Asianet Suvarna News Asianet Suvarna News

ಬೆಂಗಳೂರಿನ ಈ ಸಿಇಒ ನೀವು ಕೇಳಿದಷ್ಟು ಸ್ಯಾಲರಿ ಕೊಡ್ತಾರೆ, ಚೌಕಾಸಿ ಮಾತೇ ಇಲ್ಲ!

ನಿಮ್ಮ ಸ್ಯಾಲರಿ ನಿರೀಕ್ಷೆ ಏನು? ಇದು ಸಂದರ್ಶನ ಕೊನೆಯ ಹಂತದಲ್ಲಿನ ಪ್ರಶ್ನೆ. ಸ್ಯಾಲರಿ ಎಷ್ಟೇ ಹೇಳಿದರೂ ಅಲ್ಲೊಂದು ಚೌಕಾಸಿ, ಕೊನೆಗೆ ಒಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬಹುತೇಕರಿಗೆ ಎದುರಾಗಿರುತ್ತದೆ. ಆದರೆ ಬೆಂಗಳೂರಿನ ಈ ಸಿಇಒ ಹಾಗಲ್ಲ, ನೀವು ಸ್ಯಾಲರಿ ಕೇಳುವಾಗ ಹೆಚ್ಚೇ ಕೇಳಿದರೂ ಒಕೆ. ಕೇಳಿದಷ್ಟು ಸಂಬಳ ನಿಮ್ಮ ಕೈಗಿಡುತ್ತಾರೆ.
 

Bengaluru CEO literally pay what candidate ask for says no negotiation for salary ckm
Author
First Published Aug 3, 2024, 3:02 PM IST | Last Updated Aug 3, 2024, 3:02 PM IST

ಬೆಂಗಳೂರು(ಆ.03)  ಕೆಲಸದ ಸಂದರ್ಶನದಲ್ಲಿ ಸ್ಯಾಲರಿ ವೇಳೆ ಚೌಕಾಸಿ ಸಾಮಾನ್ಯ. ಇದಕ್ಕಾಗಿ ಹಲವರು ಕೇಳುವಾಗಲೇ ಸ್ವಲ್ಪ ಜಾಸ್ತಿ ಕೇಳಿ ಚೌಕಾಸಿ ಬಳಿಕ ತಮ್ಮ ನಿರೀಕ್ಷಿತ ವೇತನ ಫಿಕ್ಸ್ ಆಗುತ್ತಾರೆ. ಆದರೆ ಹಲವು ಬಾರಿ ಉಲ್ಟಾ ಆಗುತ್ತದೆ. ಕೆಲಸ ಬೇಕಾದ ಅನಿವಾರ್ಯತೆಯಲ್ಲಿ ಕಂಪನಿ ಸಿಇಒ, ಮ್ಯಾನೇಜರ್ ಹೇಳಿದ ವೇತನಕ್ಕೆ ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿ ಸಿಇಒ ಅರುಣ್ ವಿ ಭಿನ್ನ. ಇವರ ಸಂದರ್ಶನದಲ್ಲಿ ಆರಂಭಿಕ ಹಂತದ ಸಂದರ್ಶನದಲ್ಲಿ ಪಾಸ್ ಆದರೆ ಮುಗಿತು. ಕೊನೆಯ ಹಂತದಲ್ಲಿ ಸ್ಯಾಲರಿ ಚೌಕಾಸಿ ಇಲ್ಲ. ಕೇಳುವ ವೇತನ ಹತ್ತು ಇಪ್ಪತು ಸಾವಿರ ಹೆಚ್ಚಿದ್ದರೂ ಚೌಕಾಸಿ ಇಲ್ಲ, ಒಕೆ ಎಂದುಬಿಡುತ್ತಾರೆ. ಹೀಗೆ 18 ಮಂದಿಯನ್ನು ಅರುಣ್ ವಿ ಆಯ್ಕೆ ಮಾಡಿದ್ದಾರೆ. 

ಝೋಕೋ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಸಿಇಒ ಅರುಣ್ ವಿ ಸಂದರ್ಶನ ಶೈಲಿ ಭಿನ್ನ. ಇದಕ್ಕೆ ಕಾರಣಗಳನ್ನೂ ನೀಡಿದ್ದಾರೆ. ಇವರ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುವಾಗ ವೇತನ ವಿಚಾರದಲ್ಲಿ ಯಾವುದೇ ಚರ್ಚೆ ಇಲ್ಲ. ಇಲ್ಲ ಕೆಲಸ ಅರಸಿ ಬಂದ ವ್ಯಕ್ತಿ ಎಷ್ಟು ವೇತನ ನಿರೀಕ್ಷಿಸುತ್ತಾನೆ ಅದೇ ಫೈನಲ್. ಅದರಿಂದ ಒಂದು ರೂಪಾಯಿ ಕಡಿಮೆ ಮಾಡದೆ ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ.

ನೌಕರಿ ಜೊತೆ ಹುಲ್ಲು ಬೆಳೆದರೆ ಸಾಕು, ಶೇ.100 ರಷ್ಟು ಟ್ಯಾಕ್ಸ್ ಉಳಿತಾಯ ಟಿಪ್ಸ್ ನೀಡಿದ ವೈರಲ್ ಸಿಎ!

ಪ್ರತಿಭಾನ್ವಿತ ಹಾಗೂ ನುರಿತ ಕೆಲಸಗಾರರನ್ನು ತಮ್ಮ ಕಂಪನಿಯಲ್ಲೇ ಉಳಿಸಿಕೊಳ್ಳಲು ತಾವು ಕಂಡುಕೊಂಡ ಮಾಗ್ರ ಏನು ಅನ್ನೋದನ್ನು ಅರುಣ್ ವಿ ಹೇಳಿಕೊಂಡಿದ್ದಾರೆ. 18 ಮಂದಿಯನ್ನು ಇದೇ ರೀತಿ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಕುರಿತು ಅರುಣ್ ವಿ ಹೇಳಿದ್ದಾರೆ.

ಸ್ಯಾಲರಿ ವಿಚಾರದಲ್ಲಿ ಚೌಕಾಸಿ ಮಾಡುವುದರಿಂದ ಉದ್ಯೋಗ ಅಕಾಂಕ್ಷಿಗಳು, ಅಥವಾ ಕೆಲಸಕ್ಕೆ ಸೇರಿಕೊಂಡವರಿಗೆ ಸಂಸ್ಥೆ ಮೇಲಿನ ನಂಬಿಕೆ ಹೊರಟು ಹೋಗುತ್ತದೆ. ಅವರು ಕೇಳಿದ ಸ್ಯಾಲರಿ ನೀಡುವುದರಿಂದ ಉದ್ಯೋಗಿಗಳಿಗೆ ಅವರ ಮೌಲ್ಯದ ಕುರಿತು ಹೆಮ್ಮೆಯಾಗುತ್ತದೆ. ಜೊತೆಗೆ ಅವರ ಅನುಭವ ಈ ಕಂಪನಿಗೆ ಅವಶ್ಯಕತೆ ಇದೆ ಅನ್ನೋದನ್ನು ಮನಗಾಣುತ್ತಾರೆ. ಅವರು ಕೇಳಿದ ವೇತನ ಸಿಗುವಾಗ ಉತ್ತಮವಾಗಿ ಕೆಲಸ ಮಾಡುತ್ತಾರೆ. ಕೆಲಸದಲ್ಲಿ ವಿಮುಖರಾಗುವ ಯಾವುದೇ ಸಂದರ್ಭ ಇರುವುದಿಲ್ಲ. ಜೊತೆಗೆ ಸ್ಯಾಲರಿ ವಿಚಾರದಲ್ಲಿ ಚರ್ಚೆ, ಬೇಸರ, ನಿರಾಸೆ, ಆಕ್ರೋಶ ಹೊರಹಾಕುವ ಪರಿಸ್ಥಿತಿಯೂ ಎದುರಾಗುವುದಿಲ್ಲ. ಇದು ನಮ್ಮ ಕಂಪನಿಯಲ್ಲಿ ನಮಗೆ ಸಹಕಾರಿಯಾಗಿದೆ ಎಂದು ಅರುಣ್ ವಿ ಹೇಳಿದ್ದಾರೆ.

ಸಂದರ್ಶನದಲ್ಲಿ ಒಂದೇ ಒಂದು ಬಾರಿ ಸ್ಯಾಲರಿ ವಿಚಾರದಲ್ಲಿ ನಾನು ಚೌಕಾಸಿ ಮಾಡಿದ್ದೇನೆ. ಆದರೆ ಅದು ಕಡಿಮೆ ಮಾಡಲು ಅಲ್ಲ. ಅಭ್ಯರ್ಥಿ ಇತರರಿಗೆ ಹೋಲಿಕೆ ಮಾಡಿ, ಮಾರುಕಟ್ಟೆಯಲ್ಲಿ ಆ ಸ್ಥಾನಕ್ಕಿರುವ ವೇತನವನ್ನು ಅರಿತು ಕೇಳಿದ್ದರು. ತಮ್ಮ ಮೌಲ್ಯವನ್ನು ತಾವೇ ಕಡಿಮೆ ಮಾಡಿಕೊಂಡು ಸ್ಯಾಲರಿ ಕೇಳಿದಾಗ, ವೇತನ ಹೆಚ್ಚಿಸಿ ಕೇಳುವಂತೆ ಸೂಚಿಸಿದ್ದೇನೆ. ಬಳಿಕ ಅವರಿಗೆ ಹೆಚ್ಚಿನ ವೇತನ ನೀಡಿ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಅರುಣ್ ವಿ ಹೇಳಿದ್ದಾರೆ.

ರತನ್ ಟಾಟಾ ಕಂಪೆನಿಯ ಸಿಇಓ ಚಾಣಾಕ್ಷತನಕ್ಕೆ 7.21 ಕೋಟಿ ವೇತನ!
 

Latest Videos
Follow Us:
Download App:
  • android
  • ios