Asianet Suvarna News Asianet Suvarna News

ಲೋಕಸಭಾ ಚುನಾವಣೆ ಫಲಿತಾಂಶ 2024: ನಗರದಲ್ಲಿ ಎನ್‌ಡಿಎ, ಗ್ರಾಮೀಣ ಭಾಗದಲ್ಲಿ ಇಂಡಿಯಾ ಕಮಾಲ್‌..!

ಮೂರನೇ ಬಾರಿ ಅಧಿಕಾರತ್ತ ಮುಂದಡಿ ಇಟ್ಟಿರುವ ಬಿಜೆಪಿಗೆ ನಗರ ಪ್ರದೇಶದ ಮತದಾರರು ಬಲ ತುಂಬಿದ್ದರೆ, ಬಿಜೆಪಿಗೆ ಬಿಗಿ ಫೈಟ್ ಕೊಟ್ಟಿದ್ದ ಇಂಡಿಯಾ ಮಹಾಮೈತ್ರಿ ಕೂಟಕ್ಕೆ ಗ್ರಾಮೀಣ ಭಾಗದ ಜನರು ಹೆಚ್ಚು ಮತ ಹಾಕಿದ್ದಾರೆ.
 

Voters who Voted for NDA in Cities and INDIA in Rural Areas at India in Lok Sabha Election 2024 grg
Author
First Published Jun 5, 2024, 2:17 PM IST | Last Updated Jun 5, 2024, 2:17 PM IST

ನವದೆಹಲಿ(ಜೂ.05):  ಲೋಕಸಭಾ ಚುನಾವಣೆ ಫಲಿತಾಂಶ ತೆರೆಬಿದ್ದಿದ್ದು, ಎನ್‌ಡಿಎ ಮತ್ತು ಇಂಡಿಯಾ ಮೈತ್ರಿ ಕೂಟದಲ್ಲಿ ಗೆದ್ದು ಬೀಗುವವರು ಯಾರು ಎನ್ನುವ ಕೂತಹಲಕ್ಕೂ ತೆರೆಬಿದ್ದಿದೆ. ಮೂರನೇ ಬಾರಿ ಅಧಿಕಾರತ್ತ ಮುಂದಡಿ ಇಟ್ಟಿರುವ ಬಿಜೆಪಿಗೆ ನಗರ ಪ್ರದೇಶದ ಮತದಾರರು ಬಲ ತುಂಬಿದ್ದರೆ, ಬಿಜೆಪಿಗೆ ಬಿಗಿ ಫೈಟ್ ಕೊಟ್ಟಿದ್ದ ಇಂಡಿಯಾ ಮಹಾಮೈತ್ರಿ ಕೂಟಕ್ಕೆ ಗ್ರಾಮೀಣ ಭಾಗದ ಜನರು ಹೆಚ್ಚು ಮತ ಹಾಕಿದ್ದಾರೆ.

ನಗರದಲ್ಲಿ ಎನ್‌ಡಿಎ ಕಮಾಲ್‌

ನಗರ ಪ್ರದೇಶಗಳಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಮುಂಬೈ ಹೊರತುಪಡಿಸಿ ದೆಹಲಿ, ಪುಣೆ, ಬೆಂಗಳೂರಿನಂತ ಸಿಟಿಗಳಲ್ಲಿ ಬಿಜೆಪಿ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆ ಸಾಧಿಸಿದೆ. ದೆಹಲಿಯಂತಹ ಪ್ರಮುಖ ಪ್ರದೇಶಗಳಲ್ಲಿ ಎನ್‌ಡಿಎ ದಾಖಲೆ ಬರೆದಿದ್ದು, ಈ ರಾಜ್ಯದಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಜಯ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಬೆಂಗಳೂರಿನಲ್ಲಿಯೂ ಎನ್‌ಡಿಎ ಕೂಟದತ್ತ ಜನ ಆಕರ್ಷಿತರಾಗಿದ್ದಾರೆ. ಪುಣೆಯ ಮತದಾರರು ಕೂಟ ಎನ್‌ಡಿಎ ಪರವಾಗಿಯೇ ಹೆಚ್ಚು ಮತ ಚಲಾಯಿಸಿದ್ದಾರೆ.

ಸತತ 3ನೇ ಬಾರಿ ಬಿಜೆಪಿ ಗದ್ದುಗೆ ಏರಿದ್ದು ಹೇಗೆ?

ಗ್ರಾಮೀಣದಲ್ಲಿ ಇಂಡಿಯಾ:

ಅತ್ತ ಎನ್‌ಡಿಎ ಕೂಟ ನಗರದಲ್ಲಿ ಹೆಚ್ಚಿನ ಮತ ಪಡೆದಿದ್ದರೆ, ಇತ್ತ ಇಂಡಿಯಾ ಮಹಾಮೈತ್ರಿ ಕೂಟ ಗ್ರಾಮೀಣ ಪ್ರದೇಶದ ಮತದಾರರನ್ನು ಸೆಳೆಯುವಲ್ಲಿ ಯಶಸ್ಸು ಸಾಧಿಸಿದೆ. ಛತ್ತೀಸಗಢದ ಕೊರ್ಬಾ, ಉತ್ತರ ಪ್ರದೇಶದ ಅಯೋನ್ಲಾ, ಬಸ್ತಿ ಮತ್ತು ಲಾಲ್‌ಗಂಜ್ ಸೇರಿದಂತೆ ಹಲವು ಗ್ರಾಮೀಣ ಭಾಗದ ಕ್ಷೇತ್ರಗಳಲ್ಲಿ ಗೆದ್ದಿದೆ. ಆದರೆ ಒಡಿಶಾ,ಗುಜರಾತ್, ಮಧ್ಯಪ್ರದೇಶಗಳಲ್ಲಿ ಎನ್‌ಡಿಎ ಗ್ರಾಮೀಣ ಪ್ರದೇಶಗಳಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.

Latest Videos
Follow Us:
Download App:
  • android
  • ios