ರಾಯಚೂರು(ನ.15): ಬಂಕರ್‌ನಲ್ಲಿ ಕೈ ಸಿಲುಕಿಕೊಂಡು ಗುತ್ತಿಗೆ ಕಾರ್ಮಿಕನೊಬ್ಬ ಸಾವನ್ನಪ್ಪಿದ ಘಟನೆ ಶಕ್ತಿನಗರದ ಆರ್‌ಟಿಪಿಎಸ್ ನಲ್ಲಿ ಘಟನೆ ಗುರುವಾರ ರಾತ್ರಿ ನಡೆದಿದೆ. ಮೃತ ಕಾರ್ಮಿಕನನ್ನು ದೀಪಕ್ ನಾಯಕ(27) ಎಂದು ಗುರುತಿಸಲಾಗಿದೆ.

ಓರಿಸ್ಸಾ ಮೂಲದ ದೀಪಕ್ ನಾಯಕ ಅವರು  ಆರ್‌ಟಿಪಿಎಸ್ ಘಟಕದ ಬಂಕರ್‌ನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕಾರ್ಯನಿರ್ವಸುತ್ತಿದ್ದನು. ಘಟಕ 4 - ಘಟಕ 5 ನಡುವಿನ ಬಂಕರ್‌ನಲ್ಲಿ ಕಲ್ಲು ತೆಗೆಯುವಾಗ ದೀಪಕ್ ನಾಯಕ ಅವಾರ ಕೈ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಘಟನೆಗೆ ಓವರ್ ಟೈಮ್ ಕೆಲಸ ನೀಡಿದ್ದರಿಂದಲ್ಲೇ ಉದ್ಯೋಗಿ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.