* ನನ್ನ ಸ್ಪರ್ಧೆ ಬಗ್ಗೆ ವರಿ​ಷ್ಠರು ನಿರ್ಧರಿಸ್ತಾರೆ: ವಿಜ​ಯೇಂದ್ರ* ರಾಜ್ಯ ಬಿಜೆ​ಪಿ ರಾಜ್ಯ ಉಪಾ​ಧ್ಯಕ್ಷ ಬಿ.ವೈ.ವಿ​ಜ​ಯೇಂದ್ರ* ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಬಂದಿದ್ದವು

ಕುದೂರು(ಫೆ. 16) ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ(Karnataka Assebly Election) ನಾನು ಸ್ಪರ್ಧಿಸಬೇಕೊ ಬೇಡವೊ, ಸ್ಪರ್ಧಿಸುವುದಾದರೆ ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷದ ಹೈಕಮಾಂಡ್‌ ನಿರ್ಧ​ರಿ​ಸು​ತ್ತದೆ ಎಂದು ಬಿಜೆ​ಪಿ ರಾಜ್ಯ ಉಪಾ​ಧ್ಯಕ್ಷ ಬಿ.ವೈ.ವಿ​ಜ​ಯೇಂದ್ರ (BY Vijayendra)ತಿಳಿಸಿದ್ದಾರೆ.

ರಾಮನಗರ (Ramanagara) ಜಿಲ್ಲೆಯ ಕುದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತ​ನಾ​ಡಿದ ಅವರು, ಚುನಾ​ವ​ಣೆ​ಯಲ್ಲಿ ಶಿಕಾರಿಪುರವೋ (Shikaripura)ಅಥವಾ ಮೈಸೂರಿನ (Mysuru) ವರುಣಾ ಕ್ಷೇತ್ರವೋ ಎಂಬುದು ನನಗೆ ಗೊತ್ತಿಲ್ಲ. ಹೊಸ​ಪೇ​ಟೆಗೆ (Hospet)ಹೋಗು​ತ್ತೇನೆ ಎಂದು ಪತ್ರಿ​ಕೆ​ಯಲ್ಲಿ ಬಂದಿದೆ ಎಂದರು. ಮಾಗಡಿಯ (Magadi) ಕಡೆಗೆ ನಿಮಗೆ ಹೆಚ್ಚು ಒಲವಿದೆ ಎಂದು ಕೇಳಿಬ​ರು​ತ್ತಿ​ದೆ​ಯಲ್ಲ ಎಂಬ ಪ್ರಶ್ನೆಗೆ ಈಗಾಗಲೇ ಬಳ್ಳಾರಿಯ ಹೊಸಪೇಟೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಪುಕಾರು ಹುಟ್ಟಿಸಿದ್ದಾರೆ. ಅದರಂತೆ ಇದೂ ಕೂಡಾ ಆಗುವುದು ಬೇಡ. ಎಲ್ಲವೂ ಹೈಕಮಾಂಡ್‌ ತೀರ್ಮಾನದ ಮೇಲೆ ನಿಂತಿದೆ ಎಂದು ಹೇಳಿದರು.

ಮಾಹಿತಿಯೇ ಇಲ್ಲ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು.

6 ಬಾರಿ ಗೆದ್ದವರನ್ನು ಅಧಿಕಾರದಿಂದ ಇಳಿಸಲು ಆಗುತ್ತಾ? ಹೀಗೆ ದೇವೇಗೌಡ್ರು ಹೇಳಿದ್ಯಾರಿಗೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನ ನೀಡುವ ಸಾಧ್ಯತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಮಾಜಿ ಸಿಎಂ ಉತ್ತರಿಸಿದ್ದರು. 

ಈ ಬಗ್ಗೆ ಸಿಎಂ ಅವರನ್ನು ಕೇಳಬೇಕು. ನನಗೆ ಗೊತ್ತಿರುವಂತೆ ಇದುವರೆಗೆ ಸಚಿವ ಸಂಪುಟ ವಿಸ್ತರಣೆಯ ಯಾವುದೇ ಸುದ್ದಿಗಳು ಇಲ್ಲ. ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅದು ಹೈಕಮಾಂಡ್‌ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಟ್ಟವಿಚಾರ ಎಂದರು. ಇನ್ನು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ಪರಿಷತ್‌ನಲ್ಲೂ (Council) ನಮಗೆ ಬಹುಮತ ಸಿಗುತ್ತದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದೇ ತರುತ್ತೇವೆ ಎಂದರು.

ಭವಾನಿ ಸ್ಪರ್ಧೆ ಪರೋಕ್ಷ ಅಲ್ಲಗಳೆದ ಕುಮಾರಸ್ವಾಮಿ: 
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಮ್ಮ ಕುಟುಂಬದಿಂದ ಯಾವ ಸದಸ್ಯರು ಸ್ಪರ್ಧಿಯಾಗಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಯಾವ ತಾಲೂಕಿನ ಬಗ್ಗೆಯೂ ಹೆಚ್ಚು ಗಮನ ಕೊಡುವುದಿಲ್ಲ, ಆದರೆ ಹಾಸನ ವಿಧಾನಸಭೆ ಕ್ಷೇತ್ರದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತೇನೆ. ಇನ್ನು ಒಂದೂವರೆ ತಿಂಗಳಲ್ಲಿ ಆಕಾಂಕ್ಷಿಗಳ ಮೊದಲ ಪಟ್ಟಿಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು.

 ಹಾಸನ ವಿಧಾನಸಭಾ ಕ್ಷೇತ್ರದ ಬಗ್ಗೆ ನಾನು ಯಾವತ್ತೂ ಮೂಗು ತೂರಿಸಿದವನಲ್ಲ. ಆದರೆ, ಈ ಬಾರಿ ಹಾಸನ ಕ್ಷೇತ್ರಕ್ಕೆ ನಮ್ಮ ಕುಟುಂಬದಿಂದ ಎಚ್‌.ಡಿ.ರೇವಣ್ಣ ಅಥವಾ ಅವರ ಪತ್ನಿ ಭವಾನಿ ರೇವಣ್ಣ ಸ್ಪರ್ಧಿಸುತ್ತಾರೆ ಎನ್ನುವ ಚರ್ಚೆಯೆಲ್ಲಾ ಊಹಾಪೋಹ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ದಿವಂಗತ ಎಚ್‌.ಎಸ್‌.ಪ್ರಕಾಶ್‌ ಇರುವವರೆಗೆ ಈ ಸಮಸ್ಯೆ ಇರಲಿಲ್ಲ. ಹಾಗಾಗಿ ಸ್ಥಳೀಯ ನಾಯಕರನ್ನು ಪರಿಗಣಿಸಿಯೇ ಪಟ್ಟಿ ಘೋಷಣೆ ಮಾಡುವುದಾಗಿ ತಿಳಿಸಿದರು.