Asianet Suvarna News Asianet Suvarna News

ಯಾತ್ರಿ ನಿವಾಸ ಉದ್ಘಾಟನೆಗೆ ಬಂದ ಸಚಿವ ಜೋಶಿಗೆ ಶಾಕ್ ಕೊಟ್ಟ ವಿನಯ್ ಕುಲಕರ್ಣಿ ಬೆಂಬಲಿಗರು

* ಕೇಂದ್ರ ಸಚಿವ ಜೋಶಿಗೆ ಶಾಕ್ ಕೊಟ್ಟ ವಿನಯ್ ಕುಲಕರ್ಣಿ ಬೆಂಬಲಿಗರು
* ಯಾತ್ರಿ ನಿವಾಸ ಉದ್ಘಾಟನೆಗೆ ಪಾಲಿಟಿಕ್ಸ್,
*ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಯಾತ್ರಿ ನಿವಾಸ

Vinay Kulkarni fallowers Opposes Yatri nIvas inauguration In Dharwad rbj
Author
Bengaluru, First Published Apr 30, 2022, 8:42 PM IST

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ, (ಏ.30) :
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಿರ್ಮಿಸಲಾದ ನೂತನ ಯಾತ್ರಿ ನಿವಾಸದ ಉದ್ಘಾಟನೆಗೆಂದು ಬಂದಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಶಾಸಕ ಅಮೃತ ದೇಸಾಯಿ ಅವರಿಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಂಬಲಿಗರು ಶಾಕ್ ಕೊಟ್ಟಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸಚಿವರಾಗಿದ್ದಾಗ ಹೆಬ್ಬಳ್ಳಿ ಗ್ರಾಮಕ್ಕೆ ಯಾತ್ರಿ ನಿವಾಸವೊಂದನ್ನ ಆರಂಭ ಮಾಡಲೂ ಸರಕಾರದಿಂದ ಕೆಆರ್‌ಡಿಸಿಎಲ್‌ನಿಂದ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡಿದ್ದರು.

ಆದ್ರೆ, ಇಂದು(ಶನಿವಾರ) ಹೆಬ್ಬಳ್ಳಿ ಗ್ರಾಮದಲ್ಲಿ ಜಲಜೀವನ್ ಮಿಶನ್ ಅಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನಿಡಿದರು. ಬಳಿಕ ಯಾತ್ರಿ ನಿವಾಸಕ್ಕೆ ಚಾಲನೆ ನೀಡಲು ಹೋದಾಗ ಕಾಂಗ್ರೆಸ್ ಕಾರ್ಯಕರ್ತರು ಯಾತ್ರಿ ನಿವಾಸಕ್ಕೆ ಬಿಗ್ ಹಾಕಿದ್ದಾರೆ.

Covid Crisis: ಕೋವಿಡ್‌ ನಿಯಂತ್ರಣಕ್ಕಾಗಿ ಧಾರವಾಡದಲ್ಲಿ ಜೈವಿಕ ಲ್ಯಾಬ್‌: ಪ್ರಹ್ಲಾದ್‌ ಜೋಶಿ

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಅವಧಿಯಲ್ಲಿ ಹೆಬ್ಬಳ್ಳಿಯಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಆದರೆ, ಯಾತ್ರಿ ನಿವಾಸದ ಮುಂದೆ ಹಾಕಲಾಗುವ ಕಲ್ಲಿನ ಬೋರ್ಡ್‌ನಲ್ಲಿ ವಿನಯ್ ಕುಲಕರ್ಣಿ ಅವರ ಹೆಸರು ಹಾಕದೇ ಇರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರ ಬೆಂಬಲಿಗರು, ಯಾತ್ರಿ ನಿವಾಸಕ್ಕೆ ಬೀಗ ಹಾಕಿ ಉದ್ಘಾಟನೆಗೆ ಅವಕಾಶ ಮಾಡಿಕೊಡಲಿಲ್ಲ. 

ಜೋಶಿ, ಸಿ.ಟಿ.ರವಿ ಹಾಗೂ ಶಾಸಕ ಅಮೃತ ದೇಸಾಯಿ ಅವರು ಬರುತ್ತಿದ್ದಂತೆ ಯಾತ್ರಿ ನಿವಾಸದ ಮುಂದೆ ಜಮಾಯಿಸಿದ್ದ ವಿನಯ್ ಬೆಂಬಲಿಗರು, ಕಲ್ಲಿನ ಬೋರ್ಡ್‌ನಲ್ಲಿ ವಿನಯ್ ಅವರ ಹೆಸರನ್ನೇ ಹಾಕಿಸಿಲ್ಲ. ಅವರ ಹೆಸರು ಹಾಕಿಸಿದ ನಂತರ ಇದನ್ನು ಉದ್ಘಾಟನೆ ಮಾಡಿ ಎಂದರು. ಇದಕ್ಕೆ ಶಾಸಕ ಅಮೃತ ದೇಸಾಯಿ ಅವರು ಪ್ರತಿಕ್ರಿಯಿಸಿ, ಶಿಷ್ಟಾಚಾರದ ಪ್ರಕಾರ ಇದನ್ನು ಉದ್ಘಾಟನೆ ಮಾಡಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರು. ಇದಕ್ಕೆ ಒಂದೂ ಮಾತನಾಡದ ಸಚಿವ ಜೋಶಿ ಇದು ನಮಗೇನೂ ಗೊತ್ತಿಲ್ಲ ಎಂದು ಅಲ್ಲಿಂದ ವೇದಿಕೆಯ ಕಾರ್ಯಕ್ರಮಕ್ಕೆ  ಹೊರಟು ಹೋದರು.

ಇನ್ನು ಕೆ ಆರ್ ಡಿ ಸಿ ಎಲ್ ಅಧಿಕಾರಗಳು ಕೂಡಾ ಶಾಸಕ ಅಮೃತ ದೇಸಾಯಿ ಅವರಿಗೆ ಮಾಹಿತನ್ನು ನೀಡಿದರು. ತದ ನಂತರ ನೀವು ಪ್ರೋಟೋಕಾಲ್ ಪ್ರಕಾರ ಯಾತ್ರಿ ನಿವಾಸವನ್ನ ಉದ್ಘಾಟನೆ ಮಾಡಿ ಎಂದು ಶಾಸಕ ಅಮೃತ ದೇಸಾಯಿ ಅಧಿಕಾರಿಗಳಿಗೆ ಸೂಚನೆ ನಿಡಿದರು.

Follow Us:
Download App:
  • android
  • ios