Asianet Suvarna News Asianet Suvarna News

ರಾಯಚೂರು ನಗ​ರ: ಮೂರು ಪಕ್ಷಗಳಿಂದಲೂ ನಡೆದಿದೆ ಭರ್ಜರಿ ಟಿಕೆಟ್‌ ಲೆಕ್ಕಾಚಾರ

  • ಪಕ್ಷಗಳಲ್ಲಿ ಭರ್ಜರಿ ಟಿಕೆಟ್‌ ಲೆಕ್ಕಾಚಾರ
  • ಕಾಂಗ್ರೆ​ಸ್‌,​ ಜೆ​ಡಿ​ಎ​ಸ್‌​ ಸಮರ್ಥರ ಪಟ್ಟಿಸಿದ್ಧ, ಮುಸ್ಲಿಂ ಸಮು​ದಾ​ಯಕ್ಕೆ ಟಿಕೆ​ಟ್‌ಗೆ ಒತ್ತ​ಡ
  •  ಬಿಜೆಪಿ ಶಾಸಕ ಡಾ.ಶಿ​ವ​ರಾಜ ಪಾಟೀಲ್‌ ಅವ​ರಿಗೆ ಟಿಕೆಟ್‌ ಪಕ್ಕಾ ಎಂಬುದು ಕಾರ್ಯ​ಕ​ರ್ತ​ರಲ್ಲಿ ವಿಶ್ವಾಸ
Who will get the Raichur Assembly ticket the three parties  rav
Author
First Published Feb 13, 2023, 6:15 AM IST

ರಾಮ​ಕೃಷ್ಣ ದಾಸರಿ

 ರಾಯ​ಚೂರು (ಫೆ.13) : ಸಾಮಾನ್ಯ ವರ್ಗಕ್ಕೆ ಮೀಸ​ಲಿ​ರುವ ರಾಯ​ಚೂರು ನಗರ ವಿಧಾ​ನ​ಸಭಾ ಕ್ಷೇತ್ರಕ್ಕೆ ಮೂರು ಪಕ್ಷ​ಗಳಿಂದ ಅರ್ಹ ಅಭ್ಯ​ರ್ಥಿ​ಗಳು ಯಾರು? ಎನ್ನುವ ಸಮಾ​ಲೋ​ಚ​ನೆ​ಗಳು ಸಾಮಾನ್ಯ ವಲ​ಯ​ದ​ಲ್ಲಿ ಸಾಮಾ​ನ್ಯ​ವಾ​ಗಿ​ವೆ.

ಕ್ಷೇತ್ರ​ ಪ್ರತಿ​ನಿ​ಧಿ​ಸು​ತ್ತಿ​ರುವ ಬಿಜೆಪಿ ಹಾಲಿ ಶಾಸಕ ಡಾ.ಶಿ​ವ​ರಾಜ ಪಾಟೀಲ್‌(Dr shivaraj patil former MLA) ಅವ​ರಿಂದ ಹಿಡಿದು ಕಾಂಗ್ರೆ​ಸ್‌, ಜೆಡಿ​ಎಸ್‌ ಸೇರಿ ಇತರೆ ಪಕ್ಷ​ಗಳು ಸಮರ್ಥ ಅಭ್ಯ​ರ್ಥಿ ಆಯ್ಕೆ ವಿಚಾ​ರ​ದಲ್ಲಿ ಅತ್ಯಂತ ಜಾಗೃ​ತಿ ಹೆಜ್ಜೆ​ಯ​ನ್ನಿ​ಡು​ತ್ತಿವೆ. ವಿಧಾನಸಭೆ ಚುನಾ​ವಣೆ ಸಮೀಪಿಸುತ್ತಿದ್ದರೂ ಅಭ್ಯ​ರ್ಥಿ​ಗಳ ಆಯ್ಕೆ​ಯಲ್ಲಿ ಯಾವ ಪಕ್ಷ​ದ​ವರೂ ಸ್ಪಷ್ಟ​ವಾದ ನಿರ್ಧಾ​ರ​ ಹೊರ​ಹಾ​ಕದೇ ಇರು​ವುದು ಕ್ಷೇತ್ರ​ದಲ್ಲಿ ಭರ್ಜರಿ ಚರ್ಚಾ ವಿಷಯವಾಗಿದೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ 50-60 ಸ್ಥಾನ ಗೆಲ್ಲುವುದೆ ಕಷ್ಟ: ಸಿದ್ದರಾಮಯ್ಯ

ಕಾಂಗ್ರೆಸ್‌ ಟಿಕೆಟ್‌ಗೆ 17 ಜನರು ಅರ್ಜಿ ಸಲ್ಲಿ​ಸಿದ್ದು(Siddaramaiah), ಪಕ್ಷದ ನಾಯ​ಕರು ಮಾಜಿ ಶಾಸಕ ಸೈಯದ್‌ ಯಾಸೀನ್‌(Former MLA Syed Yasin), ಮಾಜಿ ಎಂಎಲ್ಸಿ, ಎಐ​ಸಿಸಿ ಪ್ರಧಾನ ಕಾರ್ಯ​ದರ್ಶಿ ಎನ್‌.​ಎ​ಸ್‌. ​ಬೋ​ಸ​ರಾಜು(NS Bosaraju), ಬಸ​ವ​ರಾಜ ಪಾಟೀಲ್‌ ಇಟಗಿ ಅವರ ಹೆಸ​ರು​ ಅಂತಿಮಗೊಳಿಸಿ ಹೈಕ​ಮಾಂಡ್‌ಗೆ ಶಿಫಾ​ರಸ್ಸು ಮಾಡಿದ್ದಾರೆನ್ನಲಾಗಿದೆ. ಅದೇ ರೀತಿ ಜೆಡಿ​ಎ​ಸ್‌​ನಿಂದ ಈ. ವಿ​ನಯ ಕುಮಾರ, ರಾಮ​ನ​ಗೌಡ ಏಗ​ನೂರು ಹೆಸ​ರು ಕೇಳಿ​ಬ​ರು​ತ್ತಿದ್ದು, ಯಾರಿಗೆ ಟಿಕೆಟ್‌ ಎನ್ನುವ ಕುತೂ​ಲ​ಹವು ಮುಂದುವರಿದಿದೆ.

ಮುಸ್ಲಿಮರೆ ಹೆಚ್ಚಿರುವ ಕ್ಷೇತ್ರ​ದಲ್ಲಿ ಆ ಸಮು​ದಾ​ಯ​ದ​ವ​ರಿಗೆ ಟಿಕೆಟ್‌ ನೀಡ​ಬೇಕು ಎನ್ನುವ ಕೂಗು ಬಲ​ವಾಗಿ ಕೇಳಿ​ಬ​ರು​ತ್ತಿ​ದೆ. ಅದ​ರ​ಲ್ಲಿಯೂ ಕಾಂಗ್ರೆ​ಸ್‌ ಪಕ್ಷ​ದಲ್ಲಿ ಈ ಬೇಡಿ​ಕೆ ತುಸು ಹೆಚ್ಚಾಗಿಯೇ ಇದೆ. ಜೊತೆಗೆ ಜೆಡಿ​ಎ​ಸ್‌​ನಲ್ಲಿ ಸಹ ಮುಸ್ಲಿಂ ಮುಖಂಡ​ರಿಗೆ ಟಿಕೆಟ್‌ ನೀಡ​ಬೇಕು ಎನ್ನುವ ಒತ್ತಾ​ಸೆ ಇದೆ. ಅದ​ಕ್ಕಾ​ಗಿಯೇ ಜಿಲ್ಲೆಯ ಏಳು ಕ್ಷೇತ್ರ​ಗಳ ಪೈಕಿ ಐದು ಕ್ಷೇತ್ರಕ್ಕೆ ಅಭ್ಯ​ರ್ಥಿ ಘೋಷಿ​ಸಿ​ರುವ ಜೆಡಿ​ಎಸ್‌ ರಾಯ​ಚೂರು ನಗ​ರ ಕ್ಷೇತ್ರದಲ್ಲಿ ಕಾದು​ನೋ​ಡುವ ತಂತ್ರ ಅನುಸರಿಸುತ್ತಿದೆ.

ಇನ್ನು ಬಿಜೆಪಿ ಹಾಲಿ ಶಾಸಕ ಡಾ.ಶಿ​ವ​ರಾಜ ಪಾಟೀಲ್‌ ಅವ​ರಿಗೆ ಟಿಕೆಟ್‌ ಖಚಿ​ತ​ ಎನ್ನಲಾಗಿದ್ದರೂ ಸಹ ಪಕ್ಷದ ಹೈಕ​ಮಾಂಡ್‌ ಯಾವ ರೀತಿ ನಿರ್ಧಾ​ರ​ ತೆಗೆ​ದು​ಕೊ​ಳ್ಳು​ತ್ತದೆ ಎನ್ನುವ ಸಂಗ​ತಿ ಮಾತ್ರ ನಿಗೂಢ. ಡಾ.ಶಿ​ವ​ರಾಜ ಪಾಟೀಲ್‌ ಅತೀವ ವಿಶ್ವಾ​ಸ​ದಲ್ಲಿಯೇ ಇದ್ದಾರೆ. ಮೂರು ಪ್ರಮುಖ ಪಕ್ಷ​ಗಳ ಜೊತೆಗೆ ಆಪ್‌, ಗಾಲಿ ಜನಾ​ರ್ದ​ನ​ರೆಡ್ಡಿ ಕೆಆ​ರ್‌​ಪಿಪಿ ಪಕ್ಷ​ದಿಂದಲೂ ಹೆಚ್ಚಿನ ಪ್ರಭಾವ ಹೊಂದಿ​ರುವ ಅಭ್ಯ​ರ್ಥಿ​ಗಳು ಕಣ​ಕ್ಕಿ​ಳಿ​ಯುವ ಸಾಧ್ಯ​ತೆ​ಗ​ಳಿವೆ.

ಶಿವಲಿಂಗೇಗೌಡರ ಕಾಂಗ್ರೆಸ್‌ ಸೇರ್ಪಡೆ ಪಕ್ಕಾ: ಸಿದ್ದರಾಮಯ್ಯ

ನಮ್ಮ ಕೆಲ​ಸ​ವನ್ನು ನಾವು ಪ್ರಮಾ​ಣಿ​ಕ​ವಾಗಿ ಮಾಡಿ​ಕೊಂಡು ಹೋಗು​ತ್ತಿ​ದ್ದೇವೆ. ಪಕ್ಷದ ಟಿಕೆಟ್‌ ಕೇಳಲು ಬರ​ಬೇಕು ಎಂದು ಹೈಕ​ಮಾಂಡ್‌ ಸೂಚಿ​ಸಿದೆ. ಅರ್ಹ​ರಿಗೆ, ಸಮ​ರ್ಥ​ರಿಗೆ ಟಿಕೆಟ್‌ ನೀಡ​ಲು ಪಕ್ಷ ವ್ಯವ​ಸ್ಥೆ​ಯನ್ನು ರೂಪಿ​ಸಿದ್ದು, ಅರ್ಹ​ತೆ​ಯ​ನ್ನಾ​ಧ​ರಿಸಿ ಟಿಕೆಟ್‌ ದೊರೆ​ಯ​ಲಿ​ದೆ. ಆರ್‌​ಎ​ಸ್‌​ಎಸ್‌, ಡಿಎ​ಸ್‌​ಎ​ಸ್‌,​ ಜ​ನ​ಸಾ​ಮಾ​ನ್ಯ​ರು,​ ಜ​ನ​ಪ್ರ​ತಿ​ನಿ​ಧಿ​ಗಳ ಅಭಿ​ಪ್ರಾ​ಯ​ಗ​ಳನ್ನು ಸಂಗ್ರ​ಹಿಸಿ ಸೂಕ್ತ ಅಭ್ಯ​ರ್ಥಿ​ಯನ್ನು ಹೈಕ​ಮಾಂಡ್‌ ಆಯ್ಕೆ ಮಾಡ​ಲಿ​ದೆ.

- ಡಾ.ಶಿ​ವ​ರಾಜ ಪಾಟೀಲ್‌, ಶಾಸಕ, ರಾಯ​ಚೂರು

Follow Us:
Download App:
  • android
  • ios