Asianet Suvarna News Asianet Suvarna News

ದೇಶಕ್ಕೆ ಮತ್ತೊಮ್ಮೆ ಮೋದಿ ಅನಿವಾರ್ಯ: ಕೇಂದ್ರ ಸಚಿವ ಭಗವಂತ ಖೂಬಾ

ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮತ್ತೊಮ್ಮೆ ಬಿಜೆಪಿ ಪಕ್ಷ ಬಲಿಷ್ಠ ಗೊಳಿಸಬೇಕು. ಬಿಜೆಪಿ ಕಾರ್ಯಕರ್ತರು ಟೊಂಕ ಕಟ್ಟಿ ವಿಶ್ವ ನಾಯಕ ನರೇಂದ್ರ ಮೋದಿಜಿ ಅವರಿಗೆ ಬೆಂಬಲಿಸಬೇಕು ಎಂದ ಕೇಂದ್ರ ಸಚಿವ ಭಗವಂತ ಖೂಬಾ 

Union Minister Bhagwanth Khuba Talks Over PM Narendra Modi grg
Author
First Published Oct 20, 2023, 10:00 PM IST

ಕಾಳಗಿ(ಅ.20):  ಸಮಾಜ ಒಡೆದಾಳುವ ನೀತಿ, ಕುಟುಂಬದಲ್ಲಿ ಭಿನ್ನಮತ ಸೃಷ್ಟಿಸುತ್ತಾ ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರದ ದ್ವಂದ್ವ ಧೋರಣೆ ನಿರ್ಭಂದಿಸಲು ನರೇಂದ್ರ ಮೋದಿಯವರಿಗೆ ಮತ್ತೊಮ್ಮೆ ಪ್ರಧಾನ ಮಂತ್ರಿ ಮಾಡುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ. 

ಕಾಳಗಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಚಿಂಚೋಳಿ ಕಾಳಗಿ ಕ್ಷೇತ್ರಕ್ಕೆ 8 ಕೋಟಿ ಸಂಸದರ ನಿಧಿಯಿಂದ ಜನತೆಗೆ ಕೊಟ್ಟಿರುವೆ. ನರೇಂದ್ರ ಮೋದಿಜಿಯವರ ಸಾಮರ್ಥ್ಯದಂತೆ ಚಿಂಚೋಳಿ ಕಾಳಗಿ ಕ್ಷೇತ್ರಕ್ಕೆ ಮುಂಬರುವ ದಿನಮಾನದಲ್ಲಿ ನಿರಂತರವಾಗಿ ದುಡಿಯುವ ಪ್ರಯತ್ನ ಮಾಡುತ್ತೇನೆ. ಕಾರ್ಯಕರ್ತರು ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಟ್ಟಿಕೊಳ್ಳಬಾರದು. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮತ್ತೊಮ್ಮೆ ಬಿಜೆಪಿ ಪಕ್ಷ ಬಲಿಷ್ಠ ಗೊಳಿಸಬೇಕು. ಬಿಜೆಪಿ ಕಾರ್ಯಕರ್ತರು ಟೊಂಕ ಕಟ್ಟಿ ವಿಶ್ವ ನಾಯಕ ನರೇಂದ್ರ ಮೋದಿಜಿ ಅವರಿಗೆ ಬೆಂಬಲಿಸಬೇಕು ಎಂದರು.

ಕರ್ನಾಟಕದಲ್ಲಿ ಸಿದ್ದರಾಮಯ್ಯರಿಂದ ತುಘಲಕ್ ಆಡಳಿತ: ಕೇಂದ್ರ ಸಚಿವ ಭಗವಂತ ಖೂಬಾ

ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ್‌ ಮಾತನಾಡಿ, ಕಾರ್ಯಕರ್ತರಿಂದ ಬಿಜೆಪಿ ಕುಟುಂಬ ಭದ್ರವಾಗಬೇಕಿದೆ. ಮುಂದಿನ ಪೀಳಿಗೆಯ ಸಮಸ್ತ ಭವಿಷ್ಯಕ್ಕಾಗಿ ಧರ್ಮ ಉಳಿವಿಗಾಗಿ ನರೇಂದ್ರ ಮೋದಿಜಿರವರ ನೇತೃತ್ವದಲ್ಲಿ ದೇಶ ಮುನ್ನಡೆಯಬೇಕಿದೆ ಎಂದರು.

ಸಂಜಯ ಮಿಸ್ಕೀನ್, ಪ್ರಶಾಂತ ಕದಂ,ಶಶಿಕಾಂತ ಸುಗೂರ, ಸಂತೋಷ ಪಾಟೀಲ ಮಂಗಲಗಿ, ಸಂತೋಷ ಗಡಂತಿ,‌ ಶಿವಕುಮಾರ ಪಾಟೀಲ ಹೇರೂರ, ಶಿವರಾಜ ಪಾಟೀಲ ಗೊಣಗಿ, ರಾಮರಾವ್ ಪಾಟೀಲ ಮೊಘ, ಶರಣು ಬುಬಲಿ, ವಿಜಯಕುಮಾರ ಚೇಂಗಟಿ, ಜಗಧೀಶ ಪಾಟೀಲ ಕಾಳಗಿ, ಅಮೃತರಾವ ಪಾಟೀಲ, ಬಸವರಾಜ ಬಸ್ತೆ, ರಾಮು ರಾಠೋಡ, ರಾಜಶೇಖರ ಗುಡದಾ, ಶರಣು ಭೈರಪ್ಪನವರ, ವೀರಣ್ಣಾ ಗಂಗಾಣಿ, ಶಿವಕುಮಾರ ಕೊಡಸಾಲಿ, ಮಂಜುನಾಥ ಬೇರನ, ಶಿವಕುಮಾರ ಕದಂ, ಜಗನ್ನಾಥ ತೇಲಿ, ಭೀಮಶೆಟ್ಟಿ ಮುಕ್ಕಾ, ಶರಣು ಚಂದಾ, ಈಶುಗೌಡ ಮಳಗಿ, ನಿಂಬೆಣಪ್ಪ ಮಳಗಿ, ಅಂಬರೀಶ್ ಸಾಲಹಳ್ಳಿ, ರಮೇಶ ಕಿಟ್ಟದ, ಶಂಕರ ಚ್ವಾಕಾ, ಸೋಮಶೇಖರ ಮಾಕಪನೊರ, ಭೀಮರಾವ ರಾಠೋಡ ಸುಗೂರ, ಶರಣು ಸಿಗಿ ರಟಕಲ್ ಇದ್ದರು.

Follow Us:
Download App:
  • android
  • ios