ಮತ್ತೆ ಪಕ್ಷಾಂತರ ಪರ್ವ: ಮತ್ತೆ ಪಕ್ಷ ಬದಲಿಸ್ತಾರಾ ಶಿವರಾಮ ಹೆಬ್ಬಾರ್..?
ಶಿವರಾಮ ಹೆಬ್ಬಾರ್ ತಮ್ಮ ಬೆಂಬಲಿಗರೊಂದಿಗೆ ಮುಂಡಗೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಸಭೆ ನಡೆಸಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರೆ ಆಗುವ ಅನುಕೂಲಗಳ ಬಗ್ಗೆ ಮತ್ತು ಬೆಂಬಲಿಗರ ಅಭಿಪ್ರಾಯದ ಬಗ್ಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಉತ್ತರ ಕನನ್ನಡ(ಆ.17): ರಾಜ್ಯ ರಾಜಕಾರಣದಲ್ಲಿ ಇದೀಗ ಮತ್ತೆ ಪಕ್ಷಾಂತರ ಪರ್ವದ ಬಗ್ಗೆ ಚರ್ಚೆಗಳು ನಡೆಯಲಾರಂಭಿಸಿವೆ. ಬಿಜೆಪಿಯ ಕೆಲವು ಮುಖಂಡರ ಜತೆ ಆಪರೇಷನ್ ಕಮಲದ ಮೂಲಕ ಬಾಂಬೆ ಟೀಂನೊಂದಿಗೆ ಬಿಜೆಪಿಗೆ ಬಂದಿದ್ದ ಮಾಜಿ ಸಚಿವ, ಶಾಸಕ ಶಿವರಾಮ ಹೆಬ್ಬಾರ್ ಕೂಡಾ ಇದೀಗ ಮತ್ತೆ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಶಿವರಾಮ ಹೆಬ್ಬಾರ್ ತಮ್ಮ ಬೆಂಬಲಿಗರೊಂದಿಗೆ ಮುಂಡಗೋಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ಸಭೆ ನಡೆಸಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರೆ ಆಗುವ ಅನುಕೂಲಗಳ ಬಗ್ಗೆ ಮತ್ತು ಬೆಂಬಲಿಗರ ಅಭಿಪ್ರಾಯದ ಬಗ್ಗೆ ಸಭೆ ನಡೆಸಿದ್ದಾರೆ ಎನ್ನಲಾಗಿದೆ.
ಹಳೆ ದೇಶಪಾಂಡೆ ಯುಗ ಮುಗಿಯಿತು, ಇನ್ನು ಸ್ಟ್ರಿಕ್ಟ್ ಆಗಿರುವೆ: ನಾನು ಯಾರಿಗೂ ಕಂಟ್ರಾಕ್ಟ್ ಕೊಡಲ್ಲ
ಇನ್ನು ಕಮಲ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರೆ ಕ್ಷೇತ್ರದ ಜನ ತನನ್ನು ಬೆಂಬಲಿಸುತ್ತಾರಾ, ಎಂಬುದರ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. 2019ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ 19 ಶಾಸಕರಲ್ಲಿ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ ಮತ್ತೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಪ್ರಮುಖರೇ ಡಬಲ್ ಗೇಮ್ ಆಡಿರುವ ಬಗ್ಗೆ ಅರಿತಿದ್ದ ಹೆಬ್ಬಾರ್, ಅಂತವರ ಲಿಸ್ಟ್ ಮಾಡಿ ಪಕ್ಷದ ರಾಜ್ಯ ಮುಖಂಡರ ಕೈಯಲ್ಲಿಟ್ಟಿದ್ದರು. ಆದರೆ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಯಾವುದೇ ಕ್ರಮಗಳಾಗದ ಹಿನ್ನೆಲೆ ಹೆಬ್ಬಾರ್ ನೊಂದಿದ್ದರು ಎನ್ನಲಾಗಿದೆ.
ಇನ್ನು ಪಕ್ಷ ತೊರೆಯುವ ಚರ್ಚೆಯನ್ನು ತಳ್ಳಿ ಹಾಕಿರುವ ಹೆಬ್ಬಾರ್, ನನಗೆ ಕಾಂಗ್ರೆಸ್ ಸೇರುವ ಯಾವುದೇ ಪರಿಸ್ಥಿತಿ ನನಗೆ ಬಂದಿಲ್ಲ. ಕ್ಷೇತ್ರದ ಜನರ ಹಾಗೂ ಪ್ರಮುಖರ ಜತೆ ಚರ್ಚಿಸದೇ ಯಾವುದೇ ನಿರ್ಣಯ ಕೈಗೊಳ್ಳಲ್ಲ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.