ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಂಪಾವತ್ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಆದರೆ, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಇದೇ ಮೊದಲ ಬಾರಿಗೆ ಠೇವಣಿ ಕಳೆದುಕೊಂಡಿದೆ. 

ನವದೆಹಲಿ (ಜೂನ್ 3): ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಂಪಾವತ್ (ttarakhand Chief Minister Pushkar Singh Dhami ) ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಕಂಡಿದ್ದಾರೆ. ಇನ್ನು ಈ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ (Congress Party) ಇದೇ ಮೊದಲ ಬಾರಿಗೆ ಠೇವಣಿ ನಷ್ಟ (loses deposit ) ಅವಮಾನ ಎದುರಿಸಿದೆ.

ಪುಷ್ಕರ್ ಸಿಂಗ್ ಧಾಮಿ ಅವರು ಕಾಂಗ್ರೆಸ್ ಅಭ್ಯರ್ಥಿ ನಿರ್ಮಲಾ ಗಹ್ತೋಡಿ (Nirmala Gahtodi) ಅವರನ್ನು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಧಾಮಿ 55,025 ಮತಗಳನ್ನು ಪಡೆದರೆ, ಗಹತೋಡಿ ಕೇವಲ 3233 ಮತಗಳನ್ನು ಪಡೆದರು. 2017ರಲ್ಲಿ ಕೈಲಾಶ್ ಗೆಹ್ತೋಡಿ 17,360 ಮತಗಳಿಂದ ಜಯ ಸಾಧಿಸಿದ್ದರು. ಕಳೆದ ತಿಂಗಳು ಚಂಪಾವತ್ ಶಾಸಕ ಕೈಲಾಶ್ ಗೆಹತೋಡಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಲುವಾಗಿ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದರು. ಆ ನಂತರ ಚಂಪಾವತ್ ಗೆ ಉಪಚುನಾವಣೆ ಘೋಷಣೆಯಾಗಿತ್ತು.

ಪುಷ್ಕರ್ ಸಿಂಗ್ ಧಾಮಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಉತ್ತರಾಖಂಡ ವಿಧಾನಸಭೆ ಚುನಾವಣೆಗೆ ಹೋಗಿದ್ದ ಬಿಜೆಪಿ, ಸಂಪೂರ್ಣ ಬಹುಮತದ ಗೆಲುವು ದಾಖಲಿಸಿತ್ತು. ಆದರೆ, ಪುಷ್ಕರ್ ಸಿಂಗ್ ಧಾಮಿ, ಖತಿಮಾ ವಿಧಾನಸಭೆ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಆದರೆ, ಬಿಜೆಪಿ ಹೈ ಕಮಾಂಡ್ ಮಾತ್ರ, ಪುಷ್ಕರ್ ಸಿಂಗ್ ಧಾಮಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು.

Scroll to load tweet…


ಗೆಲುವಿನ ಬೆನ್ನಲ್ಲಿಯೇ ಚಂಪಾವತ್ ಜನರಿಗೆ ಪುಷ್ಕರ್ ಸಿಂಗ್ ಧಾಮಿ ಧನ್ಯವಾದ ಸಲ್ಲಿಸಿದ್ದಾರೆ. "ಚಂಪಾವತ್ ಜನರೇ, ನನಗೆ ಮಾತುಗಳೇ ಬರದಂತಾಗಿದೆ. ನಿಮ್ಮ ಮತಗಳ ಮೂಲಕ ನನಗೆ ಸಿಕ್ಕಿರುವ ಪ್ರೀತಿ ಆಶೀರ್ವಾದವನ್ನು ನೋಡಿ ನಾನು ಭಾವುಕನಾಗಿದ್ದೇನೆ' ಎಂದು ಧಾಮಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಮೇ 21ರಂದು ಚಂಪಾವತ್ ಉಪಚುನಾವಣೆಯ ಮತದಾನ ನಡೆದಿತ್ತು. ಮೊದಲ ಸುತ್ತಿನ ಮತಎಣಿಕೆಯ ಬಳಿಕ ಪುಷ್ಕರ್ ಸಿಂಗ್ ಧಾಮಿ ಗೆಲುವು ಕಾಣುವುದು ಬಹುತೇಕ ಖಚಿತವಾಗಿತ್ತು. ಆದರೆ, ಪ್ರತಿ ಸುತ್ತಿನ ಮತ ಎಣಿಕೆಯ ಬಳಿಕ ಗೆಲುವಿನ ಅಂತರ ಇನ್ನಷ್ಟು ವಿಸ್ತಾರವಾಯಿತು. ಅದಲ್ಲದೆ, ಉಪಚುನಾವಣೆಯನ್ನು ಬೃಹತ್ ಅಂತರದಲ್ಲಿ ಗೆದ್ದ ಅಭ್ಯರ್ಥಿ ಎನ್ನುವ ದಾಖಲೆಯನ್ನೂ ಧಾಮಿ ಮಾಡಿದ್ದಾರ.ೆ ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಬಹುಗುಣ ಹೆಸರಲ್ಲಿ ಈ ದಾಖಲೆ ಇತ್ತು. ಚಂಪಾವತ್ ನಲ್ಲಿ 54 ಸಾವಿರ ಮತಗಳ ಅಂತರದಲ್ಲಿ ಧಾಮಿ ಗೆಲುವು ಕಂಡಿದ್ದಾರೆ. ಚುನಾವಣಾ ಆಯೋಗದ ಪ್ರಕಾರ, ಪುಷ್ಕರ್ ಸಿಂಗ್ ಧಾಮಿ 92.94 ರಷ್ಟು ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ನ ಮತಗಳಿಕೆ ಶೇ.5.16 ಮಾತ್ರ ಎನ್ನಲಾಗಿದೆ.

ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಪುಷ್ಕರ್‌ ಸಿಂಗ್‌ ಧಾಮಿ

ಪ್ರಧಾನಿ ಮೋದಿ ಅಭಿನಂದನೆ
: ಪುಷ್ಕರ್ ಸಿಂಗ್ ಧಾಮಿ ಗೆಲುವು ಸಾಧಿಸಿದ ಬೆನ್ನಲ್ಲಿಯೇ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಉತ್ತರಾಖಂಡ ರಾಜ್ಯದ ಅಭಿವೃದ್ದಿಗಾಗಿ ಪುಷ್ಕರ್ ಸಿಂಗ್ ಧಾಮಿ ಇನ್ನಷ್ಟು ಪರಿಶ್ರಮ ವಹಿಸಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಬರೆದುಕೊಂಡಿದ್ದಾರೆ.

Uttarakhand CM ಸೋತರೂ ಪುಷ್ಕರ್ ಸಿಂಗ್ ಧಾಮಿಗೆ ಉತ್ತರಖಂಡ ಸಿಎಂ ಪಟ್ಟ, ಇದಕ್ಕಿದೆ 5 ಕಾರಣ!

ಚಂಪಾವತ್ ಉಪಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಿದ ಉತ್ತರಾಖಂಡದ ಡೈನಾಮಿಕ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಗೆ ಅಭಿನಂದನೆಗಳು. ಉತ್ತರಾಖಂಡ ರಾಜ್ಯದ ಅಭಿವೃದ್ದಿಗಾಗಿ ಪುಷ್ಕರ್ ಸಿಂಗ್ ಧಾಮಿ ಇನ್ನಷ್ಟು ಪರಿಶ್ರಮ ವಹಿಸಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ನನಗಿದೆ. ಬಿಜೆಪಿ ಮೇಲೆ ನಂಬಿಕೆ ಇಟ್ಟ ಚಂಪಾವತ್ ಜನರಿಗೂ ಈ ವೇಳೆ ಧನ್ಯವಾದ ಸಲ್ಲಿಸುತ್ತೇನೆ. ಅದರೊಂದಿಗೆ ನಮ್ಮ ಕಾರ್ಯಕರ್ತರ ಶ್ರಮದ ಬಗ್ಗೆಯೂ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.