ಮಂಗಳೂರು ಕೋಮು ಸೂಕ್ಷ್ಮ ಪ್ರದೇಶಕ್ಕೆ ವೀರ ಸಾವರ್ಕರ್ ಹೆಸರು!

ದ‌.ಕ ಜಿಲ್ಲೆಯ ಕೋಮು ಸೂಕ್ಷ್ಮ ಪ್ರದೇಶಕ್ಕೆ ಸಾವರ್ಕರ್ ಹೆಸರಿಡಲು ಮಂಗಳೂರಿನ ಬಿಜೆಪಿ ಶಾಸಕರ ನೇತೃತ್ವದಲ್ಲಿ ಸದ್ದಿಲ್ಲದೇ ಸಿದ್ದತೆ ನಡೆಯುತ್ತಿದ್ದು, ಸುರತ್ಕಲ್ ಜಂಕ್ಷನ್‌ಗೆ ಸಾವರ್ಕರ್ ಹೆಸರಿಡೋ ತಯಾರಿ ಅಂತಿಮ ಹಂತದಲ್ಲಿದೆ.

Veera Savarkar is the name of Mangalore communal sensitive area bharath shetty  rav

ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಆ.21): ದ‌.ಕ ಜಿಲ್ಲೆಯ ಕೋಮು ಸೂಕ್ಷ್ಮ ಪ್ರದೇಶಕ್ಕೆ ಸಾವರ್ಕರ್ ಹೆಸರಿಡಲು ಮಂಗಳೂರಿನ ಬಿಜೆಪಿ ಶಾಸಕರ ನೇತೃತ್ವದಲ್ಲಿ ಸದ್ದಿಲ್ಲದೇ ಸಿದ್ದತೆ ನಡೆಯುತ್ತಿದ್ದು, ಕಾನೂನು ಪ್ರಕಾರವೇ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ತಯಾರಿ ಅಂತಿಮ ಹಂತದಲ್ಲಿದೆ.

Mangaluru: ಸುರತ್ಕಲ್ ಸರ್ಕಲ್‌ಗೆ ಸಾವರ್ಕರ್ ಹೆಸರು: ಕಾಂಗ್ರೆಸ್ ತೀವ್ರ ಆಕ್ಷೇಪ, ಹೋರಾಟದ ಎಚ್ಚರಿಕೆ

ಮಂಗಳೂರು ಮಹಾನಗರ ಪಾಲಿಕೆ(Mangalore Municipal Corporation)ಯ ಕೌನ್ಸಿಲ್ ಸಭೆಯಲ್ಲೂ ಮಂಡನೆಯಾಗಿದ್ದು, ಮಂಗಳೂರು ಉತ್ತರ ಬಿಜೆಪಿ(BJP) ಶಾಸಕ ಡಾ.ಭರತ್ ಶೆಟ್ಟಿ(MLA Bharath Shetty) ನೇತೃತ್ವ ವಹಿಸಿದ್ದಾರೆ. ಮಂಗಳೂರು ಹೊರವಲಯ ಸುರತ್ಕಲ್ ಜಂಕ್ಷನ್(Suratkal Junction) ಗೆ ಸಾವರ್ಕರ್(Savarkar) ಹೆಸರಿಡಲು ತಯಾರಿ ನಡೆದಿದ್ದು, ಕಳೆದ ವರ್ಷವೇ ಪಾಲಿಕೆಗೆ ಶಾಸಕ ಭರತ್ ಶೆಟ್ಟಿ ಪ್ರಸ್ತಾವನೆ ಸಲ್ಲಿಸಿದ್ದು, ಆ ಬಳಿಕ ಕೌನ್ಸಿಲ್ ಸಭೆಯಲ್ಲಿ ವಿರೋಧದ ಮಧ್ಯೆಯೇ ಪ್ರಸ್ತಾವನೆ ಪಾಸ್ ಆಗಿದೆ. ಸದ್ಯ ಪಾಲಿಕೆ ಸ್ಥಾಯಿ ಸಮಿತಿ ಮುಂದಿರೋ ಸಾವರ್ಕರ್ ಹೆಸರಿಡೋ ಪ್ರಸ್ತಾವನೆ, ಕೆಲವೇ ದಿನಗಳಲ್ಲಿ ಪಾಲಿಕೆ ಮೂಲಕ ಸರ್ಕಾರದ ಅನುಮತಿಗೆ ರವಾನೆಯಾಗಲಿದೆ. ಅನುಮತಿ ಸಿಕ್ಕ ತಕ್ಷಣ ‌ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ‌ನಾಮಕರಣ ಮಾಡಲು ಪ್ಲಾನ್ ಮಾಡಲಾಗಿದ್ದು, ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ನೇತೃತ್ವದಲ್ಲಿ‌‌ ಯೋಜನೆ ಹಾಕಿಕೊಳ್ಳಲಾಗಿದೆ. ಫಾಝಿಲ್ ಹತ್ಯೆ ಬಳಿಕ ಮತ್ತಷ್ಟು ಉದ್ವಿಗ್ನಗೊಂಡಿದ್ದ ಸುರತ್ಕಲ್ ಮತ್ತೊಂದು ಸಂಘರ್ಷಕ್ಕೆ ವೇದಿಕೆಯಾಗುತ್ತಾ ಅನ್ನೋ ಆತಂಕ ಎದುರಾಗಿದೆ.

'ಏನೇ ಅಡೆತಡೆ ಬಂದರೂ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡ್ತೇವೆ': ಭರತ್ ಶೆಟ್ಟಿ

ಇನ್ನು ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡೋ ಪ್ರಸ್ತಾಪವನ್ನು ಸ್ಥಳೀಯ ಕಾರ್ಪೋರೆಟರ್ ಗಳು ಇಟ್ಟಿದ್ಧರು. ಭಜರಂಗದಳ(Bhajarangadala), ಜಾಗರಣವೇದಿಕೆ ಸೇರಿ ಹಲವು ಸಂಘಟನೆ ನನ್ನ ಬಳಿ ಕೇಳಿಕೊಂಡಿದ್ದವು.‌ ನಾನು ನನ್ನ ಲೆಟರ್ ಹೆಡ್ ನಲ್ಲಿ ಮಂಗಳೂರು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಕಾನೂನಿನ ಮೂಲಕ ಅದು ಪಾಲಿಕೆ ಕೌನ್ಸಿಲ್ ಸಭೆಯ ಮುಂದೆ ಬಂದಿತ್ತು.‌ ಸದ್ಯ ಆ ಸಭೆಯಲ್ಲಿ ‌ಮಂಡನೆಯಾಗಿ ಅಲ್ಲಿಂದ ‌ಪಾಸ್ ಆಗಿದೆ. ಸದ್ಯ ಅದು ಮಂಗಳೂರು ಪಾಲಿಕೆ ಸ್ಥಾಯಿ ಸಮಿತಿಯ ಮುಂದೆ ಇದೆ. ಅಲ್ಲಿಂದ ಪಾಸ್ ಆಗಿ ಸರ್ಕಾರದ ಮುಂದೆ ಬಂದು ಮತ್ತೆ ಕೌನ್ಸಿಲ್ ನಲ್ಲಿ ಪಾಸ್ ಆಗಲಿದೆ.‌ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ‌ಮತ್ತು ಎಸ್ ಡಿಪಿಐ ಅದಕ್ಕೆ ವಿರೋಧ ಮಾಡಿತ್ತು.‌

ಮಂಗ್ಳೂರು ಪಾಲಿಕೆ ಸುರತ್ಕಲ್‌ ವಲಯ ಕಚೇರಿ ಉದ್ಘಾಟನೆ

ಆದರೆ ರಾಜಕೀಯಕ್ಕಾಗಿ ವಿರೋಧಿಸ್ತಾ ಇದಾರಾ? ಅಥವಾ ಬೇರೆ ಕಾರಣಕ್ಕಾ ಅರ್ಥ ಆಗ್ತಿಲ್ಲ. ಜಂಕ್ಷನ್ ಗೆ ಹೆಸರಿಡೋ ವಿಚಾರಕ್ಕೆ ತಡೆ ಆಗಲ್ಲ, ತಡೆಯೋಗದಕ್ಕೆ ಸಾಧ್ಯವೂ ಇಲ್ಲ. ಕಾನೂನು ಪ್ರಕಾರ ಅದೊಂದು ಸ್ವಾತಂತ್ರ್ಯ ಹೋರಾಟಗಾರನ‌ ಹೆಸರು. ಸಿದ್ದರಾಮಯ್ಯ ಮುಸ್ಲಿಂ ಏರಿಯಾಗಳ ಮಾತುಗಳನ್ನು ಆಡ್ತಿದಾರೆ. ಈ ಮೂಲಕ‌ ಇಂಥ ಸ್ಟೇಟ್ ಮೆಂಟ್ ಗಳ ಮೂಲಕವೇ ಪ್ರಚೋದನೆ ಕೊಡ್ತಿದಾರೆ.‌ ಸ್ವಾತಂತ್ರ್ಯ ವೀರನ ಹೆಸರಿಡಲು ಯಾವುದೇ ಸಮಸ್ಯೆ ಬರಬಾರದು. ಸುರತ್ಕಲ್ ನಲ್ಲಿ ಕೋಮು ಗಲಭೆ ಆಗದಂತೆ ನಮ್ಮ ಸರ್ಕಾರ ತಡೆದಿದೆ.‌ ಗಲಭೆ ಆಗಲು‌ ನಾವು ಬಿಡಲ್ಲ, ಅದನ್ನ ನಾವು ತಡೆಯುತ್ತೇವೆ. ಪಕ್ಷದ ನಾಯಕರು ಒಳ್ಳೆಯ ವಿಷಯ ಅಂತ ಇದನ್ನ ಬೆಂಬಲಿಸಿದ್ದಾರೆ. ಜನರಿಗೆ ಸಾವರ್ಕರ್ ಬಗ್ಗೆ ‌ಮಾಹಿತಿ ಕೊಡೋ ಕೆಲಸ ಆಗಲಿ ಅಂತ ಪಕ್ಷದ ಹಿರಿಯರು ಹೇಳಿದ್ದಾರೆ. ನಾವು ಏನೇ ಅಡೆತಡೆ ಬಂದರೂ ಸುರತ್ಕಲ್ ಜಂಕ್ಷನ್ ಗೆ ಸಾವರ್ಕರ್ ಹೆಸರಿಡ್ತೇವೆ. ಯಾವುದೇ ತಡೆ ಬಂದರೂ ಆ ಕೆಲಸ ಮಾಡಿಯೇ ಸಿದ್ದ ಎಂದಿದ್ದಾರೆ.

Latest Videos
Follow Us:
Download App:
  • android
  • ios