Vijayanagara: ಕನ್ನಡದ ಹೆಮ್ಮೆಯ ಮಗಳು ಉಷಾ ಚರಣ್ ಆಂಧ್ರದ ಸಚಿವೆ

ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ತಾಯಕನಹಳ್ಳಿಯ ಉಷಾ ಚರಣ್ ಆಂಧ್ರಪ್ರದೇಶದ ಸಿಎಂ ವೈಎಸ್‌ಆರ್ ಜಗನ್ ಸಂಪುಟದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 

YSRCP MLA Usha Sri Charan Joins YS Jagans Cabinet gvd

ವರದಿ: ನರಸಿಂಹ ಮೂರ್ತಿ ಕುಲಕರ್ಣಿ

ವಿಜಯನಗರ (ಏ.11): ತವರು ಮನೆ ಕರ್ನಾಟಕದಲ್ಲಿ (Karnataka) ಸಾಮಾನ್ಯ ಮಹಿಳೆ ಆಂಧ್ರದಲ್ಲಿ ಈಗ ಇವರ ಸಚಿವೆ. ಹಳ್ಳಿಯಿಂದ ಹೈದ್ರಾಬಾದ್ (Hyderabad) ಸಚಿವ ಸಂಪುಟ ಸೇರಿದ ಸಾಧಕಿಯ ಕಥೆ ಇದು. ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ತಾಯಕನಹಳ್ಳಿಯ ಉಷಾ ಚರಣ್ (Usha Sri Charan) ಆಂಧ್ರಪ್ರದೇಶದ (Andhra Pradesh) ಸಿಎಂ ವೈಎಸ್‌ಆರ್ ಜಗನ್ (CM YS Jagan Mohan Reddy) ಸಂಪುಟದಲ್ಲಿ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆಂಧ್ರದ ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಕೂಡ್ಲಿಗಿ ತಾಲೂಕಿನ ಹೆಮ್ಮೆಯನ್ನು ಎತ್ತಿ ಹಿಡಿದಿದ್ದ ಉಷಾಚರಣ್ ಈಗ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದರಿಂದ ತವರು ಮನೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ.

ಉಷಾ ಚರಣ್ ಹಿನ್ನೆಲೆ: ಕೂಡ್ಲಿಗಿ ತಾಲೂಕು ತಾಯಕನಹಳ್ಳಿಯ ಕೆ.ವಿರುಪಾಕ್ಷಪ್ಪ ಅವರ ಪುತ್ರಿಯಾದ ಉಷಾ ಅವರು ಆಂಧ್ರದ ಚರಣ್ ಅವರ ಕೈಹಿಡಿದು ಆಂಧ್ರದ ಕಲ್ಯಾಣ ದುರ್ಗದಲ್ಲಿ ವಾಸಿಸುತ್ತಿದ್ದರು. ಉಷಾ ಅವರ ತಾಯಿಯ ತವರು ಮನೆ ಆಂಧ್ರ ಪ್ರದೇಶವಾಗಿದ್ದರಿಂದ ಮೊದಲಿನಿಂದಲೂ ಆಂಧ್ರದ ಒಡನಾಡವಿತ್ತು ಜೊತೆಗೆ ಗಂಡ ಕೂಡ ಸಕ್ರಿಯ ರಾಜಕೀಯದಲ್ಲಿ ಇರೋ ಹಿನ್ನೆಲೆ ಆಂಧ್ರ ಪ್ರದೇಶದಲ್ಲಿ ಜನಸೇವೆ ಮಾಡುತ್ತಾ ಜನಾನುರಾಗಿಯಾಗಿ ಕಳೆದ ಚುನಾವಣೆಯಲ್ಲಿ  ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಕೂಡ್ಲಿಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗೋ ಮೂಲಕ ಸಚಿವೆಯಾಗಿ ತವರು ಕೂಡ್ಲಿಗಿ ತಾಲೂಕಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

Chikkamagaluru: ಭದ್ರಾ ಹುಲಿ ಮೀಸಲು ಅಭಯಾರಣ್ಯದಲ್ಲಿ ಯುವಕರ ಮೋಜು ಮಸ್ತಿ

ತವರಿನಲ್ಲಿ ಹೆಚ್ಚಿನ ಸಂಬಂಧಿಕರು ಇಲ್ಲದೇ ಇದ್ರೂ ಸಂಭ್ರಮ: ಉಷಾ ಅವರ ತಂದೆ ಈಗಾಗಲೇ ಮರಣ ಹೊಂದಿದ್ದು, ಇವರ ಚಿಕ್ಕಪ್ಪ ಅಂಜಿನಪ್ಪ ಸಹ ತಾಯಕನಹಳ್ಳಿ ತೊರೆದು ಚಿತ್ರದುರ್ಗದಲ್ಲಿ ವಾಸಿಸುತ್ತಿದ್ದಾರೆ. ಉಷಾ ಅವರ ಅಪ್ಪನ ಅಕ್ಕ ಅಂದರೆ ಸಚಿವೆ ಉಷಾ ಅವರ ಅತ್ತೆ ಗುರಮ್ಮ ಈಗಲೂ ತಾಯಕನಹಳ್ಳಿಯಲ್ಲಿ ವಾಸಿಸುತ್ತಿದ್ದು ಗುರಮ್ಮನ  ಮಗ ಕೃಷ್ಣಪ್ಪಗೂ ಉಷಾ ಅವರು ಮಂತ್ರಿಯಾಗುವ ಮುನ್ಸೂಚನೆ ದೊರೆತಿತ್ತು. ಹೀಗಾಗಿ ತವರಿನಲ್ಲಿ ಉಷಾ ಅವರ ಸಂಬಂಧಿಕರು ಸಂತಸದಿಂದ ಸಂಭ್ರಮಿಸುತ್ತಿದ್ದಾರೆ.   

YSRCP MLA Usha Sri Charan Joins YS Jagans Cabinet gvd

ಊರಿನ ಜೊತೆಗೆ ನಂಟು ಕಳೆದುಕೊಂಡಿಲ್ಲ:
ತವರು ಮರೆಯದ ಉಷಾಚರಣ್ ತಾಯಕನಹಳ್ಳಿಯಲ್ಲಿ ತಮ್ಮೂರಿನ ಮಗಳು ಆಂದ್ರದಲ್ಲಿ ಸಚಿವೆಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸುತ್ತಾಳೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಉಷಾ ಅವರ ಸಂಬಂಧಿಕರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದರು. ಉಷಾ ಅವರ ಕುಟುಂಬಸ್ಥರು ಸ್ವಗ್ರಾಮದಲ್ಲಿ ಈಗಿಲ್ಲವಾದ್ರೂ ಇವರ ತಂದೆ ಹಾಗೂ ಹಿರಿಯರ ಸಮಾಧಿಗಳು ಇಲ್ಲಿಯೇ ಇರುವುದ್ದರಿಂದ ವರ್ಷಕ್ಕೆ ಒಂದೆರಡು ಬಾರಿ ಬಂದು ಹಿರಿಯರಿಗೆ ಗೌರವ ಸಲ್ಲಿಸಿ ಹೋಗುವುದನ್ನು ಉಷಾ ಅವರು ಮರೆತಿಲ್ಲ. 

ಮುಸ್ಲಿಂ ವ್ಯಾಪಾರಿಗೆ ತೊಂದರೆ ಕೊಟ್ಟವರನ್ನು ಬಂಧಿಸಿ: ಎಚ್‌.ಡಿ.ಕುಮಾರಸ್ವಾಮಿ

ಊರಲ್ಲಿ ಸಹ ತಮ್ಮ ಸಂಬಂಧಿಕರು, ಒಡನಾಡಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಉಷಾ ಚರಣ್ ನಮ್ಮೂರಿಗೆ ಬಂದು ಹೋಗಿದ್ದಾರೆ. ಅವರ ಚಿಕ್ಕಪ್ಪ ಅಂಜಿನಪ್ಪ ಸಹ ಭಾನುವಾರ ತಾಯಕನಹಳ್ಳಿಗೆ ಬಂದು ಹೋಗಿದ್ದಾರೆ. ಉಷಾಚರಣ್ ಆಂದ್ರದಲ್ಲಿ ಮಂತ್ರಿಯಾಗುವ ಯೋಗ ಬಂದಿರುವುದಕ್ಕೆ ನಮ್ಮೆಲ್ಲರಿಗೂ ಹಾಗೂ ನಮ್ಮೂರಿನವರೆಲ್ಲರಿಗೂ ಸಂತಸ ಇದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ತಾಯಕನಹಳ್ಳಿ ಗ್ರಾಮದ ಕುರುಬ ಸಮಾಜದ ಮುಖಂಡ ಮಂಜುನಾಥ.

Latest Videos
Follow Us:
Download App:
  • android
  • ios