BJP Politics: 'ರಮೇಶ ಜಾರಕಿಹೊಳಿಗೆ ಇಲ್ಲದ ಶಿಕ್ಷೆ ನನಗೇಕೆ?'

*  ಮಲ್ಲಿಕಾರ್ಜುನ ಹಾವೇರಿ ಬಿಜೆಪಿಗೆ ತಿರುಗೇಟು
*  ಸದಸ್ಯರ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೆ
*  ಯಾವುದೋ ಒತ್ತಡಕ್ಕೆ ಮಣಿದು ಟಿಕೆಟ್‌ ಕೊಟ್ಟಿದ್ದು ಎಷ್ಟು ಸರಿ? 
 

Why Do I have Punishment for Why Not to Ramesh Jarkiholi Says Mallikarjun Haveri grg

ಹಾವೇರಿ(ಡಿ.18): ಬೆಳಗಾವಿಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯ ವಿರುದ್ಧ ಸೋದರರನ್ನು ಪಕ್ಷೇತರವಾಗಿ ನಿಲ್ಲಿಸಿ ಗೆಲ್ಲಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ(Ramesh Jarkiholi) ಇಲ್ಲದ ಶಿಕ್ಷೆ ನನಗೇಕೆ ? ಎಂದು ಪಕ್ಷೇತರ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಹಾವೇರಿ(Mallikarjun Haveri) ಪ್ರಶ್ನಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿಧಾನ ಪರಿಷತ್‌ ಚುನಾವಣೆಯಲ್ಲಿ(Vidhan Parishat Election) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಕಾರಣಕ್ಕೆ ಪಕ್ಷದಿಂದ ನನ್ನನ್ನು ಉಚ್ಚಾಟಿಸಿರುವುದಾಗಿ ಮಾಧ್ಯಮಗಳ ಮೂಲಕ ತಿಳಿದಿದೆ. ಈ ವರೆಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದಿದ್ದಾರೆ.

Karnataka Politics: 'ಜನವಿರೋಧಿ ಬಿಜೆಪಿ ಸರ್ಕಾರದ ಕೌಂಟ್‌ಡೌನ್‌ ಶುರು'

ಧಾರವಾಡ(Dharwad) ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಚುನಾವಣೆಯಲ್ಲಿ ಹಿಂದೆ ಆಯ್ಕೆಯಾಗಿದ್ದ ಪ್ರದೀಪ ಶೆಟ್ಟರ್‌(Pradeep Shettar) ಯಾವುದೇ ಚುನಾಯಿತ ಸದಸ್ಯರ ಸಮಸ್ಯೆಗೆ ಸ್ಪಂದಿಸಿರಲಿಲ್ಲ. ಶೆಟ್ಟರ್‌ ಕಣಕ್ಕಿಳಿದರೆ ನೀವು ಪಕ್ಷೇತರವಾಗಿ ಸ್ಪರ್ಧಿಸಿ, ನಾವು ಬೆಂಬಲಿಸುತ್ತೇವೆ ಎಂದು ಮೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಒತ್ತಾಯ ಮಾಡಿದ್ದರಿಂದ ನಾನು ಸ್ಪರ್ಧಿಸಿದೆ. ಕುಟುಂಬ ರಾಜಕಾರಣ(Family Politics) ವಿರೋಧಿಸಿದ ಬಿಜೆಪಿ(BJP) ವಿಧಾನ ಪರಿಷತ್‌ನಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಕುಟುಂಬದವರಿಗೆ ಟಿಕೆಟ್‌ ಕೊಟ್ಟಿದ್ದು ಎಷ್ಟು ಸರಿ? ಇದರ ಬಗೆಗೆ ಪಕ್ಷವು ಮೊದಲು ಚಿಂತನೆ ನಡೆಸಬೇಕು ಎಂದಿದ್ದಾರೆ.

ಚುನಾಯಿತ ಸದಸ್ಯರು ಪಕ್ಷಾತೀತವಾಗಿ 1,217 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ನೀಡಿದರೆ, ದ್ವಿತೀಯ ಪ್ರಾಶಸ್ತ್ಯದಲ್ಲಿ 4 ಸಾವಿರಕ್ಕೂ ಅಧಿಕ ಮತಗಳನ್ನು ನೀಡಿ ಬೆಂಬಲಿಸಿದ್ದಾರೆ. ತಿರಸ್ಕೃತವಾದ 370 ಮತಗಳಲ್ಲಿ 310 ಮತಗಳನ್ನು ನೀಡಿ ನನ್ನನ್ನು ಆಶೀರ್ವದಿಸಿದ್ದಾರೆ. ನನ್ನ ಗೆಲುವು ಖಚಿತವಾಗಿತ್ತು. ಕ್ಷೇತ್ರ ವ್ಯಾಪ್ತಿಯಲ್ಲಿ ಸಿಎಂ, ಮಾಜಿ ಸಿಎಂ, ಕೇಂದ್ರ ಸಚಿವರು, ಸಂಸದರು, ಮೂವರು ಸಚಿವರು, 17 ಕ್ಷೇತ್ರಗಳಲ್ಲಿ 9 ಶಾಸಕರು ಬಿಜೆಪಿಯವರಿದ್ದರೂ ಬಿಜೆಪಿ ಅಭ್ಯರ್ಥಿ ಕೇವಲ 2,461 ಮತಗಳನ್ನು ಮಾತ್ರ ಪಡೆದು ಆಯ್ಕೆಯಾದರು. ಇದಕ್ಕೆ ಕಾರಣ ಅಭ್ಯರ್ಥಿಯ ಆಯ್ಕೆಯೇ ಹೊರತು ಪಕ್ಷದ ಹಿನ್ನಡೆಯಲ್ಲ. ನಾನು ತಾಂತ್ರಿಕವಾಗಿ ಸೋಲು ಕಂಡರೂ ಮತದಾರ(Voters) ಪ್ರಭುಗಳು ನೀಡಿರುವ ಬೆಂಬಲ ನೋಡಿದರೆ ಗೆದ್ದಿದ್ದೇನೆ. ಎಂದು ಆಗ್ರಹಿಸಿದ್ದಾರೆ.

ನಾನು ಯಾವುದೇ ರೀತಿ ಪಕ್ಷ ವಿರೋಧಿ ಚಟುವಟಿಕೆ(Anti Party Activity) ಮಾಡಿಲ್ಲ. ನನ್ನನ್ನು ಪಕ್ಷದಿಂದ ಉಚ್ಚಾಟಿಸಲು ಯಾವುದೇ ಪ್ರಮೇಯವೇ ಬರುವುದಿಲ್ಲ. ಒಂದೊಮ್ಮೆ ಇವರು ನನ್ನ ಮೇಲೆ ಕ್ರಮ ಕೈಗೊಳ್ಳುವುದಾಗಿದ್ದರೆ ನಾಮಪತ್ರ(Nomination) ಸಲ್ಲಿಸಿದ ಸಮಯದಲ್ಲಿಯೇ ಕೈಗೊಳ್ಳಬೇಕಿತ್ತು. ಇಲ್ಲವೇ ನೋಟಿಸ್‌(Notice) ಕೊಡಬೇಕಿತ್ತು. ಆಗ ಸುಮ್ಮನಿದ್ದು, ಫಲಿತಾಂಶ(Result) ಬಂದ ನಂತರ ಈ ರೀತಿಯ ಮಾಡಿರುವುದು ಹಾಸ್ಯಾಸ್ಪದವಾಗಿದೆ.

MLC Election: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಯಕ 6 ವರ್ಷ ಉಚ್ಚಾಟನೆ

ಬೆಳಗಾವಿಯಲ್ಲಿ(Belagavi) ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಸಹೋದರನನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲ್ಲಿಸಿದ್ದಾರೆ. ಅಲ್ಲಿ ಬಿಜೆಪಿ ಅಭ್ಯರ್ಥಿಯು(BJP candidate) ಹೀನಾಯ ಸೋಲು ಕಂಡಿದ್ದಾರೆ. ಈವರೆಗೂ ರಮೇಶ ಜಾರಕಿಹೊಳಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಅವರ ವಿರುದ್ಧ ಮಾತನಾಡಲು ಬಿಜೆಪಿಯವರಿಗೆ ತಾಕತ್ತಿಲ್ಲವೇ? ಅವರ ಮೇಲೆ ಕ್ರಮ ತೆಗೆದುಕೊಳ್ಳದೇ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಿದವರ ಮೇಲೆ ಕ್ರಮ ಕೈಗೊಳ್ಳುತ್ತಿರುವ ಈ ದ್ವಂದ್ವ ನೀತಿಗಳು ಮುಂದಿನ ದಿನಗಳಲ್ಲಿ ಬಿಜೆಪಿಗೆ ಮಾರಕವಾಗಲಿವೆ. ಜಿಲ್ಲಾಧ್ಯಕ್ಷರಿಗೆ ಪತ್ರ ನೀಡುತ್ತೇನೆ. ಇದರ ಹೊರತಾಗಿ ಬಿಜೆಪಿ ಕೈಗೊಳ್ಳುವ ಕ್ರಮದ ಮೇಲೆ ನಾನು ಬೆಂಬಲಿಗರ ಜೊತೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಮಲ್ಲಿಕಾರ್ಜುನ ಹಾವೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Latest Videos
Follow Us:
Download App:
  • android
  • ios