ಬೀದಿ ನಾಯಿಗಳ ಹಾವಳಿಗೆ ಬಾಲಕಿ ಬಲಿ
ಬೀದಿ ನಾಯಿಗಳ ಹಾವಳಿಗೆ ಮತ್ತೊಂದು ಬಲಿಯಾಗಿದೆ. ಬಿಡದಿ ಬಳಿ ನಾಯಿಗಳ ದಾಳಿಗೆ ಬಾಲಕಿ ಮೃತಪಟ್ಟಿದ್ದಾಳೆ
ರಾಮನಗರ [ನ. 04] : ಬೀದಿ ನಾಯಿಗಳು ದಾಳಿ ನಡೆಸಿ ಬಾಲಕಿ ಸಾವಿಗೀಡಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ಬಿಡದಿ ಪಟ್ಟಣದ ಕೆಂಚನಕುಪ್ಪೆ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. 7 ವರ್ಷದ ಮೋನಿಕಾ ಮನೆಯ ಮುಂದೆ ಆಟವಾಡುತ್ತಿದ್ದಾಗ ಏಕಾ ಏಕಿ ಬಂದು ನಾಯಿಗಳು ದಾಳಿ ನಡೆಸಿವೆ.
ನಾಯಿಗಳ ದಾಳಿಯಿಂದ ತೀವ್ರವವಾಗಿ ಗಾಯಗೊಂಡಿದ್ದ ಬಾಲಕಿ ಮೋನಿಕಾಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಇಂದು ಮೃತಪಟ್ಟಿದ್ದಾರೆ. ಪೊಲೀಸರ ಆಕ್ರಂದನ ಮುಗಿಲು ಮುಟ್ಟಿದೆ.
ಎಲ್ಲೆಡೆ ಬೀದಿನಾಯಿಗಳ ಹಾವಳಿ ಸಾಮಾನ್ಯವಾಗಿದ್ದು, ಹೆಚ್ಚಿನ ದಾಳಿ ಪ್ರಕರಣಗಳು ವರದಿಯಾಗುತ್ತದೆ. ಆದರೆ ಈ ಬಗ್ಗೆ ಕ್ರಮ ಕೈಗೊಳ್ಳುವತ್ತ ಸಂಬಂಧಪಟ್ಟವರಿಂದ ನಿರ್ಲಕ್ಷ್ಯ ಕಂಡು ಬರುತ್ತಿದೆ.