'ಕೊಟ್ಟ ಮಾತಿನಂತೆ ನಿಗಮ ಸ್ಥಾಪಿಸಿದ ಬಿಜೆಪಿ'

ಭಾರತೀಯ ಜನತಾ ಪಕ್ಷವು ನಿಮ್ಮ ಜೊತೆಗೆ ಇದೆ. ನೀವೆಲ್ಲ ಬಿಜೆಪಿ ಜೊತೆಗಿರಿ ಎಂದ ವಿಜಯಪುರದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ.

Umesh Karjol Talks Over Karnataka BJP Government grg

ಮುಗಳಖೋಡ(ಫೆ.22): ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ಹಲವು ಸಮಾಜಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮವನ್ನು ಸ್ಥಾಪಿಸಿದೆ. ಭಾರತೀಯ ಜನತಾ ಪಕ್ಷವು ನಿಮ್ಮ ಜೊತೆಗೆ ಇದೆ. ನೀವೆಲ್ಲ ಬಿಜೆಪಿ ಜೊತೆಗಿರಿ ಎಂದು ವಿಜಯಪುರದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮಾತನಾಡಿದರು.

ಅವರು ಮುಗಳಖೋಡ ಪಟ್ಟಣದಲ್ಲಿ ಮಂಗಳವಾರ ಮಾಳಿ/ಮಾಲಗಾರ, ಗಾಣಿಗ, ಹಡಪದ ಹಾಗೂ ಹೂಗಾರ ಸಮಾಜಗಳಿಗೆ ನಿಗಮ ಸ್ಥಾಪನೆಗಳ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಅಭಿನಂದನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪುರಸಭೆ ಸದಸ್ಯ ಚೇತನ ಯಡವನ್ನವರ ಎಲೆಕ್ಟ್ರಿಕಲ್‌ ಶಾಪ್‌ದಿಂದ ಶ್ರೀಮಾಧವಾನಂದ ಜ್ಞಾನ ಯೋಗಾಶ್ರಮದವರಿಗೆ ವಿವಿಧ ಶರಣರ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಶ್ರೀಮಾಧವಾನಂದ ಆಶ್ರಮದಲ್ಲಿ ಅಭಿನಂದನ ಸಮಾರಂಭ ಜರುಗಿತು. ಮಾಳಿ/ಮಾಲಗಾರ ಸಮಾಜದ ನಿಯೋಗ ಅಧ್ಯಕ್ಷರು ಡಾ. ಸಿ.ಬಿ.ಕುಲಿಗೋಡ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ದಮ್ಮು, ತಾಕತ್ತಿದ್ರೆ ನನ್ನ ಹೊಡೆದು ಹಾಕಿ: ಸಿದ್ದು ಗುಡುಗು

ಸನ್ಮಾನ ಸ್ವೀಕರಿಸಿ ಸಭೆಯಲ್ಲಿ ಮಾತನಾಡಿದ ಡಾ.ಸಿ.ಬಿ.ಕುಲಿಗೋಡ ನಿಗಮ ಘೋಷಿಸಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಹಾಲಿ ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ, ಕನ್ನಡ ಅಭಿವೃದ್ಧಿ ನಿಗಮದ ಅಧ್ಯಕ್ಷರು ಶಾಸಕ ಪಿ.ರಾಜೀವ್‌, ರಾಜ್ಯ ಕೆಎಂಎಫ್‌ ಅಧ್ಯಕ್ಷರು ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಅನೇಕ ಶಾಸಕರು ಮತ್ತು ಸಂಸದರಿಗೆ ಅಭಿನಂದನೆ ಸಲ್ಲಿಸಿದರು.

ಮಾಳಿ/ಮಲಗಾರ ಸಮಾಜದ ನಿಯೋಗ ಅಧ್ಯಕ್ಷರು ಡಾ.ಸಿ.ಬಿ.ಕುಲಗೋಡ, ಕುಡಚಿ ಮತಕ್ಷೇತ್ರದ ಬಿಜೆಪಿ ಆಕಾಂಕ್ಷಿ ಉಮೇಶ ಕಾರಜೋಳ, ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡ, ಭಾರತಿ ಜನತಾ ಪಕ್ಷದ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಪುರಸಭೆಯ ಸದಸ್ಯರಾದ ರಮೇಶ ಯಡವನ್ನವರ, ಹಾಲಪ್ಪ ಶೇಗುಣಸಿ, ಚೇತನ ಯಡವಣ್ಣವರ, ಮಹಾಂತೇಶ ಯಾರಡೆತ್ತಿ, ರಾಜುಗೌಡ ನಾಯಿಕ, ಪರಶುರಾಮ ಕಡಕೋಳ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಪುತ್ರ ಉಮೇಶ ಕಾರಜೋಳ ಅವರು ಮಾಳಿ/ಮಾಲಗಾರ ಸಮಾಜದ ನಿಯೋಗ ಅಧ್ಯಕ್ಷರಾದ ಡಾ.ಸಿ.ಬಿ. ಕುಲಿಗೋಡ ಅವರಿಗೆ ಹೂಮಲೆ ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಗೋಪಾಲ ಯಡವನ್ನವರ, ಕೃಷ್ಣರಾವ ನಾಯಿಕ, ಶ್ರೀಶೈಲ ಗೋಕಾಕ, ಸಿದ್ದರಾಮ ನಾವಿ, ಶಿವಾನಂದ ಮೆಕ್ಕಳಕಿ, ಮಹಾದೇವ ಸಂಗಾನಟ್ಟಿ, ಸಚಿನ್‌ ಪ್ರಧಾನಿ, ಪರಪ್ಪ ಮುಗಳಖೋಡ, ಪರಪ್ಪ ಮುಗಳಖೋಡ, ಹನುಮಂತ ಕುಲಗೋಡ, ಮಲ್ಲಪ್ಪ ಯಡವನ್ನವರ, ಮಹಾದೇವ ತೇಲಿ, ಶಿವಪ್ಪ ಹಳ್ಳೂರ, ಲಕ್ಷ್ಮಣ ನಾವಿ, ಸಂಗಪ್ಪ ತೇಲಿ, ಗಂಗಪ್ಪ ಗೋಕಾಕ, ಅಗ್ರಾಣಿ ಶೇಗುಣಸಿ, ರಾಮಕೃಷ್ಣ ಕಂಬಾರ, ನಿಜುಗುಣಿ ಯಡವನ್ನವರ, ಕುಮಾರ ಶೇಡಿಶಾಳ, ಯಲ್ಲಾಲಿಂಗ ಮುಧೋಳ, ಶಿವಾನಂದ ವಿಜಯನಗರ, ರಾಜು ಮುಧೋಳ, ಶ್ರೀಶೈಲ ಮುಧೋಳ, ಲಕ್ಷ್ಮಣ ಗೋಕಾಕ, ಲಕ್ಷ್ಮಣ ನಾವಿ, ಶಿವಪುತ್ರ ನಾವಿ, ಅಣ್ಣಪ್ಪ ನಾವಿ, ಸಂಗಪ್ಪ ತೇಲಿ, ಭೀಮಪ್ಪ ತೇಲಿ, ಮಹಾದೇವ ತೇಲಿ, ಧರೆಪ್ಪ ತೇಲಿ, ಬಸಪ್ಪ ತೇಲಿ ಉಪಸ್ಥಿತರಿದ್ದರು. ಶಿಕ್ಷಕ ಬಸವರಾಜ್‌ ಅಡ್ವನವರ ನಿರೂಪಿಸಿ, ವಂದಿದಿಸಿದರು.

Latest Videos
Follow Us:
Download App:
  • android
  • ios