Asianet Suvarna News Asianet Suvarna News

'2 ದಿನದಲ್ಲಿ ಮೋದಿ ಸಿಹಿ ಸುದ್ದಿ ಕೊಡ್ತಾರೆ'

ಕಾಂಗ್ರೆಸ್ಸಿಗರಿಗೆ ಕಾಮಾಲೆ ಕಣ್ಣು ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ| '2 ದಿನದಲ್ಲಿ ಮೋದಿ ಸಿಹಿ ಸುದ್ದಿ ಕೊಡ್ತಾರೆ'

Within Two Days PM Modi Will Give Good News Says Housing Minister V Somanna
Author
Bangalore, First Published Jan 4, 2020, 8:08 AM IST
  • Facebook
  • Twitter
  • Whatsapp

ಮೈಸೂರು[ಜ.04]: ಕಾಂಗ್ರೆಸ್ಸಿಗರಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಇದೆ. ಇನ್ನೆರಡು ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಒಳ್ಳೆಯ ಸುದ್ದಿ ನೀಡುತ್ತಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರಿಗೆ ಕಾಮಾಲೆ ಕಣ್ಣು ಮತ್ತು ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ. ಹೀಗಾಗಿ ಪ್ರಧಾನಿ ಭಾಷಣ ಟೀಕಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಧಾನಿ ಭಾಷಣಕ್ಕೆ ಸಿಕ್ಕ ಪ್ರಚಾರ ನೋಡಿ ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ಸಿಗರು ಹಾಗೂ ಕುಮಾರಸ್ವಾಮಿಯವರಿಗೆ ಸುಮ್ಮನೆ ಮೈ ಪರಚಿಕೊಳ್ಳುವ ಅಭ್ಯಾಸ. ಇದಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿದ್ದವರು. ಯಾವುದೋ ವಿಚಾರಕ್ಕೆ ಇನ್ನೇನನ್ನೋ ಸೇರಿಸಿ ಮಾತನಾಡಬಾರದು. ಪ್ರಧಾನ ಮಂತ್ರಿಗಳು ಮಾತನಾಡಿದ್ದರಲ್ಲಿ ತಪ್ಪೇನಿದೆ?. ಎರಡು ಬಾರಿ ಪ್ರಧಾನ ಮಂತ್ರಿಗಳು ಆ ಪುಣ್ಯ ಕ್ಷೇತ್ರಕ್ಕೆ ಬಂದಿರುವುದು ಹೆಮ್ಮೆಯ ವಿಚಾರ. ಇದನ್ನು ಅರ್ಥ ಮಾಡಿಕೊಳ್ಳಲಿ ಎಂದರು.

ಎಂ.ಜಿ.ರಸ್ತೆಲೀ ನ್ಯೂ ಇಯರ್‌ ರದ್ದು; ಸಿಎಂ ಜತೆ ಚರ್ಚೆ

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದನ್ನು ರದ್ದುಪಡಿಸಿ ಬೇರೆ ಏನಾದರೂ ಮಾಡೋಣ ಅಂತ ಯೋಚನೆ ಮಾಡಿದ್ದೀವಿ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇವೆ. ನಾನು 45 ವರ್ಷದಿಂದ ಬೆಂಗಳೂರಿನಲ್ಲಿ ಇದ್ದೀನಿ ಅಂದಿನಿಂದ ಅದೊಂದೇ ರಸ್ತೆ ಇದೆ. ಇನ್ನಾದರೂ ಆ ರಸ್ತೆಯಲ್ಲಿನ ಆಚರಣೆಯನ್ನ ನಿಲ್ಲಿಸಿ ಬೇರೆ ಕಡೆ ಆಚರಿಸಲು ಚಿಂತನೆ ಮಾಡುತ್ತೇವೆ. ಇದಕ್ಕೆ ಎಲ್ಲರ ಸಲಹೆ ಪಡೆಯುತ್ತೇವೆ ಎಂದರು.

Follow Us:
Download App:
  • android
  • ios