ಗೂಗಲ್‌ನಲ್ಲಿ 60 ಲಕ್ಷ ಸಂಬಳದ ಕೆಲ್ಸ ಗಿಟ್ಟಿಸಿದ ಯುವತಿ: ಈಕೆ ಓದಿದ್ದು ಐಐಟಿಯಲ್ಲಿ ಅಲ್ಲ

ಬಿಹಾರದ ಯುವತಿಯೊಬ್ಬರು ಗೂಗಲ್‌ನಲ್ಲಿ 60 ಲಕ್ಷ ವೇತನದ ಕೆಲಸ ಗಿಟ್ಟಿಸಿಕೊಂಡಿದ್ದು, ಆಕೆ ದೇಶದ ಯಾವುದೇ ಪ್ರತಿಷ್ಠಿತ ಐಐಟಿಯಲ್ಲಿ ಓದಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಲಿಂಕ್ಡಿನ್ ಪೋಸ್ಟ್‌ ಈಗ ಸಖತ್ ವೈರಲ್ ಆಗಿದೆ.

young woman from bihar got 60 lakh salary job in Google but She was not an IITian akb

ಬಿಹಾರದ ಯುವತಿಯೊಬ್ಬರು ಗೂಗಲ್‌ನಲ್ಲಿ 60 ಲಕ್ಷ ವೇತನದ ಕೆಲಸ ಗಿಟ್ಟಿಸಿಕೊಂಡಿದ್ದು, ಆಕೆ ದೇಶದ ಯಾವುದೇ ಪ್ರತಿಷ್ಠಿತ ಐಐಟಿಯಲ್ಲಿ ಓದಿಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಲಿಂಕ್ಡಿನ್ ಪೋಸ್ಟ್‌ ಈಗ ಸಖತ್ ವೈರಲ್ ಆಗಿದೆ. ಸಾಮಾನ್ಯವಾಗಿ ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಓದಿದವರು ಮಾತ್ರವೇ ಈ ರೀತಿ ಭಾರಿ ಮೊತ್ತದ ವೇತನವನ್ನು ಪಡೆಯುತ್ತಾರೆ. ಓದುತ್ತಿರುವಾಗಲೇ ದೇಶ ವಿದೇಶಗಳ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ ಎಂಬ ಮಾತಿದೆ. ಆದರೆ ಬಿಹಾರದ ಅಲಂಕೃತ ಸಾಕ್ಷಿ ಎಂಬ ಈ ಹುಡುಗಿ ಓದಿದ್ದು, ಯಾವುದೇ ಐಐಟಿಗಳಲ್ಲಿ ಅಲ್ಲ, ಜಾರ್ಖಂಡ್‌ನ ಇಂಜಿನಿಯರಿಂಗ್ & ತಂತ್ರಜ್ಞಾನ ಕಾಲೇಜಿನಲ್ಲಿ ಓದಿ ಇವರು ಬಿಟೆಕ್ ಗ್ರಾಜುಯೇಟ್ ಆಗಿದ್ದಾರೆ. ಇದಾದ ನಂತರ ಅವರು ವಿಪ್ರೋದಲ್ಲಿ ಪ್ರಾಜೆಕ್ಟ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ನಂತರ ಅರ್ನೆಸ್ಟ್ & ಯಂಗ್ ( Ernst & Young)ಎಂಬ ಸಂಸ್ಥೆಯಲ್ಲಿ ಸೆಕ್ಯೂರಿಟಿ ಅನಾಲಿಸ್ಟ್ ಆಗಿ ಕೆಲಸ ಮಾಡಿದ್ದರು. 

ಆದರೆ ಈಗ ಅವರಿಗೆ ಗೂಗಲ್‌ನಿಂದ ವಾರ್ಷಿಕ 60 ಲಕ್ಷ ರೂ ವೇತನದ ಕೆಲಸ ಸಿಕ್ಕಿದೆ ಎಂದು ಅವರು ತಮ್ಮ ಲಿಂಕ್ಡಿನ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು, ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. ಅಲಂಕೃತ ಸಾಕ್ಷಿ ಅವರು ಈ ಹಿಂದೆ ವಿಪ್ರೋ, ಸ್ಯಾಮ್‌ಸಂಗ್‌ನಲ್ಲೂ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಗೂಗಲ್‌ ಸಂಸ್ಥೆಗೆ ಸೆಕ್ಯೂರಿಟಿ ಅನಾಲಿಸ್ಟ್ ಆಗಿ ಕೆಲಸಕ್ಕೆ ಸೇರುತ್ತಿದ್ದೇನೆ ಎಂದು ಹೇಳಿಕೊಳ್ಳುವುದಕ್ಕೆ ತುಂಬಾ ಥ್ರಿಲ್ ಆಗುತ್ತಿದೆ. ನಾನು ನನಗ ಸಿಕ್ಕ ಈ ಅವಕಾಶಕ್ಕೆ ಧನ್ಯಳಾಗಿದ್ದೇನೆ. ಜೊತೆಗೆ ಇಂತಹ ಇನೋವೇಟಿವ್ ಹಾಗೂ ಡೈನಾಮಿಕ್ ಆಗಿರುವ ಟೀಂ ಜೊತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಈ ನನ್ನ ವೃತ್ತಿ ಬದುಕಿನಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ನಿಮ್ಮ ಬೆಂಬಲ ಹಾಗೂ ಮಾರ್ಗದರ್ಶನಕ್ಕೆ ಬೆಲೆಕಟ್ಟಲಾಗದು ಇದು ನನ್ನ ಹೊಸ ಆರಂಭ ಎಂದು ಅಲಂಕೃತ ಸಾಕ್ಷಿ ಲಿಂಕ್ಡಿನ್‌ನಲ್ಲಿ ಬರೆದುಕೊಂಡಿದ್ದಾರೆ. 

ಸೆ.20ರ ಬಳಿಕ ಈ ಜಿಮೇಲ್ ಖಾತೆಗಳ ಡಿಲೀಟ್ ಮಾಡುತ್ತಿದೆ ಗೂಗಲ್, ಉಳಿಸಿಕೊಳ್ಳಲು ಹೀಗೆ ಮಾಡಿ!

ಈ ಪೋಸ್ಟ್‌ ಸ್ವಲ್ಪ ಹೊತ್ತಿನಲ್ಲೇ ವೈರಲ್ ಆಗಿದ್ದು, ಜನರು ಒಬ್ಬರಾದ ಮೇಲೊಬ್ಬರು ಪ್ರತಿಕ್ರಿಯಿಸಿ ಕಾಮೆಂಟ್ ಮಾಡಿದ್ದಾರೆ. ನೀವು ಗೂಗಲ್‌ಗೆ ಆಯ್ಕೆಯಾಗಿದ್ದ ವಿಚಾರ ನ್ಯೂಸ್‌ನಲ್ಲಿ ನೋಡಿದೆ. ಇದೊಂದು ದೊಡ್ಡ ಸಾಧನೆ , ನೀವು ಅನೇಕರಿಗೆ ಸ್ಪೂರ್ತಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ, ನಿಮ್ಮ ನಂಬಲಾಗದ ಈ ಸಾಧನೆಗೆ ಧನ್ಯವಾದಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಯಾವುದೇ ಐಐಟಿ, ಐಐಐಟಿ ಅಥವಾ ಐಐಎಂನವರಲ್ಲ ಎಂದು ತಿಳಿದು ಅಚ್ಚರಿಯಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಎಲ್ಲರೂ ಅಲಂಕೃತ ಸಾಕ್ಷಿಯವರ ಸಾಧನೆಗೆ ಶುಭ ಹಾರೈಸಿದ್ದಾರೆ.

ಪ್ರತಿಭೆ ಹಾಗೂ ಪರಿಶ್ರಮ ಇದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಅಲಂಕೃತ ಸಾಕ್ಷಿ ತೋರಿಸಿಕೊಟ್ಟಿದ್ದು, ಗೂಗಲ್, ಮೈಕ್ರೋಸಾಫ್ಟ್ ಮುಂತಾದ ದೊಡ್ಡ ದೊಡ್ಡ ಬಹುರಾಷ್ಟ್ರೀಯ ಟೆಕ್ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದು ಬಯಸುವ ಹಲವರಿಗೆ ಈಕೆ ಸ್ಪೂರ್ತಿಯಾಗಿದ್ದಾರೆ. 

ಇನ್ಮುಂದೆ ಡೇಟಾ ಡಿಲೀಟ್ ಮಾಡಬೇಕಿಲ್ಲ; ಫ್ರಿಯಾಗಿ Google ನೀಡ್ತಿದೆ 30 GB ಕ್ಲೌಡ್‌ ಸ್ಟೋರೇಜ್

Latest Videos
Follow Us:
Download App:
  • android
  • ios