ಬಾಗಲಕೋಟೆ, (ಜ.31): ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಮಾಜಿ ಶಿಷ್ಯ ಶಾಸಕ ಜಮೀರ್ ಅಹ್ಮದ ಖಾನ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯ ಕೆರೂರ ಗ್ರಾಮದಲ್ಲಿ ಇಂದು (ಭಾನುವಾರ) ಮಾತನಾಡಿದ ಜಮೀರ್, 2006ರಲ್ಲಿ ಎಚ್.ಡಿ, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಒಳ್ಳೆಯ ಆಡಳಿತ ಕೊಟ್ರು. ಅದನ್ನು ಒಪ್ಪಿಕೊಳ್ಳುತ್ತೇನೆ. ಈಗ ಕುಮಾರಸ್ವಾಮಿ ಯಾವ ಸೀಮೆ ಲೀಡರ್ ಎಂದು ಕಿಡಿಕಾರಿದರು.

ಜೆಡಿಎಸ್ ಪಕ್ಷ ಎಲ್ಲಿದೆ. ಜೆಡಿಎಸ್ ಕೋಮುವಾದಿ ಪಕ್ಷದೊಂದಿಗೆ ಸೇರಿದ್ದಾರೆ. ಗೋ ಹತ್ಯೆ ನಿಷೇಧ ಕಾಯ್ದೆ, ಉಪಸಭಾಪತಿ ಆಯ್ಕೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ಯಾವ ಸೆಕ್ಯುಲರ್ ಪಕ್ಷ ಇದು ಎಂದು ಪ್ರಶ್ನಿಸಿದರು.

ಮೈತ್ರಿ ಹಳಸಿದರೂ ಮುಗಿಯದ ಕುಮಾರಸ್ವಾಮಿ ಗೋಳಾಟ..

ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ 59ಸೀಟು ಬಂದಿತ್ತು.  ಈಗ ಕುಮಾರಸ್ವಾಮಿ ಲೀಡರ್ ಅಂತಾರಲ್ಲ. ಈಗ ಆ ನಂಬರ್ ರೀಚ್ ಮಾಡೋಕೆ ಆಗಿಲ್ಲ. ಸಿದ್ದರಾಮಯ್ಯ ಇದ್ದಾಗಿನ ಜೆಡಿಎಸ್ ಶಾಸಕರ ನಂಬರ್ ರಿಚ್ ಮಾಡೋಕೆ ಆಗ್ಲಿಲ್ಲ ಎಂದು ವ್ಯಂಗ್ಯವಾಡಿದರು.

ಇಬ್ರಾಹಿಂಗೆ ಜಮೀರ್ ಟಾಂಗ್
ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನು ಮಾಡಿಲ್ಲ ಅಂತಿದ್ದಾರಲ್ಲ. ಆಗ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂಗೆ ಜಮೀರ್ ತಿರುಗೇಟು ನೀಡಿದರು.

ಸಿದ್ದರಾಮಯ್ಯರಂತಹ ಲೀಡರ್ ನಾನು ನೋಡಿಯೇ ಇಲ್ಲ. ದೇವೇಗೌಡ, ಕುಮಾರಸ್ವಾಮಿ ಅವರನ್ನು ಇಬ್ರಾಹಿಂ ಬಾಯಿಗೆ ಬಂದಂಗೆ ಬೈಯ್ದಿದ್ದರು ಎಂದು ಹೇಳಿದರು.