ ಜೊತೆ ಓಡಿ ಹೋದ ಮಾವ..!
ವಾರಾಂತ್ಯದ ಮದುವೆಯನ್ನು ಮೆಚ್ಚಲು ಇರುವ ಇನ್ನೊಂದು ಕಾರಣ ವಾರದ ದಿನಗಳ ಕೆಲಸದ ಜಂಜಾಟ, ಟ್ರಾಫಿಕ್ ಕಿರಿಕಿರಿ (Traffic Issue), ಬಾಸ್‌ನ ಒತ್ತಡ (Corporate Pressure), ಕಚೇರಿ ಕೆಲಸ ಈ ಎಲ್ಲಾ ಕಿರಿಕಿರಿಗಳಿಂದ ದೂರವಿದ್ದು, ಸಂಗಾತಿಯೊಂದಿಗೆ ಸಂತಸದಿಂದ ಸಮಯ ಕಳೆಯಲು ವಾರಾಂತ್ಯ ಬೆಸ್ಟ್. ವಾರಾಂತ್ಯದಲ್ಲಿ ಅವರ ಖುಷಿಗೆ ಅಡ್ಡಿಪಡುವ ಯಾವ ಅಂಶಗಳೂ ಇರುವುದಿಲ್ಲ. ವಾರಾಂತ್ಯದಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವುದು, ಪಿಕ್ನಿಕ್ (Picknic) ಹೋಗುವುದು, ಸಿನಿಮಾಕ್ಕೆ ಹೋಗುವುದು, ತಮ್ಮ ಇಷ್ಟದ ಚಟುವಟಿಕೆಗಳನ್ನು ಒಟ್ಟಾಗಿ ಮಾಡಬಹುದು. ಇದರಿಂದ ಇಬ್ಬರ ನಡುವೆ ಸಂಬಂಧ ಗಟ್ಟಿಯಾಗುತ್ತದೆ.
ಅಧಿಕ ಕೆಲಸದ ಅವಧಿ, ಶಿಫ್ಟ್ ವರ್ಕ್(Shift work) ಮಾಡುವವರಿಗೆ ಕೆಲಸ ಹಾಗೂ ಕುಟುಂಬ ಎರಡೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಕಷ್ಟವಾಗಬಹುದು. ಅಲ್ಲದೇ ಎರಡಕ್ಕೂ ನ್ಯಾಯ ಸಿಗದೆ ಒದ್ದಾಡುವಂತಾಗಬಹುದು. ಅಂತಹ ಸಂದರ್ಭದಲ್ಲಿ ವೀಕೆಂಡ್ ಮದುವೆ ಬೆಸ್ಟ್. ವಿಕೇಂಡ್ ಮದುವೆ ಎಂದರೆ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಇದರಿಂದ ವೈಯಕ್ತಿಕವಾಗಿ ಹಣ ಉಳಿತಾಯ (Personal Savings) ಮಾಡುವ ಸಾಧ್ಯತೆ ಹೆಚ್ಚು. ವಾರದ ದಿನಗಳಲ್ಲಿ ಒಬ್ಬರೇ ಬದುಕುವ ಕಾರಣ ಹಣ ಖರ್ಚಿನ ಸಂಭವವೂ ಕಡಿಮೆ.
Mental Health: ಹಿಂದಿನ ಘಟನೆಗಳ ನೆನಪಿಂದ ಹೊರಬರೋಕೆ ಆಗಲ್ವಾ?
ಸಮಸ್ಯೆಗಳೂ ಇವೆ!
ಆದ್ರೆ ಭಾರತದಲ್ಲಿ ಇಂತಹ ವ್ಯವಸ್ಥೆ ವ್ಯಾಪಕವಾಗಿ ಅಂಗೀಕಾರವಾಗುವುದು ಕಷ್ಟ. ಇಲ್ಲಿ ಸಂಪ್ರದಾಯಕ್ಕೆ ಹೆಚ್ಚು ಪ್ರಾಮುಖ್ಯತೆ ಆದ ಕಾರಣ. ಮದುವೆಯಾದವರು ಒಂದೇ ಮನೆಯಲ್ಲೇ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ದೂರವಾಗಿ ಇರುವುದನ್ನು ಭಾರತೀಯರು ಒಪ್ಪುವುದು ಕಷ್ಟ. ಇದರ ರೀತಿಗಳಿಗೆ ಹೊಂದಿಕೊಳ್ಳಲು ದಂಪತಿಗೆ ಕಷ್ಟವಾಗಬಹುದು. ಟೆನ್ಷನ್(Tension) ಉಂಟಾಗಬಹುದು. ಭಾರತ ಕುಟುಂಬ ವ್ಯವಸ್ಥೆಯನ್ನು ಮೆಚ್ಚುವ ದೇಶ(Nation). ಆದರೆ ಇಂದಿನ ಜಮಾನದ ಜೋಡಿಗಳಿಗೆ ವೈಯಕ್ತಿಕ ಬದುಕು (Personal Life) ಹಾಗೂ ಸ್ವತಂತ್ರ ಜೀವನದ (Independent Life) ಮೇಲೆ ಹೆಚ್ಚು ಅಭಿಲಾಷೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಂತಹ ಪರಿಕಲ್ಪನೆ ಭಾರತದಲ್ಲೂ ಕಾಣಬಹುದು.