Asianet Suvarna News Asianet Suvarna News

Belagavi Asmite Mela: ಬೆಳಗಾವಿಯಲ್ಲಿ ನಡೆದ ಮಹಿಳಾ ಸ್ವ ಸಹಾಯ ಸಂಘಗಳ ‘ಅಸ್ಮಿತೆ’ ಮೇಳದಲ್ಲಿ ದಾಖಲೆಯ ರೂ 60 ಲಕ್ಷ ವಹಿವಾಟು

  • ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ
  • ಡಿ.15ರಿಂದ 20ರವರೆಗೆ ನಡೆದಿದ್ದ ಅಸ್ಮಿತೆ ಮೇಳ
  • ದಾಖಲೆಯ ಸುಮಾರು 60 ಲಕ್ಷ ರೂಪಾಯಿಗಳ ವಹಿವಾಟು 
achieves  Record turnover of Rs 60 lakh at Belagavi asmite Mela 2021 gow
Author
Bengaluru, First Published Dec 27, 2021, 3:27 PM IST

ಬೆಂಗಳೂರು: ಬೆಳಗಾವಿಯಲ್ಲಿ ಈಚೆಗೆ ಏರ್ಪಡಿಸಿದ್ದ (ಡಿ.15ರಿಂದ 20ರವರೆಗೆ) ಸ್ವಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳ ‘ಅಸ್ಮಿತೆ’ಯಲ್ಲಿ ದಾಖಲೆಯ ಸುಮಾರು 60 ಲಕ್ಷ ರೂಪಾಯಿಗಳ ವಹಿವಾಟು ನಡೆದಿದೆ ಎಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. 

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿರುವ ಅವರು, ಮುಖ್ಯಮಂತ್ರಿ ಅವರು ಉದ್ಘಾಟಿಸಿದ್ದ ಈ ಮೇಳದಲ್ಲಿ 7 ಆಹಾರ ಮಳಿಗೆಗಳೂ ಸೇರಿದಂತೆ ಒಟ್ಟು 140 ಮಳಿಗೆಗಳು ಭಾಗವಹಿಸಿದ್ದವು. ಇದುವರೆಗೆ ಈ ರೀತಿಯ ಮೇಳಗಳಲ್ಲಿ ಆಗಿರುವ ಅತಿ ಹೆಚ್ಚು ವಹಿವಾಟು ಇದಾಗಿದ್ದು, ಇದಕ್ಕಾಗಿ‌ ಶ್ರಮಿಸಿದ ಎಲ್ಲ ಅಧಿಕಾರಿಗಳು, ಸಿಬ್ಬಂದಿಗೆ ಅವರು ಅಭಿನಂದನೆ ಸಲ್ಲಿಸಿದರು. 

ಸೆಣಬಿನ ಬ್ಯಾಗುಗಳನ್ನು ಮಾಡುವ ವಿಜಯಪುರ ಎನ್.ಆರ್.ಎಲ್.ಎಂ.ನ ಯಶೋಧಾ ಸ್ವಸಹಾಯ ಗುಂಪು ಎಲ್ಲಕ್ಕಿಂತ ಹೆಚ್ಚು ರೂ. 1,26,900 ವ್ಯಾಪಾರ ನಡೆಸಿದೆ. ನಂತರದ ಸ್ಥಾನದಲ್ಲಿ, ಕಾಟನ್ ಬ್ಯಾಗುಗಳು ಮತ್ತು ಕ್ವಿಲ್ಟ್ ಗಳನ್ನು ಮಾಡುವ ಬೆಳಗಾವಿಯ ಮಾತಾ ಸಾವಿತ್ರಿ ಬಾಯಿ ಸ್ವಸಹಾಯ ಸಂಘ ರೂ 1,19,558, ವುಡ್ ಇನ್ ಲೇಗಳನ್ನು ಮಾಡುವ ಮೈಸೂರಿನ ಚಾಮುಂಡೇಶ್ವರಿ ಸ್ವಸಹಾಯ ಸಂಘ ರೂ 1,13,830, ಇಳಕಲ್ ಸೀರೆಗಳನ್ನು ಮಾಡುವ ಶ್ರೀ ರೇವಣ್ಣಸಿದ್ದೇಶ್ವರ ಸ್ವಸಹಾಯ ಸಂಘ ರೂ 1,00,026 ಹಾಗೂ ಆಭರಣ ಮತ್ತು ಪೇಟಿಂಗ್ ಗಳನ್ನು ಮಾಡುವ ಬೆಳಗಾವಿಯ ಜನವಾಣಿ ಮಾತಾ ಸ್ವಸಹಾಯ ಸಂಘವು ರೂ 87,420 ಮೊತ್ತದ ವ್ಯಾಪಾರಗಳನ್ನು ಮಾಡಿವೆ ಎಂದು ಸಚಿವರು ವಿವರಿಸಿದ್ದಾರೆ. 

JOB TIPS: ನಿಮಗೆ ಯಾವ ಉದ್ಯೋಗ ಸೂಕ್ತವಾಗುತ್ತದೆ? ಇಲ್ಲಿದೆ ಟಿಪ್ಸ್

ರಾಜ್ಯ ಜೀವನೋಪಾಯ ಅಭಿಯಾನ (ನಗರ ಮತ್ತು ಗ್ರಾಮೀಣ), ಕೌಶಲಾಭಿವೃದ್ಧಿ- ಉದ್ಯಮಶೀಲತೆ - ಜೀವನೋಪಾಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಈ ಮೇಳವನ್ನು ನಡೆಸಲಾಗಿತ್ತು. ಬೇಕರಿ ಹಾಗೂ ಇತರೆ ಲಘು ತಿನಿಸುಗಳು, ಬಗೆಬಗೆಯ ಉಪ್ಪಿನಕಾಯಿಗಳು, ಹೈನು ತಿನಿಸುಗಳು, ಮಸಾಲೆ ಪದಾರ್ಥಗಳು, ಉಡುಪುಗಳು, ಸೀರೆಗಳು, ವಿವಿಧ ರೀತಿಯ ಹಾರಗಳು, ಚರ್ಮ ಹಾಗೂ ಕೂದಲು ಆರೈಕೆ ಉತ್ಪನ್ನಗಳು, ಸ್ಯಾನಿಟೇಷನ್ ಉತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳು ಹಾಗೂ ಕೈಕುಸುರಿ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುವ ಜೊತೆಗೆ ಮಾರಾಟಕ್ಕೆ ಇಡಲಾಗಿತ್ತು.

ರಾಜ್ಯದಲ್ಲಿ ಸದ್ಯದಲ್ಲೇ 'ಉದ್ಯೋಗ ನೀತಿ' ಜಾರಿ: ರಾಜ್ಯದಲ್ಲಿ ಶೀಘ್ರದಲ್ಲೇ ಅತ್ಯಂತ ರಚನಾತ್ಮಕವಾದ `ಉದ್ಯೋಗ ನೀತಿ'ಯನ್ನು ಜಾರಿಗೆ ತರಲಾಗುವುದು. ಈ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು ಕೊಡುತ್ತಿದ್ದು, ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ 'ಸರ್ವರಿಗೂ ಉದ್ಯೋಗ' ಕಾರ್ಯಕ್ರಮ ಲೋಕಾರ್ಪಣೆ ಮತ್ತು 'ಉದ್ಯೋಗ ಮೇಳ'ವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದ ಅವರು, ಇದುವರೆಗೂ ಉದ್ಯೋಗದಾತರಿಗೆ ಒಂದು ಸಾಮಾನ್ಯ ಸೂತ್ರದಡಿ ಪ್ರೋತ್ಸಾಹ ಮತ್ತು ಉತ್ತೇಜಕ ಭತ್ಯೆಗಳನ್ನು ಕೊಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಯಾವ ಸಂಸ್ಥೆಯು ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ ಎನ್ನುವುದನ್ನು ಆಧರಿಸಿ ಪ್ರೋತ್ಸಾಹ ಕೊಡಲಾಗುತ್ತದೆ ಎಂದರು. 

IIIT Bangalore Recruitment 2022: ಬೆಂಗಳೂರಿನ ಐಐಐಟಿಯಲ್ಲಿ Research Associate ಹುದ್ದೆ

ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ,  ಕೌಶಲ್ಯ ಪೂರೈಕೆ ಮತ್ತು ಉದ್ಯೋಗ ಸೃಷ್ಟಿ ಈ ಮೂರೂ ಅಂಶಗಳು ಒಂದರ ಜೊತೆಯಲ್ಲಿ ಇನ್ನೊಂದಿರುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ, ಶಿಕ್ಷಣ ಕ್ರಮವನ್ನು ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಬೆಸೆಯಲಾಗಿದೆ. ಇನ್ನೊಂದೆಡೆಯಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವಾತಾವರಣದೊಂದಿಗೆ ಬೆಸೆಯಲಾಗುತ್ತಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಹತ್ತಾರು ಒಡಂಬಡಿಕೆಗಳನ್ನು ಮಾಡಿಕೊಂಡಿವೆ ಎಂದು ಅವರು ವಿವರಿಸಿದರು. 

Follow Us:
Download App:
  • android
  • ios