ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಮೈಕ್ ಸರ್ಕಾರ ಆಫ್ ಮಾಡಿಲ್ಲ. ದೇಶದ ಜನರೇ ಅವರ ಧ್ವನಿಯನ್ನ ದಮನ ಮಾಡಿದ್ದಾರೆ: ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ
ಬೆಂಗಳೂರು(ಮಾ.07): ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರ ಮೈಕ್ ಆನ್ ಆಫ್ ಮಾಡುವ ಮೂಲಕ ಪ್ರತಿಪಕ್ಷಗಳ ಧ್ವನಿಯನ್ನ ದಮನ ಮಾಡಲಾಗ್ತಿದೆ ಎಂಬ ರಾಹುಲ್ ಆರೋಪವನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಳ್ಳಿ ಹಾಕಿದ್ದಾರೆ. ರಾಹುಲ್ ಗಾಂಧಿ ಹೊರದೇಶದ ನೆಲದಲ್ಲಿ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಬಾಯಿಗೆ ಬಂದ ಹಾಗೆ ಮಾಡುತ್ತಿದ್ದಾರೆ ಎಂದು ಜೋಶಿ ಕಿಡಿ ಕಾರಿದ್ದಾರೆ.
ಬ್ರಿಟನ್ ಸಂಸತ್ತಿನಲ್ಲಿ ಪತ್ರಕರ್ತರ ಜೊತೆ ಸಂವಾದದ ವೇಳೆ ರಾಹುಲ್ ಗಾಂಧಿ ಮಾಡಿರುವ ಆರೋಪವನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಲ್ಲಗೆಳೆದಿದ್ದಾರೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕರ ಧ್ವನಿಯನ್ನ ಹತ್ತಿಕ್ಕುವ ದಮನ ಮಾಡುವ ಪ್ರಯತ್ನವನ್ನ ಸರ್ಕಾರವಾಗಲಿ, ಸ್ಪೀಕರ್ ಆಗಲಿ ಮಾಡಿಲ್ಲ ಅಂತ ಹೇಳಿದ್ದಾರೆ.
ಮನಸ್ಸು ಮಾಡಿದ್ರೆ ಮಾಡಾಳು ವಿರುದ್ಧ ಕೇಸ್ ತಪ್ಪಿಸಬಹುದಿತ್ತು: ಪ್ರಲ್ಹಾದ್ ಜೋಶಿ
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರ ಧ್ವನಿಯನ್ನ ದೇಶದ ಜನರೇ ದಮನ ಮಾಡಿದ್ದಾರೆ. ಪ್ರತಿಪಕ್ಷವಾಗಿಯೂ ಲೋಕಸಭೆಯಲ್ಲಿ ಕಾಂಗ್ರೆಸ್ ತನ್ನ ಕರ್ತವ್ಯ, ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಹೀಗಾಗಿ ದೇಶದ ಜನರು ಕಾಂಗ್ರೆಸ್ ಅನ್ನ ಪ್ರತಿಪಕ್ಷ ಸ್ಥಾನಕ್ಕೂ ಪುರಸ್ಕರಿಸಿಲ್ಲ ಅಂತ ತಿಳಿಸಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ಮೋಷನ್ ಆಫ್ ಥ್ಯಾಂಕ್ಷ್ ವೇಳೆ ರಾಹುಲ್ ಗಾಂಧಿಯವರಿಗೆ ನಿಯಮದ ಪ್ರಕಾರ 1 ಗಂಟೆ 9 ನಿಮಷ ಅವಕಾಶ ಕಲ್ಪಿಸಿಕೊಡಬಹುದು. ಆದರೂ, ಲೋಕಸಭೆ ಸ್ಪೀಕರ್ ಅವರು ರಾಹುಲ್ ಗಾಂಧಿಯವರಿಗೆ 2 ಗಂಟೆ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸದನದಲ್ಲಿ ಅವಕಾಶ ಕಲ್ಪಿಸಿದರೂ, ರಾಹುಲ್ ಗಾಂಧಿ ಸರ್ಕಾರದ ಮೇಲೆ ಆಧಾರ ರಹಿತ ಆರೋಪಗಳನ್ನ ಮಾಡುತ್ತಿದ್ದರು. ಸದನದ ನಿಯಮದ ಪ್ರಕಾರ ಯಾವುದೇ ಪ್ರಾಥಮಿಕ ಮಾಹಿತಿ ದಾಖಲೆಗಳನ್ನ ರಾಹುಲ್ ಗಾಂಧಿ ಒದಗಿಸಿರಲಿಲ್ಲ ಎಂದಿದ್ದಾರೆ.
ಸದನದಲ್ಲಿ ಪ್ರತಿಪಕ್ಷಗಳ ನಾಯಕರ ಮೈಕ್ ಗಳನ್ನ ಆಫ್ ಮಾಡಲಾಗ್ತಿದೆ ಎಂದು ಆರೋಪಿಸುವ ರಾಹುಲ್ ಗಾಂಧಿ, ತಮ್ಮ ಅಜ್ಜಿ ತುರ್ತು ಪರಿಸ್ಥಿತಿ ಹೇರೆ ದೇಶದ ಎಲ್ಲ ವಿಪಕ್ಷ ನಾಯರನ್ನ ಬಂಧಿಸಲು ಆದೇಶಿಸಿದ್ದನ್ನ ಮರೆತಂತಿದೆ. ಇವರು ದೇಶದ ಪ್ರಜಾಪ್ರಭುತ್ವದ ಬಗ್ಗೆ ಮಾತಾಡ್ತಿದ್ದಾರೆ. ಸದನದ ನಿಯಮಾವಳಿ ಪ್ರಕಾರ ಸಂಸದ ರಾಹುಲ್ ಗಾಂಧಿ ಅವರಿಗೆ ಎಷ್ಟು ಸಮಯ ಕೊಡಬಹುದು ಅಷ್ಟನ್ನ ಕೊಡಲಾಗ್ತಿದೆ. ಅದಕ್ಕೆ ಜನರು ರಾಹುಲ್ ಗಾಂಧಿಯವರ ಪಕ್ಷಕ್ಕೆ ಕೊಟ್ಟಿರುವ ತೀರ್ಪೇ ಕಾರಣ ಹೊರೆತೂ ಸರ್ಕಾರವಲ್ಲ. ಆದರೂ, ವಿದೇಶದ ನೆಲದಲ್ಲಿ ಸ್ಪೀಕರ್ ವಿರುದ್ಧ ಆರೋಪ ರಾಹುಲ್ ಗಾಂಧಿ ಆರೋಪ ಮಾಡ್ತಿರುವುದು ಅವರ ಬಾಲಿಶತನವನ್ನ ತೋರಿಸುತ್ತದೆ ಎಂದು ಜೋಶಿ ತಿರುಗೇಟು ನೀಡಿದ್ದಾರೆ.
