ಇದು ಆರೋಪ ಮಾಡುವ ಟೈಮಲ್ಲ: ಸಿದ್ದುಗೆ ಎಚ್‌ಡಿಕೆ ಟಾಂಗ್
ಇದು ಆರೋಪ ಮಾಡುವ ಟೈಮಲ್ಲ| ಸಿದ್ದುಗೆ ಎಚ್‌ಡಿಕೆ ಟಾಂಗ್| ಕೊರೋನಾ ನಿಯಂತ್ರಣಕ್ಕೆ ಒಗ್ಗೂಡಿ ಕೆಲಸ ಮಾಡಬೇಕು
ಬೆಂಗಳೂರು(ಜು.10): ಈಗ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುವ ಸಮಯವಲ್ಲ. ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪರೋಕ್ಷವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
"
ಅಲ್ಲದೆ, ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಹುಡುಗಾಟದ ತೀರ್ಮಾನಗಳನ್ನು ಬಿಟ್ಟು ಲೋಪಗಳನ್ನು ತಿದ್ದಿಕೊಂಡು ಕೆಲಸ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲಹೆಯನ್ನೂ ನೀಡಿದ್ದಾರೆ.
ಕೊರೋನಾ ಸೋಂಕಿತ ಶವಕ್ಕೆ ಸಂಸ್ಕಾರ ನೆರವೇರಿಸುವ ಆಶಾಗೆ ಕುಮಾರಸ್ವಾಮಿ ಮೆಚ್ಚುಗೆ
ಈ ಸಂಬಂಧ ಗುರುವಾರ ಮಾಧ್ಯಮಗಳಿಗೆ ವಿಡಿಯೋ ಪತ್ರಿಕಾ ಹೇಳಿಕೆ ನೀಡಿರುವ ಕುಮಾರಸ್ವಾಮಿ, ‘ಕೋವಿಡ್ ನಿರ್ವಹಣೆ ವಿಷಯದಲ್ಲಿ ಹಣ ದುರುಪಯೋಗವಾಗಿದೆ ಎಂದು ಸರ್ಕಾರದ ವಿರುದ್ಧ ಆರೋಪ ಬಂದಿದೆ. ಈಗ ಆರೋಪಗಳನ್ನು ಮಾಡುವ ಸಮಯವಲ್ಲ. ಈ ರೀತಿ ಆರೋಪಗಳು ಮರುಕಳಿಸದಂತೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಮುಖ್ಯಮಂತ್ರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೋವಿಡ್ ಸಂಬಂಧಿಸಿದ ಸರ್ಕಾರ ರಚಿಸಿರುವ ಸಮಿತಿಗಳಲ್ಲಿ ಕಾಂಗ್ರೆಸ್ ನಾಯಕರನ್ನು ಸೇರಿಸಿಕೊಂಡು ಸರ್ಕಾರ ಪಾರದರ್ಶಕತೆ ತರಬೇಕಿದೆ. ಸರ್ಕಾರದ ವಿರುದ್ಧ ಜೆಡಿಎಸ್ ಯಾವುದೇ ಆರೋಪ ಮಾಡುವುದಿಲ್ಲ. ನಮಗೆ ಜನರ ಜೀವ ಮುಖ್ಯವಾಗಿದೆ. ವಿಪಕ್ಷದ ನಾಯಕರಿಗೆ ಖರ್ಚು ವೆಚ್ಚದ ಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಕೋವಿಡ್ ನಿರ್ವಹಣೆಗೆ ಎಂಟು ವಲಯಗಳಿಗೆ ಮಂತ್ರಿಗಳ ನೇಮಕವು ಕಾಟಾಚಾರಕ್ಕೆ ಸಿಮೀತವಾಗಬಾರದು. ಸಚಿವರ ನಡುವೆ ಸಮನ್ವಯತೆ ತರಬೇಕು. ಪ್ರತಿ ದಿನ ಸಚಿವರಿಗೆ ಜವಾಬ್ದಾರಿ ಬದಲಾವಣೆಯೂ ಮುಂದಿನ ದಿನಗಳಲ್ಲಿ ವಿಷಮ ಪರಿಸ್ಥಿತಿ ಕಾರಣವಾಗಲಿದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಎಚ್‌ಡಿಕೆ ಆಪ್ತ ಸಹಾಯಕ ಆಯ್ತು, ಇದೀಗ ಮತ್ತೋರ್ವ ಶಾಸಕನ ಗನ್‍ಮ್ಯಾನ್‍ಗೂ ಕೊರೋನಾ
ಕೋವಿಡ್ ಕೇಂದ್ರಕ್ಕೆ ಪ್ರತಿ ದಿನ 70 ಲಕ್ಷ ಬಾಡಿಗೆ:
ಬೆಂಗಳೂರು ವಸ್ತು ಪ್ರದರ್ಶನ ಕೇಂದ್ರದ ಕೋವಿಡ್ ಕೇರ್ ಸೆಂಟರ್‌ಗೆ ಪ್ರತಿ ದಿನ 70 ಲಕ್ಷ ಬಾಡಿಗೆ ಪಡೆದು 10 ಸಾವಿರ ಬೆಡ್‌ಗಳ ಕೋವಿಡ್ ಸೆಂಟರ್ ಸ್ಥಾಪಿಸಲಾಗಿದೆ. ಈ ಕೇಂದ್ರಕ್ಕೆ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ವೈದ್ಯರು ಹಾಗೂ ನರ್ಸ್‌ಗಳನ್ನು ಎಲ್ಲಿಂದ ನಿಯೋಜಿಸಲಾಗುತ್ತದೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.