ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಇರಬಾರದು ಎಂದು ಸುಪ್ರೀಂಕೋರ್ಟ್‌ ಆದೇಶ ಇದೆ. ಆದರೆ, ಎಲ್ಲಾ ಕಾನೂನುಗಳಿಗೆ ತೂರಲಾಗಿದೆ. ಸರ್ಕಾರದಿಂದ ನ್ಯಾಯ ಪಡೆಯುವುದು ಕಷ್ಟವಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ: ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ 

ಬೆಂಗಳೂರು(ಆ.06):  ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಒಬ್ಬ ವ್ಯಕ್ತಿ ಮಾತ್ರವಲ್ಲ, ಎಲ್ಲರೂ ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ. 

ಶನಿವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು, ಸಚಿವರು ಹಸ್ತಕ್ಷೇಪ ಮಾಡಬಾರದು ಎಂದೇ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಬೋರ್ಡ್‌ ಸ್ಥಾಪನೆಯಾಗಿದೆ. ಒಮ್ಮೆ ಮಂಡಳಿಯಲ್ಲಿ ತೀರ್ಮಾನಿಸಿ ವರ್ಗಾವಣೆ ಮಾಡಿದರೆ ತಡೆಹಿಡಿಯಲು ಅವಕಾಶ ಇಲ್ಲ. ಆದರೆ, ಮಂಡಳಿಯಲ್ಲಿ ಕಾನೂನು ಮೀರಿ ಹಸ್ತಕ್ಷೇಪ ಮಾಡಲಾಗುತ್ತಿದೆ. ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆ ಹಿಡಿದು ಭಂಡತನ ತೋರುತ್ತಿರುವ ಸರ್ಕಾರದಿಂದಲೇ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ಕಿಡಿಕಾರಿದರು. 

ಸರ್ಕಾರಕ್ಕೆ ಒಳಗಿನಿಂದಲೇ ಏನೋ ಆಗುತ್ತಿರುವಂತಿದೆ: ಅಶ್ವತ್ಥನಾರಾಯಣ

ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಇರಬಾರದು ಎಂದು ಸುಪ್ರೀಂಕೋರ್ಟ್‌ ಆದೇಶ ಇದೆ. ಆದರೆ, ಎಲ್ಲಾ ಕಾನೂನುಗಳಿಗೆ ತೂರಲಾಗಿದೆ. ಸರ್ಕಾರದಿಂದ ನ್ಯಾಯ ಪಡೆಯುವುದು ಕಷ್ಟವಾಗಿದೆ. ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿದ ಅವರು, ಜೆಡಿಎಸ್‌ ಸಹ ಪ್ರತಿಪಕ್ಷವಾಗಿದ್ದು, ಜೆಡಿಎಸ್‌, ಬಿಜೆಪಿ ಜನರ ಧ್ವನಿಯಾಗಿವೆ. ನಾವು ಸಹ ಸರ್ಕಾರದ ಕಿವಿ ಹಿಂಡಿರುವ ಕೆಲಸ ಮಾಡುತೇವೆ ಎಂದರು.