ನಾನು ಸಿಎಂ ಆದ್ರೆ ಪಾಕಿಸ್ತಾನ ಪರ ಕೂಗೋರನ್ನ ಎನ್‌ಕೌಂಟರ್ ಮಾಡೋಕೆ ಪೊಲೀಸರಿಗೆ ಫುಲ್ ಪರ್ಮಿಷನ್ ಕೊಡ್ತೇನೆ: ಯತ್ನಾಳ್

ನಾನು ಮುಂದೊಮ್ಮೆ ಗೃಹಮಂತ್ರಿಯಾದ್ರೆ ಅಥವಾ ನೀವೆಲ್ಲ ಸೇರಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ರೆ ಪಾಕಿಸ್ತಾನ ಜೈ ಅನ್ನೋರನ್ನ ಎನ್‌ಕೌಂಟರ್ ಮಾಡೋಕೆ ಪೊಲೀಸರಿಗೆ ಫುಲ್ ಪರ್ಮಿಷನ್ ಕೊಡ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

Vijayapur BJP MLA Basanagowda patil yatnal statement at bagalkote Lok sabha constituency rav

ಬಾಗಲಕೋಟೆ (ಏ.18): ನಾನು ಮುಂದೊಮ್ಮೆ ಗೃಹಮಂತ್ರಿಯಾದ್ರೆ ಅಥವಾ ನೀವೆಲ್ಲ ಸೇರಿ ನನ್ನನ್ನು ಮುಖ್ಯಮಂತ್ರಿ ಮಾಡಿದ್ರೆ ಪಾಕಿಸ್ತಾನ ಜೈ ಅನ್ನೋರನ್ನ ಎನ್‌ಕೌಂಟರ್ ಮಾಡೋಕೆ ಪೊಲೀಸರಿಗೆ ಫುಲ್ ಪರ್ಮಿಷನ್ ಕೊಡ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಇಂದು ಬಾಗಲಕೋಟೆಯಲ್ಲಿ ನಡೆದ ಬಿಜೆಪಿ ಚುನಾವಣಾ ರಾಲಿಯಲ್ಲಿ ಮಾತನಾಡಿದ ಶಾಸಕ, ನಾನು ಮುಖ್ಯಮಂತ್ರಿ ಆದರೆ ದೇಶದ್ರೋಹಿಗಳ ಬಾಯಿಂದ ಪಾ.. ಬರೋವಷ್ಟರಲ್ಲೇ ಬಾಯಲ್ಲೊಂದು, ಹಿಂದೊಂದು ಗುಂಡು ಹಾಕಿಸಿಬಿಡ್ತೇನೆ. ಕೋಯಿ ಪಾಕಿಸ್ತಾನ ಕಾ ಘೋಷಣಾ ಕಿಯಾ ತಾ ಎನ್‌ಕೌಂಟರ್ ಕರನೇಕಾ.. ಪೊಲೀಸರು ಅಂತಹ ದೇಶದ್ರೋಹಿಗಳನ್ನು ಠಾಣೆವರೆಗೆ ಕರೆತಂದರೆ ಸಸ್ಪೆಂಡ್ ಮಾಡುತ್ತೇನೆ. ಪಾಕಿಸ್ತಾನ ಪರ ಘೋಷಣೆ ಕೂಗಿದ ಜಾಗದಲ್ಲೇ ಹೊಡೆದುಬಂದರೆ ಅವರಿಗೆ ಪ್ರಮೋಷನ್ ಸಿಗುತ್ತೆ. ಪಿಎಸ್‌ಐ ಇದ್ದೋರು ಸಿಪಿಐ, ಪೊಲೀಸ್ ಇದ್ದವರು ಹವಾಲ್ದಾರ್ ಆಗಿ ಪ್ರಮೋಷನ್ ಎಂದರು.

ಹುಬ್ಬಳ್ಳಿಯಲ್ಲಿ ಕಾರ್ಪೋರೇಟರ್ ಮಗಳು ಲವ್ ಜಿಹಾದ್‌ಗೆ ಬಲಿ? 9 ಬಾರಿ ಚಾಕು ಇರಿದ ಆರೋಪಿ ಫಯಾಜ್!

ಕಾಂಗ್ರೆಸ್ ಸರ್ಕಾರ ಬಂದಾಗಿಂದ ಹಿಂದೂಗಳ ಮೇಲೆ ದಾಳಿ ಆಗ್ತಿದೆ. ಸುಮ್ಮ ಸುಮ್ಮನೆ ತೊಂದರೆ ಕೊಟ್ಟರೆ ಸರಿ ಇರೊಲ್ಲ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಬಹುತೇಕರು ನನ್ನ ಫ್ಯಾನ್‌ಗಳೇ ಇದ್ದಾರೆ. ಮುಂದೆ ನನಗೆ ಮುಖ್ಯಮಂತ್ರಿ ಆಗೋಕೆ ಓಟು ಹಾಕ್ತೀರೋ ಇಲ್ವೋ ಎಂದಾಗ ಯತ್ನಾಳ್ ಮಾತಿಗೆ ಕೇಕೆ ಹಾಕಿದ ಜನ. ಯತ್ನಾಳ್ ಜೈ ಎಂಬ ಘೋಷಣೆ ಕೂಗಿದ ಜನರು.

 

ಚುನಾವಣೆ ಮುಗಿದ 15 ದಿನಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ; ಹೊಸ ಬಾಂಬ್ ಸಿಡಿಸಿದ ಶಾಸಕ ಯತ್ನಾಳ್

ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಾಗ್ದಾಳಿ:

ಬಾಗಲಕೋಟೆಗೆ ಬಂದು ಪಂಚಮಸಾಲಿ ಮತ ಕೇಳೋದ್ರಲ್ಲಿ ಏನು ನೈತಿಕತೆ ಇದೆ. ಎಂದಾದರೂ ಪಂಚಮಸಾಲಿ ಸಮಾಜದ ಮೀಸಲಾತಿಗೆ ಬಂದಿದ್ದೀರಾ? ಹೋರಾಟ ಮಾಡಿದ್ದೀರಾ? ಪಂಚಮಸಾಲಿ ಹೋರಾಟದ ಪಾದಯಾತ್ರೆಗೆ ಸಹಾಯ ಕೇಳಿದ್ರೆ ಮಗಳ ಮದುವೆ ಆಗಿದೆ, ಬಹಳ ಸಾಲ ಆಗಿದೆ, ಕೊಡೋಕಾಗೊಲ್ಲ ಎಂದ ಪುಣ್ಯಾತ್ಮ ಇವ್ರು. ಹೀಗಾಗಿ ಯಾರೂ ಸಹ ಇವರ ಆಮಿಷೆಗಳಿಗೆ ಬಲಿಯಾಗಬೇಡಿ. ನಮ್ಮ ಸಮುದಾಯದವರು ಯಾರೂ ಕಾಂಗ್ರೆಸ್ ಅಭ್ಯರ್ಥಿಯನ್ನ ಬೆಂಬಲಿಸಬೇಡಿ. ಬೆಂಬಲಿಸೋದಿಲ್ಲ ಎಂಬ ನಂಬಿಕೆ ಇದೆ ಎಂದರು.

Latest Videos
Follow Us:
Download App:
  • android
  • ios