Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ?: ಯತ್ನಾಳ್‌

ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಆತ್ಮೀಯತೆ ಇದೆ. ನಾನು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ನನ್ನನ್ನ ನೋಡಲು ಬಂದಿದ್ದರು. ಯಾಕೋ ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಬಹಳ‌ ಸೈಲೆಂಟ್ ಆಗಿದ್ದಾರೆ. ಸಿಎಂ‌ 'ಸಿದ್ದರಾಮಯ್ಯರ ಸೈಲೆಂಟ್ ಸೀಕ್ರೆಟ್' ಬಿಚ್ಚಿಟ್ಟ ಯತ್ನಾಳ್. 

Vijayapura BJP MLA Basanagouda Patil Yatnal Talks Over CM Siddaramaiah grg
Author
First Published Aug 29, 2023, 10:55 AM IST

ವಿಜಯಪುರ(ಆ.29):  ಸಿಎಂ ಸಿದ್ದರಾಮಯ್ಯ ಏನು ಪಾಕಿಸ್ತಾನದ ಮುಖ್ಯಮಂತ್ರಿನಾ?. ಮುಖ್ಯಮಂತ್ರಿ ಅಂದ್ರೆ ಶಾಸಕರು ಅವರು ಬಳಿ ಹೋಗೋದು ಸಹಜ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಸಾಫ್ಟ್ ಕಾರ್ನರ್ ಮಾತುಗಳನ್ನಾಡಿದ್ದಾರೆ.

ಇಂದು(ಮಂಗಳವಾರ) ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಯತ್ನಾಳ್‌ ಅವರು, ಸಿಎಂ ಸಿದ್ದರಾಮಯ್ಯ ಹಾಗೂ ನಮ್ಮ ನಡುವೆ ಆತ್ಮೀಯತೆ ಇದೆ. ನಾನು ಆಸ್ಪತ್ರೆಯಲ್ಲಿದ್ದಾಗ ಸಿದ್ದರಾಮಯ್ಯ ನನ್ನನ್ನ ನೋಡಲು ಬಂದಿದ್ದರು. ಯಾಕೋ ಸಿದ್ದರಾಮಯ್ಯ ಅವರು ಈ ಅವಧಿಯಲ್ಲಿ ಬಹಳ‌ ಸೈಲೆಂಟ್ ಆಗಿದ್ದಾರೆ. ಸಿಎಂ‌ 'ಸಿದ್ದರಾಮಯ್ಯರ ಸೈಲೆಂಟ್ ಸೀಕ್ರೆಟ್' ಬಿಚ್ಚಿಟ್ಟಿದ್ದಾರೆ ಯತ್ನಾಳ್.

Loksabha election: ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ; ಯಾರಿಂದಲೂ ತಪ್ಪಿಸೋಕೆ ಆಗಲ್ಲ: ಯತ್ನಾಳ್

ಯಾಕೆ ಸೈಲೆಂಟ್ ಆಗಿದ್ದೀರಾ ಎಂದು ನಾನು ಸಿದ್ದರಾಮಯ್ಯ ಅವರಿಗೆ ಕೇಳಿದ್ದೇ. ಏನ್ ಮಾಡೋದು ಯತ್ನಾಳ್ ಇದು ಕೊನೆದಿದೆ. ಯಾರು ಏನೇ ಅಂದರೆ ತಲೆ ಕೊಡಿಸಿಕೊಳ್ಳಲ್ಲ. ಜನರಿಗೆ ಉತ್ತಮ ಆಡಳಿತ ನೀಡ್ತಿನಿ ಅಂದಿದ್ದರು ಎಂದು ಯತ್ನಾಳ್ ತಿಳಿಸಿದ್ದಾರೆ.

Follow Us:
Download App:
  • android
  • ios