ಡಿಕೆ ಸಹೋ​ದ​ರ​ರಿಗೆ ಹೆದರಿ ಕನ​ಕ​ಪುರ ತೊರೆದ ಬಿಜೆ​ಪಿ​ ಅ​ಭ್ಯ​ರ್ಥಿ​ಗಳು!

ರಾಮ​ನ​ಗರ [ನ.03]:  ಮಾಜಿ ಸಚಿವ ಡಿ.ಕೆ.​ಶಿ​ವ​ಕು​ಮಾರ್‌ ಮತ್ತು ಸಂಸದ ಡಿ.ಕೆ.​ಸು​ರೇಶ್‌ ಅವರ ಭಯಕ್ಕೆ ಕನ​ಕ​ಪುರ ನಗ​ರ​ಸಭೆ ಚುನಾ​ವ​ಣೆ​ಯಲ್ಲಿ ಸ್ಪರ್ಧಿ​ಸಿ​ರುವ ಅಭ್ಯ​ರ್ಥಿ​ಗಳು ಕನ​ಕ​ಪುರ ತೊರೆದು ಪ್ರವಾಸ ಹೊರ​ಟಿ​ದ್ದಾರೆ.

ಕನ​ಕ​ಪುರ ನಗ​ರ​ಸ​ಭೆಯ 31 ವಾರ್ಡು​ಗಳ ಪೈಕಿ 26 ವಾರ್ಡು​ಗ​ಳಲ್ಲಿ ಬಿಜೆಪಿ ಅಭ್ಯ​ರ್ಥಿ​ಗ​ಳು ನಾಮ​ಪತ್ರ ಸಲ್ಲಿ​ಸಿ​ದ್ದರು. ಇದ​ರಲ್ಲಿ 27ನೇ ವಾರ್ಡಿನಿಂದ ಕೃಷ್ಣಯ್ಯ ಶೆಟ್ಟಿಸಲ್ಲಿ​ಸಿದ್ದ ಉಮೇ​ದು​ವಾ​ರಿಕೆ ತಿರ​ಸ್ಕೃ​ತ​ಗೊಂಡು ಅಂತಿ​ವಾಗಿ 25 ಬಿಜೆಪಿ ಅಭ್ಯ​ರ್ಥಿಗಳು ಕಣ​ದಲ್ಲಿ ಉಳಿ​ದಿ​ದ್ದಾರೆ.

ಎಚ್ಚರಿಕೆ:  ಡಿಕೆ ಸಹೋ​ದ​ರರು ಜೆಡಿ​ಎಸ್‌ನೊಂದಿಗೆ ಹೊಂದಾ​ಣಿಕೆ ಮಾಡಿ​ಕೊಂಡು ನಗ​ರ​ಸಭೆ ಚುನಾ​ವಣೆ ಎದು​ರಿ​ಸು​ತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿ​ಎಸ್‌ ಅಭ್ಯ​ರ್ಥಿ​ಗ​ಳನ್ನು ಹೊರತುಪಡಿಸಿ ಬೇರೆ ಪಕ್ಷದ ಅಭ್ಯ​ರ್ಥಿ​ಗ​ಳಾ​ಗಲಿ ಅಥವಾ ಪಕ್ಷೇ​ತ​ರ​ರಾಗಿ ಯಾರೂ ನಾಮ​ಪತ್ರ ಸಲ್ಲಿ​ಸ​ದಂತೆ ಎಚ್ಚರ ವಹಿ​ಸಿ​ದ್ದರು.

ಆದರೂ ಬಿಜೆಪಿ 26 ವಾರ್ಡು​ಗ​ಳಲ್ಲಿ ತನ್ನ ಅಭ್ಯ​ರ್ಥಿ​ಗ​ಳಿಂದ ನಾಮ​ಪತ್ರ ಸಲ್ಲಿ​ಸಿತ್ತು. ಅದ​ರ​ಲ್ಲೀಗ ಒಂದು ನಾಮ​ಪತ್ರ ತಿರ​ಸ್ಕೃ​ತ​ಗೊಂಡು 25 ನಾಮ​ಪ​ತ್ರ​ಗಳು ಊರ್ಜಿ​ತ​ಗೊಂಡಿವೆ. ಕಣ​ದ​ಲ್ಲಿ​ ಉಳಿ​ದಿ​ರುವ ಬಿಜೆಪಿ ಅಭ್ಯರ್ಥಿ​ಗಳಿಗೆ ಆಮಿ​ಷ​ವೊ​ಡ್ಡುವ ಅಥವಾ ಒತ್ತಡ ಹೇರು​ತ್ತಾ​ರೆಂಬ ಭಯ​ದಿಂದ ಪಕ್ಷದ ನಾಯ​ಕರು ಅಭ್ಯ​ರ್ಥಿ​ಗ​ಳನ್ನು ಕನ​ಕ​ಪು​ರ​ದಿಂದ ಅಜ್ಞಾತ ಸ್ಥಳಕ್ಕೆ ಪ್ರವಾಸ ಕರೆ​ದೊ​ಯ್ದಿ​ದ್ದಾರೆ.

ಹೆಚ್ಚಿನ ಮತಗಳು:  ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದ ಡಿ.ಕೆ. ಸುರೇಶ್‌ ಸ್ಪರ್ಧಿಸಿದರೂ ಸಹ ಇವರ ವಿರುದ್ಧ ಪಟ್ಟಣದ ಏಳೆಂಟು ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ​ಗ​ಳು ಲಭಿ​ಸಿತ್ತು. ಇದ​ರಿಂದ ಆತಂಕ​ಗೊಂಡಿ​ರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಚುನಾ​ವ​ಣೆ​ಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿಯದಂತೆ ಆಮಿಷ ಅಥವಾ ಒತ್ತ​ಡ ಹೇರುವ ತಂತ್ರ ರೂಪಿ​ಸಿ​ದ್ದರು.

ಸೋಮವಾರ (ನ.4)ನಾಮಪತ್ರ ವಾಪಸ್ಸು ಪಡೆಯಲು ಅಂತಿಮ ದಿನ​ವಾ​ಗಿ​ರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯ​ರ್ಥಿ​ಗ​ಳನ್ನು ಅಪಹರಿಸಿ ಗುಪ್ತ ಸ್ಥಳದಲ್ಲಿಟ್ಟು ಉಮೇ​ದು​ವಾ​ರಿಕೆ ವಾಪಸು ಪಡೆಯಬಹುದೆಂಬ ವದಂತಿ ಹರಿ​ದಾ​ಡಿತ್ತು. ಇದ​ರಿಂದ ಹೆದರಿರುವ ಬಿಜೆಪಿ ಅಭ್ಯ​ರ್ಥಿ​ಗಳು ಮುನ್ನೆಚ್ಚರಿಕೆ ತಂತ್ರವಾಗಿ ಪ್ರವಾಸ ಕೈಗೊಂಡಿದ್ದಾರೆ.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ್‌, ಆದಿತ್ಯಮಹೇಶ್‌, ನಾಗಾನಂದ, ತಾಲೂಕು ಅಧ್ಯಕ್ಷ ಶಿವರಾಂ ನೇತೃತ್ವದಲ್ಲಿ ಅ​ಭ್ಯ​ರ್ಥಿ​ಗಳು ಪ್ರವಾಸಕ್ಕೆ ತೆರಳಿದ್ದಾರೆ. ನಾಮಪತ್ರ ವಾಪಾಸ್‌ ಪಡೆಯುವ ದಿನಾಂಕ ಮುಗಿದ ಬಳಿಕ ಕನಕಪುರಕ್ಕೆ ಹಿಂದಿ​ರುಗಿ ಬರ​ಲಿ​ದ್ದಾರೆ ಎಂದು ಬಿಜೆಪಿ ಮೂಲ​ಗಳು ತಿಳಿ​ಸಿವೆ.

ಕನಕಪುರ ನಗರಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಹೈಜಾಕ್‌ ಮಾಡುತ್ತಾರೆಂದು ಬೆದರಿಕೆ ಬಿಜೆಪಿ ಪಕ್ಷದವರು ಅವರನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿರುವುದು.

ಕನ​ಕ​ಪುರ ನಗ​ರ​ಸಭೆ ಚುನಾ​ವಣೆ: 89 ಮಂದಿ ಕಣ​ದ​ಲ್ಲಿ

ಕನ​ಕ​ಪುರ:  ನಗ​ರ​ಸಭೆ 31 ವಾರ್ಡು​ಗ​ಳಲ್ಲಿ ಸ್ಪರ್ಧೆ ಬಯಸಿ ಅಭ್ಯರ್ಥಿ​ಗಳು ಸಲ್ಲಿ​ಸಿದ್ದ 96 ನಾಮ​ಪ​ತ್ರ​ಗ​ಳಲ್ಲಿ 2 ಉಮೇ​ದು​ವಾ​ರಿಕೆ ತಿರ​ಸ್ಕೃ​ತ​ಗೊಂಡಿದ್ದು, ಅಂತಿ​ಮ​ವಾಗಿ 89 ಮಂದಿ ಕಣ​ದಲ್ಲಿ ಉಳಿ​ದಿ​ದ್ದಾರೆ. ಶನಿ​ವಾರ ನಡೆದ ನಾಮ​ಪತ್ರ ಪರಿ​ಶೀ​ಲನೆ ಕಾರ್ಯ​ದಲ್ಲಿ 27ನೇ ವಾರ್ಡಿ​ನಿಂದ ನಾಮ​ಪತ್ರ ಸಲ್ಲಿ​ಸಿದ್ದ ಬಿಜೆಪಿ ಅಭ್ಯರ್ಥಿ ಕೃಷ್ಣ​ಯ್ಯ​ಶೆಟ್ಟಿಹಾಗೂ 3ನೇ ವಾರ್ಡಿನ ಅಭ್ಯ​ರ್ಥಿ​ಯೊ​ಬ್ಬರು ಸಲ್ಲಿ​ಸಿದ್ದ ಉಮೇ​ದು​ವಾ​ರಿಕೆ ತಿರ​ಸ್ಕೃ​ತ​ಗೊಂಡಿವೆ. ಅಭ್ಯ​ರ್ಥಿ​ಗಳು ಸಲ್ಲಿ​ಸಿದ್ದ ಎರ​ಡೆ​ರೆಡು ಉಮೇ​ದು​ವಾ​ರಿಕೆ ಒಂದು ತಿರ​ಸ್ಕೃ​ತ​ಗೊಂಡು ಅಂತಿ​ಮ​ವಾಗಿ 89 ಮಂದಿಯ ನಾಮ​ಪ​ತ್ರ​ಗಳು ಊರ್ಜಿ​ತ​ಗೊಂಡವು.

ನವೆಂಬರ್ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: