ವಿದ್ಯಾರ್ಥಿನಿಯರ ಪ್ರೀತಿಗೆಶಿಕ್ಷಕಿ ಭಾವುಕ, ವಿಡಿಯೋ ನೋಡಿ ನೆನಪಿನಂಗಳಕ್ಕೆ ಜಾರಿದ ನೆಟ್ಟಿಗರು!
ಪ್ರತಿಯೊಬ್ಬರ ಶಾಲೆ – ಕಾಲೇಜು ಜೀವನ ವಿಶೇಷವಾಗಿರುತ್ತದೆ. ಅಲ್ಲಿರುವ ಶಿಕ್ಷಕರೊಬ್ಬರು ಮಕ್ಕಳ ಮನಸ್ಸು ಕದ್ದಿರುತ್ತಾರೆ. ಅವರ ಪ್ರೀತಿ, ಮಮತೆ, ವಾತ್ಸಲ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಾಗೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಶಿಕ್ಷಕರ ವಿಡಿಯೋಗಳು ನಮ್ಮ ಹಳೆ ನೆನಪನ್ನು ಕಾಡದೆ ಇರೋದಿಲ್ಲ. ಈ ವಿಡಿಯೋ ಇದಕ್ಕೆ ಸಾಕ್ಷಿ.
ಶಿಕ್ಷಕನ ಸ್ಥಾನ ಬಹುದೊಡ್ಡದು. ಅವರು ನಡೆಯುವ ದಾರಿ ಸಾವಿರಾರು ಮಕ್ಕಳಿಗೆ ದಾರಿದೀಪ. ನೂರಾರು ಮಕ್ಕಳಿಗೆ ವಿದ್ಯೆ ಹೇಳುವ ಶಿಕ್ಷಕ, ತರಗತಿಗೆ ಬಂದು ಪಾಠ ಮಾಡಿದ್ರೆ ಸಾಲದು. ಮಕ್ಕಳ ಜೊತೆಗೊಂದು ವಿಶೇಷ ಬಾಂಡಿಂಗ್ ಹೊಂದಿರಬೇಕು. ಶಿಕ್ಷಕರು ಹಾಗೂ ಶಿಷ್ಯರ ಮಧ್ಯೆ ಒಂದು ಬಾಂಧವ್ಯ ಇದ್ದಾಗ ಮಾತ್ರ ಮಕ್ಕಳು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯ. ನಮ್ಮಲ್ಲಿ ಶಿಕ್ಷಕ ವೃತ್ತಿಯನ್ನು ಪ್ರೀತಿಸುವ, ಆರಾಧಿಸುವ ಅನೇಕ ಶಿಕ್ಷಕರಿದ್ದಾರೆ. ಸಂಬಳ ಎಷ್ಟೇ ಬರಲಿ ಅದಕ್ಕೆ ಗಮನ ಹರಿಸದೆ, ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡ್ತಾ, ಅವರ ತಪ್ಪುಗಳನ್ನು ತಿದ್ದುತ್ತಾ, ಅವರ ಸಂತೋಷದಲ್ಲಿ ತಾವು ಪಾಲ್ಗೊಂಡು ಸಂಭ್ರಮಿಸುವವರನ್ನು ನೀವು ನೋಡ್ಬಹುದು.
ಒಬ್ಬ ವಿದ್ಯಾರ್ಥಿ (Student) ಜೀವನದಲ್ಲಿ ಮುಂದೆ ಬರಬೇಕು, ಆತ ದೊಡ್ಡ ಸಾಧನೆ ಮಾಡ್ಬೇಕು, ಕಷ್ಟಸುಖಗಳನ್ನು ಸಮನಾಗಿ ಹಂಚಿ ಬಾಳ್ಬೇಕು ಅಂದ್ರೆ ಬಾಲ್ಯದಿಂದ ಹಿಡಿದು ಕಾಲೇಜಿನವರೆಗೆ ಆತನಿಗೆ ಸಿಕ್ಕ ಶಿಕ್ಷಕರು ಮುಖ್ಯವಾಗ್ತಾರೆ. ಪ್ರತಿ ಶಾಲೆ (School) – ಕಾಲೇಜಿನಲ್ಲೂ ಮಕ್ಕಳ ಪ್ರೀತಿ ಗಳಿಸಿರುವ ಒಂದಾದ್ರೂ ಶಿಕ್ಷಕ (Teacher) – ಶಿಕ್ಷಕಿಯರಿರ್ತಾರೆ. ಅವರೆಂದ್ರೆ ಮಕ್ಕಳಿಗೆ ಬಲು ಪ್ರೀತಿ. ತರಗತಿಗೆ ಆ ಶಿಕ್ಷಕರು ಬಂದ್ರೆ ಪಾಠ ಸಾಗಿದ್ದು ಮಕ್ಕಳಿಗೆ ತಿಳಿಯೋದಿಲ್ಲ. ಆಡ್ತಾ, ನಗ್ತಾ, ಸ್ನೇಹಿತರಂತೆ ಶಿಕ್ಷಕರನ್ನು ನೋಡ್ತಾರೆ. ಮಕ್ಕಳು ಆಟದಲ್ಲೇ ಪಾಠ ಕಲಿಬೇಕು ಅಂದ್ರೆ ಶಿಕ್ಷಕರು ಹಾಗೆ ಇರಬೇಕು. ತಮ್ಮ ಜೀವನದಲ್ಲಿ ಅದೆಷ್ಟೇ ನೋವು, ದುಃಖವಿರಲಿ ಮಕ್ಕಳ ಮುಂದೆ ಅದನ್ನು ತೋರಿಸದೆ, ಮಕ್ಕಳ ಜೊತೆ ಮಕ್ಕಳಾಗಿ ಶಿಕ್ಷಕರು ಪಾಠ ಕಲಿಸ್ತಾರೆ. ಮಕ್ಕಳಿಗೆ ಮುಂದೆ ಬರಲು ಪ್ರೋತ್ಸಾಹ ನೀಡ್ತಾರೆ.
ಅರೆರೆ.. ಇದೇನು ಹೊಸ ಟ್ವಿಸ್ಟ್? ಗೌತಮ್- ಭೂಮಿಕಾ ಮನೆಯಲ್ಲಿ ಸೀತಾ-ಸಿಹಿ!
ಪ್ರತಿಯೊಬ್ಬರ ಜೀವನದಲ್ಲೂ ಒಂದು ಫೆವರೆಟ್ ಟೀಚರ್ ಇರ್ಲೇಬೇಕು. ಅವರ ಎಷ್ಟೋ ಮಾತು, ವರ್ತನೆ ನಮಗೆ ದಾರಿದೀಪವಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅಂಥ ಶಿಕ್ಷಕರ ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ಶಿಕ್ಷಕಿ ಹಾಗೂ ವಿದ್ಯಾರ್ಥಿನಿಯರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಝಿಂದಗಿ ಗುಲಜಾರ ಹೇ ಹೆಸರಿನ ಎಕ್ಸ್ ಖಾತೆಯಲ್ಲಿ ಈಗ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದ ಆರಂಭದಲ್ಲಿ ವಿದ್ಯಾರ್ಥಿನಿಯರನ್ನು ನೀವು ನೋಡ್ಬಹುದು. ಕ್ಲಾಸ್ ರೂಮಿಗೆ ಬರ್ತಿದ್ದ ಶಿಕ್ಷಕಿ, ಕ್ಯಾಮರಾ ನೋಡ್ತಿದ್ದಂತೆ ಕ್ಲಾಸ್ ರೂಮಿನಿಂದ ಒಂದು ಹೆಜ್ಜೆ ಹಿಂದೆ ಹೋಗ್ತಾರೆ. ವಿದ್ಯಾರ್ಥಿನಿಯರ ಒತ್ತಾಯಕ್ಕೆ ಮಣಿದು, ನಾಚಿಕೊಳ್ತಾ ಕ್ಲಾಸಿಗೆ ಬರುವ ಅವರು ಕುಳಿತುಕೊಳ್ತಾರೆ. ಆ ನಂತ್ರ ವಿದ್ಯಾರ್ಥಿನಿಯರು ಅವರು ಉಡುಗೊರೆ ನೀಡ್ತಾರೆ. ಉಡುಗೊರೆಯನ್ನು ಮೊದಲು ಎದೆಗೊತ್ತಿಕೊಳ್ಳುವ ಶಿಕ್ಷಕಿ ನಂತ್ರ ಅದನ್ನು ಬಿಚ್ಚುತ್ತಾರೆ. ಶಿಕ್ಷಕಿ ಫೋಟೋ ಕೊಲಾಜ್ ನೋಡಿ ಖುಷಿಯಾಗ್ತಾರೆ. ವಿದ್ಯಾರ್ಥಿನಿಯರ ಪ್ರೀತಿಗೆ ಅವರು ಭಾವುಕರಾಗೋದನ್ನು ನೀವು ವಿಡಿಯೋದಲ್ಲಿ ನೋಡ್ಬಹುದು.
ವೀರಪ್ಪನ್ ಅಣ್ಣಾವ್ರನ್ನು ಬಿಡುಗಡೆ ಮಾಡಿದಾಗ ಕೊಟ್ಟ ಗಿಫ್ಟ್ ಏನು? ಸೇತುಕುಳಿ ಅದನ್ನ ಕೊಟ್ಟಿದ್ನ?
ಈ ವಿಡಿಯೋವನ್ನು ಈವರೆಗೆ ಆರು ಲಕ್ಷ 96 ಸಾವಿರಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಿದ್ದಾರೆ. ಹನ್ನೊಂದು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ. ಇದು ನಿಜವಾದ ಭಾವನಾತ್ಮಕ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯ, ಉತ್ತಮ ಶಿಕ್ಷಕರು ಯಾವಾಗಲೂ ವಿದ್ಯಾರ್ಥಿಗಳಿಗೆ ಹೀರೋಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಉತ್ತಮವಾದ ಗೆಸ್ಚರ್ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಕೆಲ ಶಿಕ್ಷಕರು ತಮ್ಮ ಜೀವನದಲ್ಲಿ ಬಂದು ಹೋದ ವಿದ್ಯಾರ್ಥಿಗಳನ್ನು ನೆನಪಿಸಿಕೊಂಡಿದ್ದಾರೆ. ನಿಜವಾದ ಪ್ರೀತಿಯನ್ನು ಇದು ತೋರಿಸುತ್ತದೆ ಎಂದು ಮತ್ತೊಂದಿಷ್ಟು ಮಂದಿ ಕಮೆಂಟ್ ಮಾಡಿರೋದನ್ನು ನೀವು ನೋಡ್ಬಹುದು. ಶಿಕ್ಷಕರು ಕೂಡ ಮಕ್ಕಳ ಇನ್ನೊಂದು ಅಮ್ಮ. ಅವರು ಮಕ್ಕಳ ಬಗ್ಗೆ ಎಲ್ಲವನ್ನೂ ತಿಳಿದಿರ್ತಾರೆಂದು ಮತ್ತೊಬ್ಬರು ಬರೆದಿದ್ದಾರೆ.
हमारे स्कूल या कॉलेज में एक ऐसी टीचर जरूरत होती है जो सबकी फेवरेट होती है।🥰🤩 pic.twitter.com/beAtxjl6Hk
— ज़िन्दगी गुलज़ार है ! (@Gulzar_sahab) June 17, 2024