Asianet Suvarna News Asianet Suvarna News

ಏಮ್ಸ್‌ನಲ್ಲಿ 3036 ಬೋಧಕೇತರ ಗ್ರೂಪ್ ಬಿ, ಗ್ರೂಪ್‌ ಸಿ ಹುದ್ದೆಗಳು

ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 3036 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಡಿ.1ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

 AIIMS Recruitment 2023  Non-Teaching Group B, Group C Posts in gow
Author
First Published Nov 29, 2023, 9:17 AM IST

ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 3036 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಡಿ.1ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ (ಎಐಐಎಂಎಸ್), ನವದೆಹಲಿಯು ಗುತ್ತಿಗೆ ಆಧಾರದ ಮೇಲೆ ಬೋಧಕೇತರ ಗ್ರೂಪ್ ಬಿ ಮತ್ತು ಸಿ ವಿಭಾಗದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಮಾಡಲಿದೆ. ಸಹಾಯಕ ಆಡಳಿತಾಧಿಕಾರಿ, ಸಹಾಯಕ ಆಹಾರ ತಜ್ಞರು, ಸಹಾಯಕ ಇಂಜಿನಿಯರ್ (ಸಿವಿಲ್/(ಎಲೆಕ್ಟ್ರಿಕಲ್), ಸಹಾಯಕ ಲಾಂಡ್ರಿ ಮೇಲ್ವಿಚಾರಕರು, ಸಹಾಯಕ ಮಳಿಗೆ ಅಧಿಕಾರಿ, ಶ್ರವಣಶಾಸ್ತ್ರಜ್ಞ ಮತ್ತು ಸ್ಪೀಚ್ ಥೆರಪಿಸ್ಟ್/ಕಿರಿಯ ಶ್ರವಣಶಾಸ್ತ್ರಜ್ಞ/ ತಾಂತ್ರಿಕ ಸಹಾಯಕ, ಆಡಿಯಾಲಜಿಸ್ಟ್, ಬಯೋ ಮೆಡಿಕಲ್ ಇಂಜಿನಿಯರ್, ಕ್ಯಾಷಿಯರ್, ಕೋಡಿಂಗ್ ಕ್ಲರ್ಕ್/ಮೆಡಿಕಲ್ ರೆಕಾರ್ಡ್ ತಂತ್ರಜ್ಞರು/ಜೂನಿಯರ್ ಮೆಡಿಕಲ್ ರೆಕಾರ್ಡ್ ಅಧಿಕಾರಿ)/ವೈದ್ಯಕೀಯ ದಾಖಲೆ ತಂತ್ರಜ್ಞರು (ರೆಕಾರ್ಡ್ ಕ್ಲರ್ಕ್) , ಡಾರ್ಕ್ ರೂಮ್ ಅಸಿಸ್ಟೆಂಟ್ ಗ್ರೇಡ್ 2, ಡಯಟಿಶಿಯನ್, ಡ್ರೈವರ್, ಭ್ರೂಣಶಾಸ್ತ್ರಜ್ಞ, ಆರೋಗ್ಯ ಶಿಕ್ಷಣತಜ್ಞ (ಸಾಮಾಜಿಕ ಮನಶ್ಶಾಸ್ತ್ರಜ್ಞ) , ಹಿಂದಿ ಅಧಿಕಾರಿ, ಜೂನಿಯರ್ ಅಡ್ಮಿನಿಸ್ಟ್ರೇಟಿವ್ ಆಫೀಸರ್/ಆಫೀಸ್ ಅಸಿಸ್ಟೆಂಟ್ (ಎನ್.ಎಸ್.)/ಕಾರ್ಯನಿರ್ವಾಹಕ ಸಹಾಯಕ , ಜೂನಿಯರ್ ಫಿಸಿಯೋಥೆರಪಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಮ್ಯಾನೇಜರ್/ಸೂಪರ್ವೈಸರ್/ಗ್ಯಾಸ್ ಆಫೀಸರ್, ಮೆಡಿಕಲ್ ರೆಕಾರ್ಡ್ ಆಫೀಸರ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಫಿಸಿಯೋಥೆರಪಿಸ್ಟ್, ಸೀನಿಯರ್ ನರ್ಸಿಂಗ್ ಆಫೀಸರ್/ಸ್ಟಾಫ್ ನರ್ಸ್ ಗ್ರೇಡ್-1, ಸ್ಟೆನೋಗ್ರಾಫರ್, ಯೋಗ ಬೋಧಕ ಮುಂತಾದ ಒಟ್ಟು 3036 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆ: 3036 ಹುದ್ದೆಗಳು

ಕಾನ್ಸ್‌ಟೇಬಲ್‌ ನೇಮಕಾತಿ, ಡಿ.10ರಂದು ಲಿಖಿತ ಪರೀಕ್ಷೆ ಯಾವೆಲ್ಲ ಜಿಲ್ಲೆಯಲ್ಲಿ ನಡೆಯಲಿದೆ?

ಪ್ರಮುಖ ದಿನಾಂಕಗಳು

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-12-2023

ಪ್ರವೇಶ ಪತ್ರ ನೀಡುವ ದಿನಾಂಕ: 12-12-2023

ಪರೀಕ್ಷೆಯ ದಿನಾಂಕ

18-12-2023 ರಿಂದ 20-12-2023 ವರೆಗೆ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ/ಒಬಿಸಿಗೆ ಅಭ್ಯರ್ಥಿಗಳಿಗೆ : ರೂ. 3,000

ಎಸ್‌ ಸಿ/ ಎಸ್‌ ಟಿ/ ಇಡಬ್ಲ್ಯೂಸಿ ಅಭ್ಯರ್ಥಿಗಳಿಗೆ : ರೂ. 2,400

ವಯಸ್ಸಿನ ಮಿತಿ: ಗರಿಷ್ಠ 35 ವರ್ಷ

4 ವರ್ಷದಿಂದ ನಡೆಯದ ಎಫ್‌ಡಿಎ, ಎಸ್‌ಡಿಎ ನೇಮಕಾತಿ, 150 ಹುದ್ದೆಗಳ ನೇಮಕಕ್ಕೆ 5 ಲಕ್ಷಕ್ಕೂ ಹೆಚ್ಚು ಅರ್ಜಿ ನಿರೀಕ್ಷೆ!

ಶೈಕ್ಷಣಿಕ ವಿದ್ಯಾರ್ಹತೆಗಳು: ( ಸಾಮಾನ್ಯ ಅರ್ಹತೆಗಳು)

1. ಅಭ್ಯರ್ಥಿಗಳು ಮಾನ್ಯತೆ ಪಡೆದ ಪರೀಕ್ಷಾ ಮಂಡಳಿಯಿಂದ ಎಸ್‌ ಎಸ್‌ ಎಲ್‌ ಸಿ ಮತ್ತು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯನ್ನು ತೇರ್ಗಡೆ ಹೊಂದಿರಬೇಕು.

2. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮ್ಯಾನೇಜಮೆಂಟ್‌ ವಿಭಾಗದಲ್ಲಿ ಎಂ ಬಿ ಎ/ ಡಿಪ್ಲೊಮಾ ಅಥವಾ ಅದಕ್ಕೆ ತತ್ಸಮಾನ ಪದವಿಯನ್ನು ಪಡೆದಿರಬೇಕು.

3. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್/ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.

4. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮನೋವಿಜ್ಞಾನದಲ್ಲಿ ಎಂ ಎ/ಎಂ ಎಸ್ಸಿ / ಎಂ ಫಿಲ್‌ ಪದವಿ ಪಡೆದಿರಬೇಕು.

5. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಜೀವ ವಿಜ್ಞಾನ/ ಪ್ರಾಣಿಶಾಸ್ತ್ರ/ ಸೂಕ್ಷ್ಮ ಜೀವಶಾಸ್ತ್ರ/ ಜೆನೆಟಿಕ್ಸ್/ ಶರೀರಶಾಸ್ತ್ರ/ ಬಯೋಟೆಕ್ನಾಲಜಿ/ ಬಯೋಕೆಮಿಸ್ಟ್ರಿ/ ಅನ್ಯಾಟಮಿ/ ಎಂಡೋಕ್ರೈನಾಲಜಿ ಪದವಿ ಅಥವಾ ಎಂ ಡಿ/ಪಿ ಹೆಚ್‌ ಡಿ/ ಎಂ ವಿ ಎಸ್ಸಿ ಪದವಿ ಪಡೆದಿರಬೇಕು.

6. ಕಡ್ಡಾಯವಾಗಿ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.

ಸೂಚನೆ: ಹುದ್ದೆವಾರು ಹೆಚ್ಚಿನ ವಿದ್ಯಾರ್ಹತೆಗಾಗಿ ಅಧಿಸೂಚನೆಯನ್ನು ನೋಡತಕ್ಕದ್ದು.

ಪರೀಕ್ಷೆಯ ಮಾದರಿ

ಈ ಮೇಲ್ಕಂಡ ಹುದ್ದೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದು ೨ ಪತ್ರಿಕೆಯನ್ನು ಹೊಂದಿರುತ್ತದೆ. 1. ಸಾಮಾನ್ಯ ಪತ್ರಿಕೆ 2. ಕಡ್ಡಾಯ ಪತ್ರಿಕೆ .

1. ಸಾಮಾನ್ಯ ಪತ್ರಿಕೆ : ಈ ಪರೀಕ್ಷೆಯು ಜನರಲ್ ಇಂಟೆಲಿಜೆನ್ಸ್ ಮತ್ತು ರೀಸನಿಂಗ್, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ , ಕಂಪ್ಯೂಟರ್‌ ಜ್ಞಾನ , ಇಂಗ್ಲಿಷ್/ಹಿಂದಿ ಭಾಷೆ ಮತ್ತು ಗ್ರಹಿಕೆ ಮತ್ತು ಸಾಮಾನ್ಯ ಜ್ಞಾನದ ವಿಷಯಕ್ಕೆ ಸಂಬಂಧಿಸಿದಂತೆ ಒಟ್ಟು 40 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ ನಿಗದಿ ಪಡಿಸಲಾಗಿದ್ದು, 45 ನಿಮಿಷಗಳ ಅವಧಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

2. ಕಡ್ಡಾಯ ಪತ್ರಿಕೆ : ಅಭ್ಯರ್ಥಿಯು ತಾನು ಅರ್ಜಿ ಸಲ್ಲಿಸಿದ ಹುದ್ದೆಯ ಶೈಕ್ಷಣಿಕ ವಿದ್ಯಾರ್ಹತೆಗೆ ಅನುಗುಣವಾಗಿ ಕಡ್ಡಾಯ ಪತ್ರಿಕೆಯನ್ನು ನಡೆಸಲಾಗುತ್ತದೆ.

ಸೂಚನೆ: ತಪ್ಪು ಉತ್ತರಕ್ಕೆ ಯಾವುದೇ ಋಣಾತ್ಮಕ ಅಂಕ ಕಡಿತಗೊಳಿಸಲಾಗುವುದಿಲ್ಲ.

ಅರ್ಹತೆ ಮಾನದಂಡಗಳು

ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಈ ಕೆಳಗಿನ ಕನಿಷ್ಟ ಅರ್ಹತಾ ಅಂಕಗಳನ್ನು ಪಡೆಯಬೇಕು.

1. ಸಾಮಾನ್ಯ/ ಇಡ್ಬ್ಲೂಎಸ್‌ ಅಭ್ಯರ್ಥಿಗಳು ಶೇಕಡಾ 40 ಅಂಕ ಪಡೆಯಬೇಕು.

2. ಓಬಿಸಿ ಅಭ್ಯರ್ಥಿಗಳು ಶೇಕಡಾ 35 ಅಂಕ ಪಡೆಯಬೇಕು.

3. ಎಸ್‌ ಸಿ/ ಎಸ್‌ ಟಿ ಅಭ್ಯರ್ಥಿಗಳು ಶೇಕಡಾ 30 ಅಂಕ ಪಡೆಯಬೇಕು.

4. ಎಲ್ಲಾ ವರ್ಗದ ಅಂಗವಿಕಲ ಅಭ್ಯರ್ಥಿಗಳು ಶೇಕಡಾ 30 ಅಂಕ ಪಡೆಯಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವೆಬ್‌ಸೈಟ್‌ ವೀಕ್ಷಿಸಬಹುದು.

Follow Us:
Download App:
  • android
  • ios