ದೋಸ್ತಿಗಳ ನಡುವೆ ಹಗ್ಗ ಜಗ್ಗಾಟಕ್ಕೆ ಕಾರಣವಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ರಂಗು ಈಗಿನಿಂದಲೇ ಹೆಚ್ಚಾಗಿದೆ. ಕಾಂಗ್ರೆಸ್ ನಿಂದ ಟಿಕೆಟ್ ಸಿಗುವುದು ಕಷ್ಟ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಕಣಕ್ಕೆ ಇಳಿಯಲು ಸನ್ನದ್ಧರಾಗಿದ್ದಾರೆ.
ಮಂಡ್ಯ [ಫೆ.27] ಮಂಡ್ಯದ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಅಖಾಡಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.
ಪಕ್ಷೇತರ ಸ್ಪರ್ಧೆಗೆ ಹಠತೊಟ್ಟಿರುವ ಸುಮಲತಾ ನಾಳೆ[ಫೆ. 28] ಮಂಡ್ಯದಲ್ಲಿ ಕ್ಷೇತ್ರ ಪರ್ಯಟನೆ ಮಾಡಲಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಲಿದ್ದು ರಾಜಕೀಯ ಗಣ್ಯರನ್ನು ಮಾತನಾಡಿಸಿ ಅಭಿಪ್ರಾಯ ಕಲೆ ಹಾಕಲಿದ್ದಾರೆ.
ರಾಜಕೀಯ ಪಕ್ಷಗಳಿಗೆ ಸವಾಲು ಎಸೆದ ಅಂಬಿ ಫ್ಯಾನ್ಸ್
ಬೆಳಿಗ್ಗೆ ಮುತ್ತೇಗೆರೆ ಗ್ರಾಮದ ಮನೆ ದೇವರು ಮಾಯಮ್ಮ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಿಸಲಿದ್ದಾರೆ. ಮಂಡ್ಯ ಜಿಲ್ಲೆಯ ಹಿರಿಯ ರಾಜಕೀಯ ನಾಯಕರಾದ ಮಾದೇಗೌಡ, ಎಂ.ಎಸ್.ಆತ್ಮಾನಂದ, ಎಚ್.ಡಿ.ಚೌಡಯ್ಯ ಮನೆಗಳಿಗೆ ಭೇಟಿ, ಮಾರ್ಗದರ್ಶನ, ಆಶೀರ್ವಾದ ಪಡೆಯಲಿರುವ ಸುಮಲತಾ ಬಳಿಕ ದೊಡ್ಡರಸಿನಕೆರೆಯಲ್ಲಿ ಅಂಬಿ ಪುತ್ತಳಿ ಅನಾವರಣ ಮಾಡಲಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 27, 2019, 6:12 PM IST