ಗ್ಯಾರಂಟಿ ಯೋಜನೆ ಬಗ್ಗೆ ಟೀಕಿಸಿದವರು ಈಗ ಗಪ್‌ಚುಪ್‌: ಸಚಿವ ಡಿ.ಸುಧಾಕರ್‌

ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರು ಇದೀಗ ಅವುಗಳ ಸಾರ್ಥಕತೆ ಕಂಡು ಬಾಯಿಮುಚ್ಚಿಕೊಂಡು ಸುಮ್ಮನಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. 

Those who criticized the guarantee scheme are now Silent Says Minister D Sudhakar gvd

ಹಿರಿಯೂರು (ಜೂ.15): ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದವರು ಇದೀಗ ಅವುಗಳ ಸಾರ್ಥಕತೆ ಕಂಡು ಬಾಯಿಮುಚ್ಚಿಕೊಂಡು ಸುಮ್ಮನಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್‌ ಹೇಳಿದರು. ನಗರದ ವೇದಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕ್ರೀಡೆ, ಸಾಂಸ್ಕೃತಿಕ,ರಾಷ್ಟ್ರೀಯ ಸೇವಾ ಯೋಜನೆ, ಯೂತ್‌ ರೆಡ್‌ಕ್ರಾಸ್‌, ರೋವರ್ಸ ಮತ್ತು ರೇಂಜರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀಮಾನ್ಯರ ಆಶೋತ್ತರಗಳ ಈಡೇರಿಸಲು ರಾಜ್ಯ ಸರ್ಕಾರ ಬದ್ಧವಿದೆ ಎಂದರು. ಜನ ನಮ್ಮನ್ನು ನಂಬಿ ಅಭೂತಪೂರ್ವ ಗೆಲುವು ತಂದು ಕೊಟ್ಟಿದ್ದಾರೆ. 

ಅವರ ಮೂಲಭೂತ ಸೌಲಭ್ಯಗಳ ಸಾಕಾರಕ್ಕೆ ನಾವೆಲ್ಲಾ ಕಟಿಬದ್ಧರಾಗಿ ಕೆಲಸ ಮಾಡುತ್ತೇವೆ. ಮತ ಪಡೆಯಲು ನಾವು ಗ್ಯಾರಂಟಿ ಯೋಜನೆಗಳ ಘೋಷಿಸಿಲ್ಲ. ಬದಲಾಗಿ ಅಭಿವೃದ್ಧಿ ಮಾನದಂಡ, ಹಿಂದುಳಿದವರು, ಶೋಷಿತರು, ಬಡವರ ಏಳಿಗೆ ಪ್ರಧಾನವಾಗಿರಿಸಿಕೊಂಡು ಮುಂದುವರಿಯಲಾಗಿದೆ ಎಂದರು. ವೇದಾವತಿ ಕಾಲೇಜುಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯವನ್ನೂ ಒದಗಿಸಲಾಗಿದೆ. ಆದರೂ ಸಹ ನಿರೀಕ್ಷಿತ ಮಟ್ಟದ ಫಲಿತಾಂಶ ಬರುತ್ತಿಲ್ಲ. ಬರುವ ದಿನಗಳಲ್ಲಿ ಈ ರೀತಿಯ ಫಲಿತಾಂಶ ಬರಬಾರದು. ಓದುವ ಮತ್ತು ಕಲಿಸುವ ಮೂಲ ಉದ್ದೇಶವನ್ನೇ ಮರೆಯಬಾರದು. 

ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಲು ಕ್ರಮ ಕೈಗೊಳ್ಳಿ: ಸಚಿವ ಸತೀಶ್‌ ಜಾರಕಿಹೊಳಿ

ಕಠಿಣ ಪರಿಶ್ರಮ ಪಡುವವರ ತಲೆ ಮೇಲೆ ದೇವರ ಕೈ ಇರುತ್ತದೆ. ಹಾಗಾಗಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ. ಪರೀಕ್ಷೆಯ ಫಲಿತಾಂಶದ ವಿಚಾರದಲ್ಲಿ ಭೋಧಕ ವರ್ಗವನ್ನೇ ಹೊಣೆ ಮಾಡಲಾಗುವುದು ಎಂದರು. 2008ರಲ್ಲಿ ನಾನು ಶಾಸಕನಾಗಿ ಬಂದಾಗ ಈ ಕಾಲೇಜು ಮುಚ್ಚುವ ಪರಿಸ್ಥಿತಿಯಲ್ಲಿತ್ತು. ಆಗ ಕಾಲೇಜಿನ ಬೆಳವಣಿಗೆಗೆ ಎಲ್ಲಾ ರೀತಿಯ ಸಹಕಾರ ನೀಡಿ, ಯುಜಿಸಿ ಸ್ಕೇಲ…ಗೆ ತಂದು ನಿಲ್ಲಿಸಲಾಯಿತು. ವಿದ್ಯಾರ್ಥಿಗಳು ಈಗ ಕಷ್ಟಪಡದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ. ನಮ್ಮ ಮುಂದೆ ಬಹಳಷ್ಟುಜವಾಬ್ದಾರಿಗಳಿದ್ದು ಇದೇ ವರ್ಷ ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಪ್ರಾರಂಭ ಮಾಡಲಿದ್ದೇವೆ ಎಂದರು. ಪರಿಪೂರ್ಣವಾಗಿ ಅಪ್ಪರ್‌ ಭದ್ರಾ ನೀರನ್ನು ಬಳಸಿಕೊಳ್ಳುವಂತಾಗಬೇಕು. 

ಬಿಟ್ಟಿ ಯೋಜನೆಗೆ ಹಣಕಾಸನ್ನು ಹೇಗೆ ಹೊಂದಿಸ್ತೀರಿ?: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಗುರಿ ಹೊಂದಿದ್ದು, ಹಂತ ಹಂತವಾಗಿ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಶ್ರಮಿಸಲಾಗುವುದು. ಇನ್ನು ಐದು ವರ್ಷ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ಧಿಗೆ ತೆರೆದಿಡಲಾಗುವುದೆಂದು ಸುಧಾಕರ್‌ ಹೇಳಿದರು. ವೇದಾವತಿ ಕಾಲೇಜಿನ ಪ್ರಾಚಾರ್ಯ ಪ್ರೊ.ಹನುಮಂತರಾಯ, ವಾಣಿ ಕಾಲೇಜಿನ ಪ್ರಾಚಾರ್ಯ ಡಾ.ಆರ್‌ ಮಹೇಶ್‌, ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಚಾಲಕ ಪ್ರಸನ್ನಕುಮಾರ್‌, ಚೈತ್ರಾ ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ನಗರಸಭೆ ಮಾಜಿ ಸದಸ್ಯ ಪ್ರೇಮ ಕುಮಾರ್‌, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಫಕೃದ್ದೀನ್‌ ಹಾಜರಿದ್ದರು.

Latest Videos
Follow Us:
Download App:
  • android
  • ios