16ನೇ ವಯಸ್ಸಿನಲ್ಲಿ ಪಿಎಚ್ಡಿ ಮುಗಿಸಿದ್ರೂ ನಿರುದ್ಯೋಗಿ ಈತ!
ಜಗತ್ತಿನಲ್ಲಿ ವಿಚಿತ್ರ ಜನರು ಇರುತ್ತಾರೆ. ಓದಿನಲ್ಲಿ ಚುರುಕಿದ್ರೂ ಕೆಲಸ ಮಾಡುವ ಆಸಕ್ತಿ ಇರೋದಿಲ್ಲ. ಪಿಎಚ್ಡಿ ಮುಗಿಸಿದ್ರೂ ಒಳ್ಳೆ ಕೆಲಸ ಮಾಡದೆ ಖಾಲಿ ಇರುವ ಜನರಲ್ಲಿ ಈತ ಸೇರಿದ್ದಾನೆ.
ಮಕ್ಕಳ ಬುದ್ಧಿ ಬೆಳವಣಿಗೆ ಅತಿ ನಿಧಾನವಾಗಿದ್ರೂ ಕಷ್ಟ, ಅತಿ ವೇಗಾವಾಗಿದ್ದರೂ ಕಷ್ಟ. ಜೀವನದಲ್ಲಿ ಯಾವೆಲ್ಲ ತಿರುವುಗಳು ಬರ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಬಾಲ್ಯದಲ್ಲಿ ಎಲ್ಲ ವಿಷ್ಯದಲ್ಲಿ ಹಿಂದಿರುವ ಅದೆಷ್ಟೋ ಮಂದಿ ದೊಡ್ಡವರಾದ್ಮೇಲೆ ಮಹಾನ್ ಸಾಧನೆ ಮಾಡಿದ್ದಾರೆ. ಅದೇ ಬಾಲ್ಯದಲ್ಲಿ ತಮ್ಮ ಬುದ್ಧಿಶಕ್ತಿ, ಚಾಲಾಕಿತನದಿಂದ ಮಿಂಚಿದ್ದ ಕೆಲವು ಮಂದಿ ದೊಡ್ಡವರಾದ್ಮೇಲೆ ನಿರುಪಯೋಗಿಗಳಾಗಿದ್ದಾರೆ. ಅವರ ಬುದ್ಧಿವಂತಿಕೆ ಯಾವುದೇ ಪ್ರಯೋಜನಕ್ಕೆ ಬರೋದಿಲ್ಲ. ಮಕ್ಕಳ ಬಾಲ್ಯದ ಚುರುಕುತನವನ್ನು ನೋಡಿ ಮುಂದೆ ಮಕ್ಕಳು ಅತ್ಯುನ್ನತ ಹುದ್ದೆಗೆ ಹೋಗಿ ಸಾಧನೆ ಮಾಡ್ತಾರೆ ಎಂದು ಕನಸು ಕಂಡಿದ್ದ ಪಾಲಕರು ನಿರಾಶೆಗೆ ಒಳಗಾಗ್ತಾರೆ. ಓದಿನಲ್ಲಿ ಚುರುಕಾಗಿದ್ದು, ಸಾಕಷ್ಟು ಹೆಸರು ಮಾಡಿದ್ದ ವ್ಯಕ್ತಿಯ ಕಥೆ ಇದಕ್ಕೆ ಉತ್ತಮ ನಿದರ್ಶನ. ಒಳ್ಳೆ ವಿದ್ಯೆ, ಒಂದಿಷ್ಟು ಪಿಎಚ್ ಡಿ ಪಡೆದರೂ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿರುವ ವ್ಯಕ್ತಿಯೊಬ್ಬನ ಬಗ್ಗೆ ನಾವಿಂದು ಹೇಳ್ತೇವೆ.
ದ್ವಿತೀಯ ಪ್ರತಿಭೆ ಎಂದುಕೊಂಡಿದ್ದ ಹುಡುಗ ಈಗ ನಿರುದ್ಯೋಗಿ (Unemploy) : ಆತ ಚೀನಾ (China) ದ ಹುಡುಗ. ಜಾಂಗ್ ಶಿನ್ಯಾಂಗ್. ಬಾಲ್ಯದಲ್ಲಿ ಅಪ್ರತಿಮ ಪ್ರತಿಭೆ (Talent) ಯನ್ನು ಈತ ಹೊಂದಿದ್ದ. ಎರಡೂವರೆ ವರ್ಷದವನಿದ್ದಾಗ ಜಾಂಗ್ ಶಿನ್ಯಾಂಗ್ ಗೆ ನೂರಾರು ಚೀನೀ ಅಕ್ಷರಗಳು ನೆನಪಿನಲ್ಲಿರುತ್ತಿದ್ದವು. ಮಗನ ಬುದ್ಧಿವಂತಿಕೆ, ನೆನಪಿನ ಶಕ್ತಿಗೆ ಪಾಲಕರು ಬೆರಗಾಗಿದ್ದರು. ಕಡಿಮೆ ವಯಸ್ಸಿನಲ್ಲೇ ಆತ ಹೆಚ್ಚಿನ ತರಗತಿಯಲ್ಲಿ ವಿದ್ಯಾಭ್ಯಾಸ ಶುರು ಮಾಡಿದ್ದ. ತನ್ನ ನಾಲ್ಕನೇ ವಯಸ್ಸಿನಲ್ಲಿ ಪ್ರಾಥಮಿಕ ಶಾಲೆ ಸೇರಿದ್ರೆ ಆರನೇ ವಯಸ್ಸಿನಲ್ಲಿ ಐದನೇ ತರಗತಿ ಪರೀಕ್ಷೆ ಬರೆದಿದ್ದ. ತನ್ನ ಹತ್ತನೇ ವಯಸ್ಸಿನಲ್ಲಿ ಜಾಂಗ್ ಶಿನ್ಯಾಂಗ್ ವಿಶ್ವವಿದ್ಯಾನಿಲಯದ ಮೆಟ್ಟಿಲೇರಿದ್ದ. ಈ ಮೂಲಕ ಚೀನಾದ ಅತ್ಯಂತ ಕಿರಿಯ ವಿಶ್ವವಿದ್ಯಾಲಯ ವಿದ್ಯಾರ್ಥಿ ಎಂಬ ಹೆಗ್ಗಳಿಕೆ ಪಾತ್ರನಾದ.
ಮರಿಗಳ ಹೊಟ್ಟೆ ತುಂಬಿಸಲು ಈ ಬೀದಿನಾಯಿ ಏನ್ ಮಾಡ್ತಿದೆ ನೋಡಿ: ಭಾವುಕ ವೀಡಿಯೋ ವೈರಲ್
ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದರೂ ಜಾಂಗ್ ಬುದ್ಧಿವಂತಿಕೆ ಅಪಾರವಾಗಿತ್ತು. ಇದು ಇಡೀ ಜಗತ್ತಿನ ಗಮನ ಸೆಳೆದಿತ್ತು. ಜಾಂಗ್ ಅಲ್ಲಿಗೆ ತನ್ನ ವಿದ್ಯಾಭ್ಯಾಸ ನಿಲ್ಲಿಸಲಿಲ್ಲ. 13 ನೇ ವಯಸ್ಸಿನಲ್ಲಿ ಜಾಂಗ್ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದು, ಮೇಲುಗೈ ಸಾಧಿಸಿದ್ದರು. 16 ನೇ ವಯಸ್ಸಿನಲ್ಲಿ ಗಣಿತಶಾಸ್ತ್ರದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿ ಪಾಲಕರಿಗೆ ಮತ್ತಷ್ಟು ಖುಷಿ ನೀಡಿದ್ದ. ಮಗ ಇನ್ನೇನು ಕೆಲಸಕ್ಕೆ ಸೇರಿ ನಮ್ಮನ್ನು ಸಾಕ್ತಾನೆ ಎಂದು ಪಾಲಕರು ಊಹಿಸಿದ್ದರು. ಆದ್ರೆ ಅವರ ನಿರೀಕ್ಷೆ ಸುಳ್ಳಾಗಿತ್ತು.
ನಿರಂತರವಾಗಿ 72 ಗಂಟೆ ನಿದ್ರೆ ಮಾಡದೇ ಇದ್ರೆ ಏನಾಗುತ್ತೆ ಗೊತ್ತಾ?
ಕೆಲಸ ಮಾಡದೆ ಮನೆಯಲ್ಲಿದ್ದಾನೆ ಪಿಎಚ್‌ಡಿ ಹುಡುಗ : ನಿಮಗೆ ಅಚ್ಚರಿ ಆಗ್ಬಹುದು. ನಮ್ಮಲ್ಲಿ ಪಿಎಚ್ ಡಿ ಪಡೆಯಲು ಜನರು ಸಾಕಷ್ಟು ಕಷ್ಟಪಡ್ತಾರೆ. ಪಿಎಚ್ಡಿ ನಂತ್ರ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿ, ಹೆಚ್ಚಿನ ಹಣ ಸಂಪಾದನೆಗೆ ಮುಂದಾಗ್ತಾರೆ. ತನ್ನ ಹದಿನಾರನೇ ವಯಸ್ಸಿನಲ್ಲೇ ಪಿಎಚ್ಡಿ ಪಡೆದಿದ್ದರೂ ಜಾಂಗ್ ಈವರೆಗೆ ಯಾವುದೇ ಕೆಲಸ ಮಾಡ್ತಿಲ್ಲ. ಈಗ ಅವನಿಗೆ 28 ವರ್ಷ. ಜಾಂಗ್ ಬೀಜಿಂಗ್ ಯೂನಿವರ್ಸಿಟಿ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್‌ನಲ್ಲಿ ಪಿಎಚ್‌ಡಿ ಮುಗಿಸಿದ್ದಾನೆ. ಈ ಪಿಎಚ್ಡಿ ಮಾಡುವ ಸಂದರ್ಭದಲ್ಲಿ ಜಾಂಗ್ ಮನಸ್ಸು ಬದಲಾಗಿದೆ. ಆತ ಬೀಜಿಂಗ್ ನಲ್ಲಿ ತನಗೊಂದು ಅಪಾರ್ಟೆಮೆಂಟ್ ಖರೀದಿ ಮಾಡಿ ನೀಡುವಂತೆ ಪಾಲಕರಿಗೆ ಒತ್ತಾಯಿಸಿದ್ದಾನೆ. ಒಂದ್ವೇಳೆ ಪಾಲಕರು ಇದನ್ನು ಒಪ್ಪದೆ ಹೋದ್ರೆ ತಾನು ವಿದ್ಯಾಭ್ಯಾಸ ಬಿಡುವುದಾಗಿ ಹೆದರಿಸಿದ್ದ. ಅಷ್ಟೇ ಅಲ್ಲ ಪಿಎಚ್ಡಿ ಮಾಡುವ ವೇಳೆ ಸ್ವಂತ ಮನೆ ಇರಬೇಕು ಎಂಬುದು ಆತನ ಬಯಕೆಯಾಗಿತ್ತು. ಪಾಲಕರು ಅಪಾರ್ಟ್ಮೆಂಟ್ ಒಂದರಲ್ಲಿ ಬಾಡಿಗೆ ಮನೆಪಡೆದು ಅದನ್ನು ಸ್ವಂತದ್ದೆಂದು ಜಾಂಗ್ ಗೆ ನಂಬಿಸಿದ್ದಾರೆ. ಪಿಎಚ್ಡಿ ಮುಗಿದ ಮೇಲೆ ಜಾಂಗ್ ಇದೇ ಮನೆಯಲ್ಲಿ ತಂಗಿದ್ದಾನೆ. ಆತ ಮನೆಯಿಂದ ಹೊರಗೆ ಹೋಗೋದಿಲ್ಲ. ಯಾವುದೇ ಕೆಲಸಕ್ಕೆ ಸೇರಿಲ್ಲ. ತನಗೆ ಬೇಕೆನಿಸಿದಾಗ ಫ್ರಿಲಾಯ್ಸಿಂಗ್ ಕೆಲಸ ಮಾಡ್ತಾನೆ. ಇದೇ ತನಗೆ ಸಂತೋಷ ನೀಡುತ್ತದೆ ಎನ್ನುತ್ತಾನೆ.