ಬೈಜೂಸ್‌ನಲ್ಲಿ ಮತ್ತೆ ಉದ್ಯೋಗಿಗಳ ವಜಾ: ಫೋನ್ ಮೂಲಕವೇ ಉದ್ಯೋಗಿಗಳ ಮನೆಗೆ ಕಳುಹಿಸಿದ ಹೆಚ್ ಆರ್
ಬೈಜೂಸ್ ಶಿಕ್ಷಣ ಸಂಸ್ಥೆ 2022ರಿಂದಲೂ ನಿರಂತರವಾಗಿ ಹಲವು ಹಂತಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸಂಸ್ಥೆ ಉದ್ಯೋಗಿಗಳಿಗೆ ಸ್ಯಾಲರಿ ನೀಡುವುದಕ್ಕೂ ಪರದಾಡುತ್ತಿದ್ದು, ಫೋನ್ ಮೂಲಕವೇ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ ಎಂದು ವರದಿ ಆಗಿದೆ. ಈ ಬಗ್ಗೆ ಬೈಜೂಸ್ ಉದ್ಯೋಗಿಗಳೆ ಅಳಲು ತೋಡಿಕೊಂಡಿದ್ದಾರೆ.
ಆನ್ಲೈನ್ ಕೋಚಿಂಗ್ ಹಾಗೂ ಟ್ಯೂಷನ್ ಒದಗಿಸುವ ಮೂಲಕ ಫೇಮಸ್ ಆಗಿದ್ದ ಬೈಜೂಸ್ ಶಿಕ್ಷಣ ಸಂಸ್ಥೆ 2022ರಿಂದಲೂ ನಿರಂತರವಾಗಿ ಹಲವು ಹಂತಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿದೆ. ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಸಂಸ್ಥೆ ಉದ್ಯೋಗಿಗಳಿಗೆ ಸ್ಯಾಲರಿ ನೀಡುವುದಕ್ಕೂ ಪರದಾಡುತ್ತಿದ್ದು, ಫೋನ್ ಮೂಲಕವೇ ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಕೆಲಸ ಮಾಡುತ್ತಿದೆ ಎಂದು ವರದಿ ಆಗಿದೆ. ಈ ಬಗ್ಗೆ ಬೈಜೂಸ್ ಉದ್ಯೋಗಿಗಳೆ ಅಳಲು ತೋಡಿಕೊಂಡಿದ್ದಾರೆ.
ಬೈಜೂಸ್ ಎಜುಟೆಕ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ರಾಹುಲ್ ಎಂಬುವವರು ತಮ್ಮ ಕುಟುಂಬ ಸದಸ್ಯರೊಬ್ಬರಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಾರ್ಚ್ ಮಧ್ಯದಲ್ಲಿ ರಜೆ ತೆಗೆದುಕೊಂಡು ಊರಿಗೆ ಹೋಗಿದ್ದರು. ಆದರೆ ಮಾರ್ಚ್ 31 ರಂದು ಇವರಿಗೆ ಕಂಪನಿಯ ಹೆಚ್‌ಆರ್ ಕಡೆಯಿಂದ ಕರೆ ಬಂದಿದ್ದು, ಸಂಸ್ಥೆಯೂ ನಿಮ್ಮನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಹೇಳಿ ಆತನಿಗೆ ಶಾಕ್ ನೀಡಿದ್ದಾರೆ. ಅಲ್ಲದೇ ಮಾರನೇ ದಿನವೇ ನಿಮ್ಮ ಕೆಲಸದ ಕೊನೆ ದಿನವಾಗಿದ್ದು, ಸಂಸ್ಥೆಯನ್ನು ಬಿಡುವ ವೇಳೆ ನಡೆಸಬೇಕಾದ ಪ್ರಕ್ರಿಯೆಗಳನ್ನು ನಡೆಸುವಂತೆ ಆತನಿಗೆ ಸೂಚಿಸಿದೆ.
ಬೆಂಗಳೂರು ಹೊರತುಪಡಿಸಿ ಇನ್ನುಳಿದ ಎಲ್ಲಾ ಬೈಜೂಸ್ ಕಚೇರಿಗೆ ಬೀಗ, ಉದ್ಯೋಗಿಗಳಿಗೆ ಒಂದು ಆಯ್ಕೆ!
ರಾಹುಲ್ ಅವರು ತನ್ನನ್ನು ವಜಾಗೊಳಿಸಲು ಕಾರಣವನ್ನು ಕೇಳಿದಾಗ, ಕಂಪನಿಯ ತನ್ನ ಆರ್ಥಿಕ ದುಸ್ಥಿತಿಯನ್ನು ತಿಳಿಸಿದೆ. ಅಲ್ಲದೇ ವಜಾಗೊಳ್ಳಲಿರುವ ಉದ್ಯೋಗಿಗಳ ಪಟ್ಟಿಯನ್ನು ಉನ್ನತ ಆಡಳಿತವು ತಮ್ಮೊಂದಿಗೆ ಹಂಚಿಕೊಂಡಿದೆ ಎಂದು ಆತನಿಗೆ ಹೇಳಿದೆ. ತಾನು ಕೆಲಸ ಕಳೆದುಕೊಂಡ ಸುದ್ದಿಯಿಂದ ಆಘಾತಕ್ಕೊಳಗಾದ ರಾಹುಲ್, ಸಾಕ್ಷ್ಯಕ್ಕಾಗಿ ಹೆಚ್ ಆರ್ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಿದಾಗ ಹೆಚ್‌ಆರ್ ಅವರು ಅನುಮತಿಯಿಲ್ಲದೆ ಏಕೆ ರೆಕಾರ್ಡ್ ಮಾಡುತ್ತಿದ್ದೀರಿ ಎಂದು ವಾದಿಸಿದ್ದಲ್ಲದೇ ಕರೆಯನ್ನು ಥಟ್ಟನೆ ಕಡಿತಗೊಳಿಸಿದರು. ಅಲ್ಲದೇ ತನ್ನ ನಂಬರ್ ಅನ್ನು ಹೆಚ್ ಆರ್ ಬ್ಲಾಕ್ ಮಾಡಿದರು ಎಂದು ರಾಹುಲ್ ದೂರಿದ್ದಾರೆ.
ಇದು ಕೇವಲ ರಾಹುಲ್ ಒಬ್ಬರ ಕತೆಯಲ್ಲ, ಪಿಐಪಿ ಅಥವಾ ನೋಟೀಸ್ ಪಿರೇಡ್ ಯಾವುದನ್ನು ನಡೆಸದೇ ಕೇವಲ ಫೋನ್ ಕರೆ ಮಾಡಿ ಆಗಿಂದಾಗಲೇ ಉದ್ಯೋಗಿಗಳನ್ನು ಬೈಜೂಸ್ ವಜಾ ಮಾಡುತ್ತಿದೆ ಎಂದು ಮನಿ ಕಂಟ್ರೋಲ್ ವೆಬ್ ವರದಿ ಮಾಡಿದೆ. ಈ ಸುತ್ತಿನಲ್ಲಿ 100ರಿಂದ 500ರವರೆಗೆ ಉದ್ಯೋಗಿಗಳ ವಜಾ ಮಾಡಲಾಗುತ್ತಿದೆ. ಕಳೆದೆರಡು ವರ್ಷದಿಂದ ಸಂಸ್ಥೆಯ ಹಣಕಾಸು ನಿಧಿ ಇಳಿಮುಖವಾಗಿದ್ದು, ಹೂಡಿಕೆದಾರರು ಮತ್ತು ಇತರ ಮಧ್ಯಸ್ಥಗಾರರ ನಡುವೆ ಕಾನೂನು ಸಮರ ನಡೆಯುತ್ತಿರುವುದರಿಂದ ಬೈಜುಸ್ ಕನಿಷ್ಠ 10,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೊನೆಯದಾಗಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಸುಮಾರು 14,000 ಉದ್ಯೋಗಿಗಳು ಬೈಜುಸ್‌ನ ಭಾರತ ಘಟಕದಲ್ಲಿ ಉದ್ಯೋಗದಲ್ಲಿದ್ದರು.
ಬೈಜುಸ್ ರವೀಂದ್ರನ್‌ಗೆ ಹೆಚ್ಚಿದ ಸಂಕಷ್ಟ, ಸಿಇಒ ಹೊರಹಾಕಲು ಹೂಡಿಕೆದಾರರಿಂದ ಮೊಕದ್ದಮೆ!
ಮನಿ ಕಂಟ್ರೋಲ್ ವೆಬ್ ವರದಿ ಪ್ರಕಾರ, ಬೈಜೂಸ್‌ನ ವಕ್ತಾರರೊಬ್ಬರು ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ. ನಾವು ಅಕ್ಟೋಬರ್ 2023 ರಲ್ಲಿ ಘೋಷಿಸಿದಂತೆ ನಮ್ಮ ಕಾರ್ಯಾಚರಣೆಯನ್ನು ಸರಳಗೊಳಿಸಲು, ವೆಚ್ಚ ಕಡಿಮೆ ಮಾಡಲು ಮತ್ತು ಉತ್ತಮ ಹಣದ ಹರಿವಿನ ನಿರ್ವಹಣೆಗಾಗಿ ವ್ಯಾಪಾರದ ಪುನರ್ರಚನೆಯ ಅಂತಿಮ ಹಂತದಲ್ಲಿದ್ದೇವೆ ಎಂದು ಹೇಳಿದ್ದಾರೆ ಎಂದು ವರದಿ ಆಗಿದೆ. ಸಂಸ್ಥೆ ವಿರುದ್ಧದ ಪ್ರಕರಣಗಳಿಂದಾಗಿ ನಾವು ಬಹಳ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ. ಪ್ರಸ್ತುತ ಸಂದರ್ಭಗಳನ್ನು ಗಮನಿಸಿದರೆ ಪ್ರತಿಯೊಬ್ಬ ಉದ್ಯೋಗಿ ಮತ್ತು ಸಂಸ್ಥೆಯ ಪರಿಸರ ವ್ಯವಸ್ಥೆಯು ಪ್ರಚಂಡವಾದ ಒತ್ತಡವನ್ನು ಎದುರಿಸುತ್ತಿದೆ ಎಂದು ಬೈಜೂಸ್ ವಕ್ತಾರರು ಹೇಳಿದ್ದಾರೆ.
ಪ್ರಸ್ತುತ ಫೋನ್ ಕಾಲ್ ನಂತರ ನೌಕರರಿಗೆ ಇಮೇಲ್ ಕಳುಹಿಸಲಾಗುತ್ತಿದೆ. ಅದರಲ್ಲಿ ಮಾರನೇ ದಿನವೇ ಕೆಲಸದ ಕೊನೆ ದಿನ ಎಂದು ಮಾಹಿತಿ ನೀಡಲಾಗುತ್ತದೆ. ನಿರ್ಗಮನ ನೀತಿಯ ಪ್ರಕಾರ ನಿಮ್ಮ ಪೂರ್ಣ ಮತ್ತು ಅಂತಿಮ ಪರಿಹಾರವನ್ನು ಮಾಡಲಾಗುತ್ತದೆ. ನಿಮ್ಮ ಸಂಪೂರ್ಣ ಮತ್ತು ಅಂತಿಮ ಪರಿಹಾರವನ್ನು ಪ್ರಕ್ರಿಯೆಗೊಳಿಸಲು ನಿಮ್ಮ ಸ್ವಾಧೀನದಲ್ಲಿರುವ ಕಂಪನಿಯ ಎಲ್ಲಾ ಸ್ವತ್ತುಗಳು ಮತ್ತು ಸ್ವಾಮ್ಯದ ಮಾಹಿತಿಯನ್ನು ದಯವಿಟ್ಟು ಹಸ್ತಾಂತರಿಸಿ. ನಿರ್ಗಮನ ಔಪಚಾರಿಕತೆಗಳ ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು separations@byjus.com ಅನ್ನು ಸಂಪರ್ಕಿಸಿ ಎಂದು ಇಮೇಲ್‌ನಲ್ಲಿ ತಿಳಿಸಲಾಗಿದೆ.
ಈ ಹೊಸ ಸುತ್ತಿನ ಲೇ ಆಫ್ ಪ್ರಾಥಮಿಕವಾಗಿ ಸಂಸ್ಥೆಯ ಸೇಲ್ಸ್ ಕಾರ್ಯದ ಮೇಲೆ ಪರಿಣಾಮ ಬೀರಲಿದೆ. ಕಂಪನಿಯಿಂದ ವಜಾ ಆದ ಮತ್ತೊರ್ವ ಉದ್ಯೋಗಿ ಮನಿ ಕಂಟ್ರೋಲ್ ವೆಬ್ ಜೊತೆ ಪ್ರತಿಕ್ರಿಯಿಸಿದ್ದು, ಅವರು ಹೇಳುವ ಪ್ರಕಾರ ಅವರು ಸೇರಿದಂತೆ ಅವರ ಜೊತೆ ಕೆಲಸ ಮಾಡುತ್ತಿದ್ದ ಮತ್ತಿಬ್ಬರು ಸೇಲ್ಸ್ ಎಕ್ಸಿಕ್ಯೂಟಿವ್‌ಗಳನ್ನು ಟರ್ಮಿನೇಟ್ ಮಾಡಲಾಗಿದೆ. ಇವರು ಬೈಜೂಸ್‌ನ ಮಹರಾಷ್ಟ್ರದ ಟ್ಯೂಷನ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿ ಆಗಿದೆ.