ಸರ್ಕಾರ ಬಿಡುಗಡೆ ಮಾಡಿದ ಎರಡು ಪುಸ್ತಕಗಳಲ್ಲಿ ಏನಿದೆ?
ತಮ್ಮ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಂದ ಕಿರುಹೊತ್ತಿಗೆ ಬಿಡುಗಡೆ| ಸರ್ಕಾರ ಬಿಡುಗಡೆ ಮಾಡಿದ ಎರಡು ಪುಸ್ತಕಗಳಲ್ಲಿ ಏನಿದೆ?
ಬೆಂಗಳೂರು(ಜು.28): ತಮ್ಮ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎರಡು ಕಿರುಹೊತ್ತಿಗೆಗಳನ್ನು ಬಿಡುಗಡೆಗೊಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದಿರುವ ‘ಸವಾಲುಗಳ ಒಂದು ವರ್ಷ; ಪರಿಹಾರದ ಸ್ಪರ್ಶ’ ಎಂಬ ಒಂದು ಕಿರುಹೊತ್ತಿಗೆ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್ ಅವರ ಸಂಪಾದಕತ್ವದ ‘ಪುಟಕ್ಕಿಟ್ಟಚಿನ್ನ’ ಎಂಬ ಮತ್ತೊಂದು ಹೊತ್ತಿಗೆ ಬಿಡುಗಡೆಗೊಂಡಿವೆ. ‘ಸವಾಲುಗಳ ಒಂದು ವರ್ಷ; ಪರಿಹಾರದ ಸ್ಪರ್ಶ’ ಹೊತ್ತಿಗೆ ಸರ್ಕಾರದ ಒಂದು ವರ್ಷದ ಪ್ರಗತಿ ವರದಿ. ಇನ್ನು 136 ಪುಟಗಳ ‘ಪುಟಕ್ಕಿಟ್ಟಚಿನ್ನ’ ಹೊತ್ತಿಗೆಯಲ್ಲಿ ಸರ್ಕಾರದ ಒಂದು ವರ್ಷದ ಆಡಳಿತ ಮತ್ತು ಸಾಧನೆಯನ್ನು ಒರೆಗೆ ಹಚ್ಚಲಾಗಿದೆ. ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಸಂಸ್ಥೆ ಇದನ್ನು ಹೊರತಂದಿದೆ.
ಒಟ್ಟು 116 ಪುಟಗಳ ಈ ಹೊತ್ತಿಗೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ಕಳೆದ ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ವಿವರಗಳನ್ನು ದಾಖಲಿಸಲಾಗಿದೆ. ಜೊತೆಗೆ ಆ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನೂ ಒಳಗೊಂಡಂತೆ ಸಂಬಂಧಪಟ್ಟಸಚಿವರ ಫೋಟೋಗಳನ್ನು ಒಳಗೊಂಡಿವೆ.
ಇನ್ನು 136 ಪುಟಗಳ ‘ಪುಟಕ್ಕಿಟ್ಟಚಿನ್ನ’ ಹೊತ್ತಿಗೆಯಲ್ಲಿ ಸರ್ಕಾರದ ಒಂದು ವರ್ಷದ ಆಡಳಿತ ಮತ್ತು ಸಾಧನೆಯನ್ನು ಒರೆಗೆ ಹಚ್ಚಲಾಗಿದೆ. ಸಿರಿಗೇರಿಯ ಅನ್ನಪೂರ್ಣ ಪ್ರಕಾಶನ ಸಂಸ್ಥೆ ಇದನ್ನು ಹೊರತಂದಿದೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ, ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ, ಪರಿಸರ ತಜ್ಞ ಅ.ನ.ಯಲ್ಲಪ್ಪ ರೆಡ್ಡಿ ಮೊದಲಾದವರು ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 21 ಮಂದಿ ಲೇಖನಗಳನ್ನು ಬರೆದಿದ್ದಾರೆ.