ಕನಕಪುರ ಕ್ಷೇತ್ರ ಕೈ ವಶ : ಡಿಕೆಶಿ ಸಹೋದರರಿಗೆ ಒಲಿದ ಭರ್ಜರಿ ಜಯ

ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾಳಯಕ್ಕೆ ಭರ್ಜರಿ ಜಯ ಸಿಕ್ಕಿದೆ. 7 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಪಾಲಿಗೆ ಅಧಿಕಾರ ಒಲಿದಿದೆ. 

Congress Win in Kanakpura Local Body Election

ಕನಕಪುರ [ನ.14]: ಮಾಜಿ ಸಚಿವ ಡಿ.ಕೆ.ಶಿವಕುಮಾರ್  ಸ್ವ ಕ್ಷೇತ್ರ  ಕನಕಪುರದಲ್ಲಿ ನಡೆದ ನಗರಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 

ಕನಕಪುರ  ನಗರಸಭೆಯ 15 ವಾರ್ಡುಗಳಲ್ಲಿ ಕಾಂಗ್ರೆಸ್ ಗೆಲುವು ಪಡೆದಿದ್ದರೆ, ಬಿಜೆಪಿ 1 ವಾರ್ಡಲ್ಲಿ ಗೆಲುವು ಪಡೆದಿದೆ. 

ಅವಿರೋಧ ಸೇರಿ 7 ರಲ್ಲಿ ಕಾಂಗ್ರೆಸ್ ಗೆಲುವು ಪಡೆದಿದ್ದು, ಇದರಿಂದ ಒಟ್ಟು 26 ವಾರ್ಡುಗಳು ಕಾಂಗ್ರೆಸ್ ಪಾಲಾಗಿವೆ. 

ಕನಕಪುರ ನಗರಸಭೆಯಲ್ಲಿನ ಒಟ್ಟು 31 ವಾರ್ಡುಗಳಲ್ಲಿ ಕಾಂಗ್ರೆಸ್ 26 ಸ್ಥಾನ ಪಡೆಯುವ ಮೂಲಕ ತನ್ನ ವಶಕ್ಕೆ ತೆಗೆದುಕೊಂಡಿದೆ. 

ಲೋಕಲ್ ಫೈಟ್ : ಡಿಕೆಶಿ ಕ್ಷೇತ್ರದಲ್ಲಿ ಅವಿರೋಧ ಆಯ್ಕೆ...

ರಾಜ್ಯದ ವಿಧಾನಸಭಾ ಉಪ ಚುನಾವಣೆಗೂ ಮುನ್ನ ನಡೆದ ಈ ಲೋಕಲ್ ಫೈಟ್ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಂಡಿದೆ. ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. 

ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಕ್ಷೇತ್ರವಾದ ಇಲ್ಲಿ ಕಾಂಗ್ರೆಸಿಗೆ ಪ್ರತಿಷ್ಠೆಯ ವಿಚಾರವಾಗಿತ್ತು. ಚುನಾವಣೆ ಗೆಲುವಿಗೆ ಹಲವು ರೀತಿಯ ಕಸರತ್ತುಗಳು ನಡೆದಿದ್ದವು. 

"

Latest Videos
Follow Us:
Download App:
  • android
  • ios