ರಾಜಸ್ತಾನ ರಾಜಕೀಯ ಬಿಕ್ಕಟ್ಟು; ಮೌನ ಮುರಿದು ಅಖಾಡಕ್ಕಿಳಿದ ವಸುಂಧರಾ ರಾಜೆ
ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಮಧ್ಯೆ ಜಗಳ ನಡೆದಾಗ ಒಂದೂ ಹೇಳಿಕೆ ನೀಡದೆ ಸುಮ್ಮನಿದ್ದ ‘ಮಹಾರಾಣಿ’ ವಸುಂಧರಾ ರಾಜೇ ಸಿಂಧಿಯಾ, ಜಗಳಕ್ಕೆ ರಾಹುಲ್ ತೇಪೆ ಹಚ್ಚಿದ ನಂತರ ದಿಲ್ಲಿಗೆ ಬಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದ್ದಾರೆ. ರಾಜಸ್ಥಾನದಲ್ಲಿ ವಿರೋಧ ಪಕ್ಷದ ನಾಯಕತ್ವ ತನಗೆ ಕೊಡಬೇಕೆಂದು ವಸುಂಧರಾ ಪಟ್ಟು ಹಿಡಿದಿದ್ದಾರೆ.
ಬೆಂಗಳೂರು (ಆ. 14): ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಮಧ್ಯೆ ಜಗಳ ನಡೆದಾಗ ಒಂದೂ ಹೇಳಿಕೆ ನೀಡದೆ ಸುಮ್ಮನಿದ್ದ ‘ಮಹಾರಾಣಿ’ ವಸುಂಧರಾ ರಾಜೇ ಸಿಂಧಿಯಾ, ಜಗಳಕ್ಕೆ ರಾಹುಲ… ತೇಪೆ ಹಚ್ಚಿದ ನಂತರ ದಿಲ್ಲಿಗೆ ಬಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದ್ದಾರೆ.
ರಾಜಸ್ಥಾನದಲ್ಲಿ ವಿರೋಧ ಪಕ್ಷದ ನಾಯಕತ್ವ ತನಗೆ ಕೊಡಬೇಕೆಂದು ವಸುಂಧರಾ ಪಟ್ಟು ಹಿಡಿದಿದ್ದಾರೆ. ಈಗ ವಸುಂಧರಾ ಅವರ ಬದ್ಧ ವೈರಿ ಗುಲಾಬ್ ಕಟಾರಿಯಾ ವಿರೋಧ ಪಕ್ಷದ ನಾಯಕರಾಗಿದ್ದರೆ, ಇನ್ನೊಬ್ಬ ವಿರೋಧಿ ರಜಪೂತ ಗಜೇಂದ್ರ ಶೆಖಾವತ್ ಕೇಂದ್ರದಲ್ಲಿ ಪ್ರಭಾವಿ ಮಂತ್ರಿ. ವಸುಂಧರಾರ ಸಮಸ್ಯೆ ಎಂದರೆ ಸಂಘ ಮತ್ತು ಅಮಿತ್ ಶಾ ಇಬ್ಬರ ಜೊತೆಗೆ ಹೊಂದಾಣಿಕೆ ಇಲ್ಲ.
ರಾಜಸ್ಥಾನ ರಾಜಕೀಯದಲ್ಲಿ ತಿಕ್ಕಾಟ; ಕುತೂಹಲ ಮೂಡಿಸಿದೆ ವಸುಂಧರಾ ರಾಜೆ ಮೌನ
ಕೋವಿಡ್‌ನ ಪ್ರಭಾವ ನೋಡಿ, ಪಾರ್ಲಿಮೆಂಟ್‌ನ ಕ್ಯಾಂಟೀನ್‌ನಲ್ಲಿ ಕಷಾಯ ಸಿಗಲು ಆರಂಭವಾಗಿದೆ. 11 ರು.ಗೆ ಒಂದು ಕಪ್ ಕಷಾಯ ಸಿಗುತ್ತಿದೆ. ಸ್ವತಃ ಪ್ರಧಾನಿ ಮೋದಿಯೇ ಸ್ಪೀಕರ್ ಓಂ ಬಿರ್ಲಾರಿಗೆ, ಸಂಸದರಿಗೆ ಕಷಾಯ ಕೊಡಿಸುವಂತೆ ಹೇಳಿದ್ದರಂತೆ.
ಇನ್ನು ಪಾರ್ಲಿಮೆಂಟ್ ಗೇಟ್‌ನಲ್ಲಿ ಒಳಗೆ ಬರುವಾಗ ಸಂಸದರ ಐಡಿ ಕಾರ್ಡನ್ನು ಕಡ್ಡಾಯವಾಗಿ ಚೆಕ್ ಮಾಡಲಾಗುತ್ತಿದ್ದು, ಮಾಸ್ಕ್‌ನ ಕಾರಣದಿಂದ ಸಿಬ್ಬಂದಿಗೆ ಸಂಸದರನ್ನು ಗುರುತಿಸುವುದು ಕಷ್ಟವಾಗುತ್ತಿದೆಯಂತೆ. ಅಂದಹಾಗೆ, ಸ್ಪೀಕರ್ ಬಿರ್ಲಾ ಪಾರ್ಲಿಮೆಂಟ್ ಕಟ್ಟಡದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಕೊಡುವ ಮಷಿನ್ ಅಳವಡಿಸಿದ್ದು, ಇದು ಮಹಿಳಾ ಸಿಬ್ಬಂದಿಯ ಬಹು ವರ್ಷಗಳ ಬೇಡಿಕೆಯಾಗಿತ್ತು. ಬಹುತೇಕ ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಅಧಿವೇಶನ ನಡೆಸಬಹುದು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ