ರಾಮ​ನ​ಗರ [ಅ.19]:  ಜೆಡಿ​ಎಸ್‌ ಶಾಸ​ಕರು ಕಾಂಗ್ರೆಸ್‌ ಮತ್ತು ಬಿಜೆಪಿ ಸೇರು​ತ್ತಾರೆ ಎಂಬು​ದೆಲ್ಲ ವದಂತಿ. ಯಾರು ಕೂಡ ಬೇರೆ ಪಕ್ಷಕ್ಕೆ ಹೋಗುವ ಮನ​ಸ್ಥಿ​ತಿ​ಯಲ್ಲಿ ಇಲ್ಲ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ತಿಳಿ​ಸಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಾ.ರಾ.​ಮ​ಹೇಶ್‌ ಅವರು ತಮ್ಮ ಕ್ಷೇತ್ರದ ಅನು​ದಾ​ನ​ಗ​ಳನ್ನು ಕಡಿತ ಮಾಡ​ಲಾ​ಗಿದೆ ಎಂಬ ಕಾರ​ಣಕ್ಕೆ ಶಾಸಕ ಸ್ಥಾನಕ್ಕೆ ರಾಜಿ​ನಾಮೆ ನೀಡಿ​ದ್ದರು. ಈಗ ರಾಜೀನಾ​ಮೆ​ಯನ್ನು ಹಿಂದಕ್ಕೆ ಪಡೆ​ದು​ಕೊಂಡಿ​ದ್ದಾರೆ. ಪಕ್ಷದ ಯಾವ ಶಾಸ​ಕರು ಬೇರೆ ಪಕ್ಷಕ್ಕೆ ಹೋಗು​ವು​ದಿಲ್ಲ ಎಂದ​ರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹಾಗೂ ಸಾ.ರಾ.ಮಹೇಶ್‌ ಹಿ​ರಿಯ ನಾಯ​ಕರು. ಆದರೆ ಅವರಿಬ್ಬರು ಆ ರೀತಿ ಮಾತನಾಡುವುದು ಬೇಕಾಗಿರಲಿಲ್ಲ. ನಾನು ಸಾ.ರಾ.ಮಹೇಶ್‌ ಜೊತೆ ಈ ಬಗ್ಗೆ ಮಾತನಾಡಿದ್ದೇನೆ

ವಿಶ್ವನಾಥ್‌ ರವರು ಹಿರಿಯರಿದ್ದಾರೆ. ನೀವು ಅವರ ಮಾತಿಗೆ ರಿಯಾಕ್ಟ್ ಮಾಡಬೇಡಿ ಎಂದಿದ್ದೇನೆ ಎಂದು ಅನಿತಾ ಹೇಳಿ​ದರು.